Homeರಾಜ್ಯಸಾರಿಗೆ ಸೇವೆಗೆ ಡಿಜಿಟಲ್‌ ಸ್ಪರ್ಶ : ಕೌಂಟರ್‌ನಿಂದ ಮೊಬೈಲ್‌ ತಲುಪಿದ ಟಿಕೆಟ್‌ ಸೇವೆ

ಸಾರಿಗೆ ಸೇವೆಗೆ ಡಿಜಿಟಲ್‌ ಸ್ಪರ್ಶ : ಕೌಂಟರ್‌ನಿಂದ ಮೊಬೈಲ್‌ ತಲುಪಿದ ಟಿಕೆಟ್‌ ಸೇವೆ

ಟಿಕೆಟ್‌ ಕಾಯ್ದಿರಿಸುವುದರಿಂದ ರದ್ದತಿಯವರೆಗೆ ಹಲವು ಸೇವೆಗಳು ಈಗ ಒಂದೇ ವೇದಿಕೆಯಲ್ಲಿ ಲಭ್ಯವಾಗಲಿದೆ. ಅದರಲ್ಲೂ ವಾಟ್ಸಾಪ್‌ನಲ್ಲೇ ಬಸ್‌‍ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯದಿಂದ ಕೆಎಸ್‌‍ಆರ್‌ಟಿಸಿ ಸೇವೆ ಪ್ರಯಾಣಿಕರ ಕೈಬೆರಳ ತುದಿಗೆ ಬಂದಿದೆ.

ಸಾರಿಗೆ ಸೇವೆ ಪಡೆಯಲು ಇನ್ನು ಮುಂದೆ ಕೌಂಟರ್‌ಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಕ್ರಮೇಣ ಕಡಿಮೆಯಾಗುತ್ತಿದೆ. ಮೊಬೈಲ್‌ನಲ್ಲೇ ಟಿಕೆಟ್‌ ಬುಕ್‌ ಮಾಡುವುದು, ಪಾವತಿ ಮಾಡುವುದು, ಇ-ಟಿಕೆಟ್‌ ಪಡೆಯುವುದು, ಅಗತ್ಯವಿದ್ದರೆ ಟಿಕೆಟ್‌ ರದ್ದುಪಡಿಸುವುದು ಇವೆಲ್ಲವೂ ಡಿಜಿಟಲ್‌ ಮೂಲಕವೇ ಸಾಧ್ಯವಾಗುತ್ತಿದೆ.

ಸಾರಿಗೆ ಸೇವೆ ಜನರ ಬಳಿಗೆ ಹೋಗುವುದಲ್ಲ. ಈಗ ಸಾರಿಗೆ ಸೇವೆಯೇ ಜನರ ಮೊಬೈಲ್‌ಗೆ ಬರುತ್ತಿದೆ ಎಂಬ ಹೊಸ ಪರಿಕಲ್ಪನೆಯೊಂದಿಗೆ ಕರ್ನಾಟಕವು ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಸರಳ ಮತ್ತು ಪ್ರಯಾಣಿಕ ಸ್ನೇಹಿಯಾಗಿಸುವತ್ತ ಹೆಜ್ಜೆ ಇಡುತ್ತಿದೆ.

ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌‍ಆರ್‌ಟಿಸಿ) ವಾಟ್ಸಾಪ್ ಆಧಾರಿತ ಮುಂಗಡ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಜನರು ಪ್ರತಿದಿನ ಬಳಸುವ ವಾಟ್‌್ಸಆ?ಯಪ್‌ ವೇದಿಕೆಯಲ್ಲೇ ಬಸ್‌‍ ಟಿಕೆಟ್‌ ಕಾಯ್ದಿರಿಸುವ ಅವಕಾಶ ದೊರೆಯುವುದರಿಂದ, ಸಾರ್ವಜನಿಕ ಸಾರಿಗೆ ಸೇವೆ ಮತ್ತಷ್ಟು ಸುಲಭವಾಗಿ ಜನರ ಕೈಗೆ ತಲುಪಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌‍ಆರ್‌ಟಿಸಿ) ವಾಟ್ಸಾಪ್‌ ಆಧಾರಿತ ಮುಂಗಡ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಜನರು ಪ್ರತಿದಿನ ಬಳಸುವ ವಾಟ್ಸಾಪ್‌ ವೇದಿಕೆಯಲ್ಲೇ ಬಸ್‌‍ ಟಿಕೆಟ್‌ ಕಾಯ್ದಿರಿಸುವ ಅವಕಾಶ ದೊರೆಯುವುದರಿಂದ, ಸಾರ್ವಜನಿಕ ಸಾರಿಗೆ ಸೇವೆ ಮತ್ತಷ್ಟು ಸುಲಭವಾಗಿ ಜನರ ಕೈಗೆ ತಲುಪಲಿದೆ.

ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸಮಗ್ರಗೊಳಿಸುವ ಉದ್ದೇಶದಿಂದ ಒಂದು ಕರ್ನಾಟಕ ಮೊಬಿಲಿಟಿ ಆಪ್‌ ಅಭಿವೃದ್ಧಿಪಡಿಸಲಾಗಿದೆ. ಈ ವೇದಿಕೆಯಲ್ಲಿ ರಾಜ್ಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌‍ಆರ್‌ಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ನಾಲ್ಕು ಪ್ರಮುಖ ಸಾರಿಗೆ ಸಂಸ್ಥೆಗಳನ್ನು ಒಗ್ಗೂಡಿಸುವ ವ್ಯವಸ್ಥೆ ರೂಪಿಸಲಾಗಿದೆ.

30 ದಿನಗಳ ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸಿ
ಪ್ರಯಾಣಿಕರು ತಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಲು 30 ದಿನಗಳ ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸುವ ಅವಕಾಶವಿದೆ. ದೂರದ ಪ್ರಯಾಣ, ಕುಟುಂಬದೊಂದಿಗೆ ಪ್ರವಾಸ, ಹಬ್ಬ-ಹರಿದಿನಗಳ ಪ್ರಯಾಣ ಅಥವಾ ಮುಂಚಿತ ಯೋಜನೆ ಅಗತ್ಯವಿರುವ ಸಂದರ್ಭಗಳಲ್ಲಿ ಈ ಸೌಲಭ್ಯ ಹೆಚ್ಚು ಅನುಕೂಲಕರವಾಗಲಿದೆ.

ಟಿಕೆಟ್‌ ಬುಕ್ಕಿಂಗ್‌ ಸಂದರ್ಭದಲ್ಲಿ ಯುಪಿಐ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಹಾಗೂ ವಾಲೆಟ್‌ ಸೇರಿದಂತೆ ವಿವಿಧ ಡಿಜಿಟಲ್‌ ಪಾವತಿ ವಿಧಾನಗಳನ್ನು ಬಳಸಬಹುದು. ಪಾವತಿ ಯಶಸ್ವಿಯಾದ ನಂತರ ಬುಕ್ಕಿಂಗ್‌ ದೃಢೀಕರಣ ಮತ್ತು ಇ-ಟಿಕೆಟ್‌ ಅನ್ನು ವಾಟ್‌್ಸಆ?ಯಪ್‌ ಹಾಗೂ ಇ-ಮೇಲ್‌ ಮೂಲಕ ಪ್ರಯಾಣಿಕರಿಗೆ ಕಳುಹಿಸಲಾಗುತ್ತದೆ.

ಟಿಕೆಟ್‌ ಬುಕ್‌ ಮಾಡಿದ ನಂತರ ಪ್ರಯಾಣ ರದ್ದುಪಡಿಸುವ ಪರಿಸ್ಥಿತಿ ಬಂದರೂ ಕೌಂಟರ್‌ಗೆ ತೆರಳಬೇಕಾಗಿಲ್ಲ. ವಾಟ್ಸಾಪ್‌ ಮೂಲಕ ಬುಕ್‌ ಮಾಡಿರುವ ಟಿಕೆಟ್‌ನ್ನು ಅದೇ ಸಂಖ್ಯೆಯ ಮೂಲಕ ರದ್ದುಪಡಿಸಬಹುದು. ಇದಕ್ಕಾಗಿ ವಾಟ್ಸಾಪ್‌ ಟಿಕೆಟ್‌ ಕ್ಯಾನ್ಸಲೇಷನ್‌ ಆಯ್ಕೆಯನ್ನು ಆರಿಸಿ, ಪಿಎನ್‌ಆರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ ಮತ್ತು ಬುಕ್ಕಿಂಗ್‌ ಸಂದರ್ಭದಲ್ಲಿ ಪಡೆದ ಟ್ರಾನ್ಸಕ್ಷನ್‌ ಪಾಸವರ್ಡ್‌ ಅನ್ನು ನಮೂದಿಸಿ ರದ್ದತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಒಂದು ಕರ್ನಾಟಕ ಮೊಬಿಲಿಟಿ ಆಪ್‌ನ ಮತ್ತೊಂದು ಪ್ರಮುಖ ಸೌಲಭ್ಯವೆಂದರೆ ದೂರು ನಿರ್ವಹಣೆ. ಕೆಎಸ್‌‍ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಬಹುದು.

ಸಾರ್ವಜನಿಕ ಸಾರಿಗೆಯ ಡಿಜಿಟಲೀಕರಣವು ಟಿಕೆಟ್‌ ಬುಕ್ಕಿಂಗ್‌ನಲ್ಲೇ ನಿಲ್ಲುವುದಿಲ್ಲ. ಮುಂದಿನ ಹಂತದಲ್ಲಿ ಡಿಜಿಟಲ್‌ ಮಾಸಿಕ ಬಸ್‌‍ ಪಾಸ್‌‍ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಬಸ್‌‍ ಪಾಸ್‌‍ ಬುಕ್ಕಿಂಗ್‌, ವಿತರಣೆ ಮತ್ತು ನಿರ್ವಹಣೆ ಮಾಡುವ ವ್ಯವಸ್ಥೆ ರೂಪುಗೊಳ್ಳಲಿದ್ದು, ಕಿಖ ಕೋಡ್‌ ಆಧಾರಿತ ಡಿಜಿಟಲ್‌ ಪರಿಶೀಲನೆಗೂ ಅವಕಾಶ ಕಲ್ಪಿಸುವ ಉದ್ದೇಶವಿದೆ.
-ಭಾಗ್ಯ ಎಂ.
ಮುಖ್ಯ ವರದಿಗಾರರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ವಾಟ್ಸಾಪ್‌ ಟಿಕೆಟ್‌ ಬುಕ್ಕಿಂಗ್‌
ಪ್ರಯಾಣಿಕರು ಮುಂಗಡವಾಗಿ ಬಸ್‌‍ ಟಿಕೆಟ್‌ ಕಾಯ್ದಿರಿಸಲು ಕೆಎಸ್‌‍ಆರ್‌ಟಿಸಿಯ ಅವಾತರ್‌- ಅಡ್ವಾನ್ಸಡ್‌ ವೆಬ್‌ , ಆಂಡ್ರೈಡ್‌ ಟಿಕೆಟಿಂಗ್‌ ಅಂಡ್‌ ರಿಸೆರ್ವೆಷನ್‌ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆಯನ್ನು ಬಳಸಬಹುದಾಗಿದೆ. ಈಗಾಗಲೇ ಆನ್‌ಲೈನ್‌, ಮೊಬೈಲ್‌ ಹಾಗೂ ಮುಂಗಡ ಟಿಕೆಟ್‌ ಕಾಯ್ದಿರಿಸುವ ಕೌಂಟರ್‌ಗಳ ಮೂಲಕ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ ಲಭ್ಯವಿದೆ. ಇದರ ಮುಂದುವರಿದ ಭಾಗವಾಗಿ ವಾಟ್ಸಾಪ್‌ ಮೂಲಕವೂ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ ಒದಗಿಸಲಾಗುತ್ತಿದೆ.

ಹೊಸ ಡಿಜಿಟಲ್‌ ಪಯಣ
ಸಾರ್ವಜನಿಕ ಸಾರಿಗೆಯ ಯಶಸ್ಸು ಕೇವಲ ಬಸ್‌‍ಗಳ ಸಂಖ್ಯೆ ಅಥವಾ ಮಾರ್ಗಗಳ ವಿಸ್ತರಣೆಯಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಪ್ರಯಾಣಿಕರಿಗೆ ಸೇವೆ ಎಷ್ಟು ಸುಲಭ, ವೇಗ, ವಿಶ್ವಾಸಾರ್ಹ ಮತ್ತು ಪಾರದರ್ಶಕವಾಗಿ ದೊರೆಯುತ್ತದೆ ಎಂಬುದೂ ಅಷ್ಟೇ ಮುಖ್ಯ. ಪ್ರತಿದಿನ ಮೊಬೈಲ್‌ ಮತ್ತು ಡಿಜಿಟಲ್‌ ಸೇವೆಗಳನ್ನು ಬಳಸುವ ಜನರಿಗೆ ಪರಿಚಿತವಾಗಿರುವ ವಾಟ್ಸಾಪ್‌ನಲ್ಲೇ ಟಿಕೆಟ್‌ ಬುಕ್ಕಿಂಗ್‌ ಸೌಲಭ್ಯ ಕಲ್ಪಿಸುವುದು ಈ ಬದಲಾವಣೆಯ ಪ್ರಮುಖ ಹೆಜ್ಜೆಯಾಗಿದೆ.

ಕೌಂಟರ್‌ಗೆ ಹೋಗುವ ಸಮಯವನ್ನು ಉಳಿಸುವುದು, ಪ್ರಯಾಣವನ್ನು ಮುಂಚಿತವಾಗಿ ಯೋಜಿಸಲು ನೆರವಾಗುವುದು, ಡಿಜಿಟಲ್‌ ಪಾವತಿಗೆ ಅವಕಾಶ ನೀಡುವುದು, ಇ-ಟಿಕೆಟ್‌ ನೇರವಾಗಿ ಮೊಬೈಲ್‌ಗೆ ತಲುಪಿಸುವುದು ಮತ್ತು ಟಿಕೆಟ್‌ ರದ್ದತಿಯನ್ನೂ ಸುಲಭಗೊಳಿಸುವುದು, ಇವೆಲ್ಲವೂ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿವೆ. ಪ್ರಯಾಣಿಕರ ಕೈಯಲ್ಲೇ ಸಾರಿಗೆ ಸೇವೆೞ ಎಂಬ ಪರಿಕಲ್ಪನೆಯೊಂದಿಗೆ ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಡಿಜಿಟಲ್‌ ಪಯಣದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ತಂತ್ರಜ್ಞಾನವನ್ನು ಕೇವಲ ಕಚೇರಿ ಕೆಲಸಕ್ಕೆ ಬಳಸುವುದಕ್ಕಿಂತ, ಅದನ್ನು ನೇರವಾಗಿ ಪ್ರಯಾಣಿಕರ ದಿನನಿತ್ಯದ ಬದುಕಿಗೆ ತಲುಪಿಸುವ ಪ್ರಯತ್ನ ಇದಾಗಿದೆ.

RELATED ARTICLES
spot_img

Latest News