Homeರಾಜ್ಯಅಂತಾರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿದ ನಕಲಿ ಔಷಧಿ ಜಾಲ..!

ಅಂತಾರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿದ ನಕಲಿ ಔಷಧಿ ಜಾಲ..!

ಬೆಂಗಳೂರು,ಸೆ.13- ನಕಲಿ ಔಷಧ ಜಾಲ ಅಂತಾರಾಷ್ಟ್ರೀಯ ಮಟ್ಟದವರಿಗೆ ವ್ಯಾಪಿಸಿದೆ ಎಂದು ಎಸ್‌‍ಐಟಿ ತನಿಖೆಯಿಂದ ತಿಳಿದು ಬಂದಿದೆ.ಈ ದಂಧೆಯ ಪ್ರಮುಖ ಆರೋಪಿಗಳು ಟರ್ಕಿಯಿಂದ ನಕಲಿ ಲೇಬಲ್‌ಗಳನ್ನು ತರಿಸಿ ನೂರಕ್ಕೂ ಹೆಚ್ಚು ಔಷಧಿಗಳನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ಇತ್ತೀಚೆಗೆ ಎಸ್‌‍ಐಟಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ದಾಳಿ ನಡೆಸಿತು. ಈ ಸಂದರ್ಭದಲ್ಲಿ ನಗರದ ಮಿರ್ನವ ವೃತ್ತದಲ್ಲಿನ ಕೃಪಾ ಹೆಲ್ತ್‌ ಕೇರ್‌ನ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ ಅಪಾರ ಪ್ರಮಾಣದ ನಕಲಿ ಔಷಧಿಗಳು ಮತ್ತು ನಕಲಿ ಬಿಲ್‌ಗಳು ಪತ್ತೆಯಾಗಿದ್ದವು.

ಇಲ್ಲಿಂದ ಸುಮಾರು ನೂರಕ್ಕೂ ಹೆಚ್ಚು ಮೆಡಿಕಲ್‌ ಸ್ಟೋರ್‌ ಮತ್ತು ಆಸ್ಪತ್ರೆಗಳಿಗೆ ನಕಲಿ ಔಷಧಿಗಳು ಸರಬರಾಜು ಆಗಿರುವುದು ಸಹ ಕಂಡು ಬಂದಿತು.ಈ ಹಿನ್ನಲೆಯಲ್ಲಿ ಅದರ ಮಾಲೀಕ ವೀರೇಶ್‌ಕುಮಾರ್‌ ನನ್ನು ಎಸ್‌‍ಐಟಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮತ್ತಷ್ಟು ಈ ಸ್ಪೋಟಕ ಮಾಹಿತಿಗಳು ಹೊರ ಬಿದ್ದಿವೆ.

ಆರೋಪಿಗಳು ಕ್ಯಾನ್ಸರ್‌ ಔಷಧಿಗಳನ್ನು ವಿದೇಶಗಳಿಗೆ ಅಕ್ರಮವಾಗಿ ಕಳುಹಿಸುತ್ತಿದ್ದರು ಎಂಬುವುದು ಸಹ ತನಿಖೆಯಿಂದ ಕಂಡು ಬಂದಿದೆ.ಆರೋಪಿ ವೀರೇಶ್‌ ಕುಮಾರ್‌ ಮೂಲತಃ ರಾಜಸ್ಥಾನದವರಾಗಿದ್ದು, ದಶಕಗಳ ಹಿಂದೆಯೇ ನಗರಕ್ಕೆ ಕೆಲಸ ಹುಡಿಕಿಕೊಂಡು ಬಂದು ತನ್ನ ಸಂಬಂಧಿಗೆ ಸೇರಿದ ಔಷಧಿ ಮಾರಾಟ ಏಜೆನ್ಸಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಆರಂಭಿಸಿದ.

ನಂತರ ಔಷಧಿ ವ್ಯಾಪಾರದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಂಡು ಕೊನೆಗೆ ಸ್ವತಃ ಕೃಪಾ ಹೆಲ್ತ್‌ಕೇರ್‌ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಂಸ್ಥೆ ಆರಂಭಿಸಿ ಔಷಧ ಮಾರಾಟವನ್ನು ಪ್ರಾರಂಭಿಸಿದ. ಈ ಸಂದರ್ಭದಲ್ಲಿ ನಕಲಿ ಔಷಧಿ ಮಾರಾಟ ಜಾಲದ ಪ್ರಮುಖ ಆರೋಪಿ ಪ್ರಶಾಂತ್‌ ಪರಿಚಯವಾಗಿದ್ದು, ಇಬ್ಬರು ಸೇರಿ ಈ ದಂಧೆಯನ್ನು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

RELATED ARTICLES
spot_img

Latest News