Homeರಾಜ್ಯಓವರ್‌ಟೇಕ್‌ ತಂದ ಆಪತ್ತು : ಸರಣಿ ಅಪಘಾತದಿಂದ ಮೂವರ ದುರ್ಮರಣ

ಓವರ್‌ಟೇಕ್‌ ತಂದ ಆಪತ್ತು : ಸರಣಿ ಅಪಘಾತದಿಂದ ಮೂವರ ದುರ್ಮರಣ

Overtaking Attempt Leads to Tragedy: Three killed in series of accidents

ಮಡಿಕೇರಿ,ಸೆ.21-ಅತೀ ವೇಗವಾಗಿ ಸಂಚರಿಸುತ್ತಿದ್ದ ಕಾರೊಂದು ಮುಂದೆ ಹೋಗುತ್ತಿದ್ದ ಬೈಕ್‌ನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಮುಂದೆ ಸಾಗಿ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಪಿಕಪ್‌ ವಾಹನಕ್ಕೆ ಅಪ್ಪಳಿಸಿದ ಪರಿಣಾಮ ಬೈಕ್‌ ಸವಾರ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಕುಶಾಲನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.

ಮೃತರನ್ನು ಬೈಕ್‌ ಸವಾರ, ಮಡಿಕೇರಿ ಅರಣ್ಯ ಇಲಾಖೆಯ ಸೆಕ್ಯೂರಿಟಿಗಾರ್ಡ್‌ ಕುಮಾರ, ಸ್ವಿಫ್‌್ಟ ಕಾರು ಚಾಲಕ ರತನ್‌ ಮತ್ತು ಕಾರಿನಲ್ಲಿದ್ದ ಸಹಪ್ರಯಾಣಿಕ ಆದರ್ಶ್‌ ಎಂದು ಗುರುತಿಸಲಾಗಿದೆ.

ಈ ಸರಣಿ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುವಿನ್‌, ಚಂದ್ರಶೇಖರ್‌, ಮತ್ತು ಅಜಯ್‌ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಡರಾತ್ರಿ ಸ್ವಿಫ್‌್ಟ ಕಾರಿನಲ್ಲಿ ಚಾಲಕ ಸೇರಿದಂತೆ 6 ಮಂದಿ ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದಾಗ ಆನೆಕಾಡುಬಳಿ ಓವರ್‌ಟೇಕ್‌ ಮಾಡುವ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಪಿಕಪ್‌ ವಾಹನಕ್ಕೆ ಅಪ್ಪಳಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಗಾಯಾಳುಗಳು ರಸ್ತೆಯಲ್ಲಿ ಬಿದ್ದು, ನರಳಾಡುತ್ತಿದ್ದರು.ತಕ್ಷಣ ಸ್ಥಳೀಯರು ಅವರ ನೆರವಿಗೆ ದಾವಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸುದ್ದಿ ತಿಳಿದು ಕುಶಾಲನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News