Homeರಾಜ್ಯಪೊಲೀಸ್‌‍ ಠಾಣೆ ಎದುರಲ್ಲೇ ಕಾರಿನಲ್ಲೇ ರಿಯಲ್‌ ಎಸ್ಟೇಟ್‌ ಉದ್ಯಮಿ ಸಾವು

ಪೊಲೀಸ್‌‍ ಠಾಣೆ ಎದುರಲ್ಲೇ ಕಾರಿನಲ್ಲೇ ರಿಯಲ್‌ ಎಸ್ಟೇಟ್‌ ಉದ್ಯಮಿ ಸಾವು

ಬೆಂಗಳೂರು,ಸೆ.20-ನಗರದ ಕೋರಮಂಗಲ ಪೊಲೀಸ್‌‍ ಠಾಣೆ ಮುಂಭಾಗ ಫಾಸ್ಟ್‌ಫುಡ್‌ ಹೋಟೆಲ್‌ ಬಳಿ ಐಷಾರಾಮಿ ಕಾರಿನಲ್ಲೇ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರು ಮೃತಪಟ್ಟಿದ್ದಾರೆ.

ಸಾವನ್ನಪ್ಪಿರುವವರನ್ನು ಕೊಡಗು ಜಿಲ್ಲೆಯ ಅಕ್ಬರ್‌ (46) ಎಂದು ಗುರುತಿಸಲಾಗಿದೆ. ಇವರು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಇಂದು ಮುಂಜಾನೆ ಆಡಿ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ನಗರಕ್ಕೆ ಬಂದು ಕೋರಮಂಗಲ ಪೊಲೀಸ್‌‍ ಠಾಣೆ ಮುಂಭಾಗ ಸಾಗರ್‌ ಫಾಸ್ಟ್‌ಫುಡ್‌ ಹೋಟೆಲ್‌ ಬಳಿ ನಿಲ್ಲಿಸಿದ್ದಾರೆ. ಆಗ ಸೀಟಿನಲ್ಲಿ ಕುಳಿತ್ತಿದ್ದಾಗಲೇ ಅವರು ಅಸುನೀಗಿದ್ದಾರೆ.

ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ದಾವಿಸಿ ಬಂದ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಮೇಲ್ನೋಟಕ್ಕೆ ಹೃದಯಾಘಾತದಿಂದ ಅಕ್ಬರ್‌ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮರಣೋತ್ತರ ವರದಿ ಬಂದ ನಂತರ ಇವರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

RELATED ARTICLES
spot_img

Latest News