Homeಬೆಂಗಳೂರುಪೊಲೀಸ್‌‍ ಖೆಡ್ಡಾಕ್ಕೆ ಬಿದ್ದ 10 ಲಕ್ಷ ಕೊಟ್ಟರೆ ಒಂದು ಕೋಟಿ ಮಾಡುವುದಾಗಿ ವಂಚಿಸುತ್ತಿದ್ದ ಖತರ್ನಾಕ್‌ ಗ್ಯಾಂಗ್‌

ಪೊಲೀಸ್‌‍ ಖೆಡ್ಡಾಕ್ಕೆ ಬಿದ್ದ 10 ಲಕ್ಷ ಕೊಟ್ಟರೆ ಒಂದು ಕೋಟಿ ಮಾಡುವುದಾಗಿ ವಂಚಿಸುತ್ತಿದ್ದ ಖತರ್ನಾಕ್‌ ಗ್ಯಾಂಗ್‌

ಬೆಂಗಳೂರು,ಸೆ.18-ಮೂಟೆಗಳಲ್ಲಿ ಹಣದ ಕಂತುಗಳನ್ನು ತೋರಿಸಿ ಅಮಾಯಕರನ್ನು ಯಾಮಾರಿಸಿ 10 ಲಕ್ಷಕ್ಕೆ 1 ಕೋಟಿ ನೀಡುವ ಆಮಿಷವೊಡ್ಡಿ ಹಲವರಿಂದ ಹಣ ಪಡೆದು 4.5 ಕೋಟಿ ರೂ. ವಂಚಿಸಿದ್ದ ಖದೀಮರ ಖತರ್ನಾಕ್‌ ಗ್ಯಾಂಗ್‌ನ್ನು ಹೊಸಕೋಟೆ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.

ಇದರ ಹಿಂದಿನ ಸೂತ್ರದಾರ,ಪ್ರಮುಖ ಆರೋಪಿ ಯಳಚೇನಹಳ್ಳಿ ಶಶಿಕುಮಾರ್‌ ಹಾಗೂ ಇನ್ನಿತರ ಆರೋಪಿಗಳಾದ ನಾಗೇಶ್‌, ಪ್ರಮೀಳ ಶಶಿಕುಮಾರ್‌, ಅಂಬುಜಾ ಶಶಿಕುಮಾರ್‌, ವೆಂಕಟರವಣಪ್ಪ ಎಂಬವರನ್ನು ಬಂಧಿಸಲಾಗಿದೆ.ಹೊಸಕೋಟೆ ಸುತ್ತಮುತ್ತ ಜಮೀನುಗಳನ್ನು ತೋರಿಸಿ ಹಲವರ ವಿಶ್ವಾಸ ಗಳಿಸಿದ್ದ ಆರೋಪಿ ಶಶಿಕುಮಾರ್‌ ಈ ಜಾಗದಲ್ಲಿ 1 ಕೋಟಿ ಬೆಲೆಬಾಳುವ ಜಮೀನನ್ನು 10 ಲಕ್ಷಕ್ಕೆ ಕೊಡಿಸುವುದಾಗಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಸ್ಥಿತಿವಂತರನ್ನು ಬೇನಾಮಿ ಜಮೀನಿನ ಬಳಿ ಕರೆದೊಯ್ದು ನಂಬಿಕೆ ಗಳಿಸಿದ್ದ.

ಅಲ್ಲದೇ,ಪ್ರಮುಖ ಆರೋಪಿ ಶಶಿಕುಮಾರ್‌ ಕಳೆದ ಹಲವು ವರ್ಷಗಳಿಂದ ಸ್ನೇಹಿತರು ಮತ್ತು ಸ್ಥಳೀಯರನ್ನ ನಂಬಿಸಿದ್ದ. ಆರ್‌ಬಿಐ ವ್ಯಾನೇಜರ್‌ ಎಂದು ವ್ಯಕ್ತಿಯೊಬ್ಬನನ್ನು ಪರಿಚಯಿಸಿದ್ದನು.ತದ ನಂತರದಲ್ಲಿ ವಿಡಿಯೋ ಕಾಲ್‌‍ ಮಾಡಿ ಮೂಟೆಗಳಲ್ಲಿ ಹಣ ತೋರಿಸಿ ಜನರ ವಿಶ್ವಾಸಗಳಿದ್ದ ಈತ ಹೊಸಕೋಟೆ ಸುತ್ತಮುತ್ತ 4.5 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದ.

ತಮಗೆ ದಿ.ತಮಿಳುನಾಡು ಸಿಎಂ ಜಯಲಲಿತಾ ಬೇನಾಮಿ ಆಸ್ತಿ ಬಂದಿದೆ. 10 ಲಕ್ಷ ಕೊಟ್ಟರೆ ಒಂದು ಕೋಟಿಯಂತೆ ಹಣ ಕೊಡುವುದಾಗಿ ನಂಬಿಸಿ ಈ ಗ್ಯಾಂಗ್‌ ಹಲವರಿಗೆ ವಂಚನೆ ಮಾಡಿದೆ.
ಚೆಕ್‌, ನಗದು ಮತ್ತು ಚಿನ್ನಾಭರಣ ಪಡೆದು ವಂಚಿಸಿದ್ದ ಆರೋಪ ಸಂಬಂಧ ಆರೋಪಿ ಶಶಿಕುಮಾರ್‌ ವಿರುದ್ದ ಕಳೆದ ತಿಂಗಳು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರುಹಲವು ಮಾಹಿತಿಗಳನ್ನು ಕಲೆಹಾಕಿ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈತನ ಜೊತೆ ಇನ್ನೂ ಹಲವರು ಇರುವ ಬಗ್ಗೆ ಗೊತ್ತಾಗಿದೆ.

ತನಿಖೆ ಮುಂದುವರೆಸಿದ ಪೊಲೀಸರು ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ವಂಚಿಸಿ ಗಳಿಸಿದ್ದ ಹಣದಲ್ಲಿ ವಾಹನ, ಜಮೀನು ಖರೀದಿ ಮಾಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್‌ ಅವರು ಮಾಹಿತಿ ನೀಡಿ, ಆರೋಪಿ ಶಶಿಕುಮಾರ್‌ ಸಾಕಷ್ಟು ಜನರಿಗೆ ಮೋಸ ಮಾಡಿದ್ದಾನೆ. ಕೊಟ್ಟ ಹಣ ಕೇಳಲು ಹೋದರೆ ಬೌನ್ಸರ್‌ಗಳ ಮೂಲಕ ಬೆದರಿಕೆ ಹಾಕುತ್ತಿದ್ದ, ಅಲ್ಲದೇ ಹಣ ಕಳೆದುಕೊಂಡವರು ಹೆಚ್ಚು ಒತ್ತಡ ಹಾಕಿದರೆ ಕೆಲ ದಲಿತ ನಾಯಕರಿಂದ ಧಮ್ಕಿ ಹಾಕಿಸುತ್ತಿದ್ದ.

ದಲಿತ ಸಂಘಟನೆ ಮುಖಂಡರಿಗೆ ಹಣ ನೀಡಿ ಅವರನ್ನ ಬಳಸಿಕೊಳ್ಳುತ್ತಿದ್ದ. ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೂ ಧಮ್ಕಿ ಹಾಕಿಸುತ್ತಿದ್ದನು ಎಂದು ಎಸ್ಪಿ ವಿವರಿಸಿದ್ದಾರೆ.
ಈ ಪ್ರಕರಣ ಸಂಬಂಧ ದಲಿತ ಮುಖಂಡ ನಾಗೇಶ್‌ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ವಂಚನೆಯಾಗಿರುವ ಮತ್ತಷ್ಟು ಜನ ದೂರು ನೀಡುವ ನಿರೀಕ್ಷೆಯಿದ್ದು, ದೂರು ಬಂದರೆ ಪಡೆದು ತನಿಖೆ ಮುಂದುವರೆಸುತ್ತೇವೆ ಎಂದು ಚಂದ್ರಕಾಂತ್‌ ಅವರು ತಿಳಿಸಿದ್ದಾರೆ.

RELATED ARTICLES
spot_img

Latest News