Homeರಾಜ್ಯವಿಧಾನಪರಿಷತ್‌ನಲ್ಲಿ ಬಿಜೆಪಿ-ಕಾಂಗ್ರೆಸ್‌‍ ನಡುವೆ 'ವಂದೇ ಮಾತರಂ' ಫೈಟ್

ವಿಧಾನಪರಿಷತ್‌ನಲ್ಲಿ ಬಿಜೆಪಿ-ಕಾಂಗ್ರೆಸ್‌‍ ನಡುವೆ ‘ವಂದೇ ಮಾತರಂ’ ಫೈಟ್

ಬೆಂಗಳೂರು,ಸೆ.21- ರಾಜ್ಯ ವಿಧಾನಮಂಡಲದ ಮೂರು ದಿನಗಳ ವಿಶೇಷ ಅಧಿವೇಶನದ ಮೊದಲ ದಿನವೇ ವಿಧಾನಪರಿಷತ್‌ನಲ್ಲಿ ವಂದೇ ಮಾತರಂ ಗಾಯನದ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಗದ್ದಲ, ಘೋಷಣೆ ಹಾಗೂ ವಾಕ್ಸಮರಕ್ಕೆ ಕಾರಣವಾಯಿತು.

ಕಸ್ತೂರಿರಂಗನ್‌ ವರದಿ ಹಾಗೂ ಬರ ಪರಿಸ್ಥಿತಿ ಕುರಿತು ಮಹತ್ವದ ಚರ್ಚೆ ನಡೆಸಬೇಕಿದ್ದ ಸದನದಲ್ಲಿ ದಿನದ ಆರಂಭದಲ್ಲೇ ರಾಷ್ಟ್ರೀಯ ಗೀತೆಯ ಗಾಯನದ ಅವಧಿಯೇ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಸಲೀಂ ಅಹದ್‌ ಅವರ ಅಧ್ಯಕ್ಷತೆಯಲ್ಲಿ ವಂದೇ ಮಾತರಂ ಗಾಯನಕ್ಕೆ ಚಾಲನೆ ನೀಡಲಾಯಿತು.

ಸರ್ಕಾರದ ಇತ್ತೀಚಿನ ಆದೇಶದಂತೆ ಎರಡು ಚರಣಗಳ ಗಾಯನದ ಬಳಿಕ ಕಾರ್ಯಕ್ರಮ ಸ್ಥಗಿತಗೊಂಡಿತು. ಇದನ್ನು ಆಕ್ಷೇಪಿಸಿದ ಬಿಜೆಪಿ ಸದಸ್ಯರು ಸದನದಲ್ಲೇ ಪೂರ್ಣ ವಂದೇ ಮಾತರಂ ಗಾಯನ ಆರಂಭಿಸಿದರು. ಇದೇ ವೇಳೆ ಸಭಾಪತಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲು ಮುಂದಾದರು. ಸಂವಿಧಾನದ ಪೀಠಿಕೆ ಬೋಧನೆಯ ನಡುವೆಯೂ ಬಿಜೆಪಿ ಸದಸ್ಯರು ಪೂರ್ಣ ವಂದೇ ಮಾತರಂ ಹಾಡಿದ್ದು, ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಬಿಜೆಪಿ ಸದಸ್ಯರು ಪೂರ್ಣ ಗೀತೆಯ ಗಾಯನಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಱವಂದೇ ಮಾತರಂೞ ಅನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯ ರವಿಕುಮಾರ್‌, ಸದನದಲ್ಲಿ ಹಿಂದೆ ಪೂರ್ಣ ಗೀತೆ ಹಾಡಲಾಗುತ್ತಿತ್ತು; ಈಗ ಏಕೆ ಎರಡು ಚರಣಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಪ್ರಶ್ನಿಸಿದರು.

ಸರ್ಕಾರದ ಆದೇಶ ಉಲ್ಲೇಖಿಸಿದ ಯತೀಂದ್ರ
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌‍ನ ಯತೀಂದ್ರ ಅವರು, ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸರ್ಕಾರವೇ ಆದೇಶ ಹೊರಡಿಸಿದೆ ಎಂದು ಸಮರ್ಥಿಸಿಕೊಂಡರು. ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತಿತರ ಪ್ರಮುಖ ಸಂವಿಧಾನಿಕ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡಲಾಗುತ್ತದೆ ಎಂದು ತಿಳಿಸಿದರು.

ಈ ಹೇಳಿಕೆ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಸಭಾಪತಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಸಭಾ ನಾಯಕರು ನೀಡಿದ ಹೇಳಿಕೆಯನ್ನು ಬಿಜೆಪಿ ಸದಸ್ಯರು ಪ್ರಶ್ನಿಸಿದರು. ಸಿ.ಟಿ. ರವಿ, ಸಭಾಪತಿ ಹೆಲ್ಪ್ ಲೆಸ್‌‍ ಹಾಗಾದ್ರೆ? ಎಂದು ಪ್ರಶ್ನಿಸಿದರೆ, ಛಲವಾದಿ ನಾರಾಯಣಸ್ವಾಮಿ ಅವರು ಸಭಾಪತಿಯ ಅಧಿಕಾರ ಮತ್ತು ಸದನದ ಸ್ವಾಯತ್ತತೆಯ ಕುರಿತು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.

ಸಭಾಪತಿಗಳ ಕೈಯಲ್ಲಿ ಏನೂ ಇಲ್ಲ ಎಂದು ಸಭಾ ನಾಯಕರು ಹೇಳುತ್ತಾರೆ. ನೀವು ಕಾಂಗ್ರೆಸ್‌‍ ಸಭಾಪತಿಗಳಾ? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು. ಯತೀಂದ್ರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಈ ವಿಚಾರದಲ್ಲಿ ಸಭಾಪತಿಯೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಇದರಿಂದ ಯತೀಂದ್ರ ಮತ್ತು ಛಲವಾದಿ ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು. ಸಿ.ಟಿ. ರವಿ ಮತ್ತಷ್ಟು ತೀವ್ರವಾಗಿ ಪ್ರತಿಕ್ರಿಯಿಸಿ, ಱಱಸಭಾಪತಿ ಪೀಠ ಸಂವಿಧಾನ ಪೀಠವೋ? ಕಾಂಗ್ರೆಸ್‌‍ ಪೀಠವೋ?ೞೞ ಎಂದು ಪ್ರಶ್ನಿಸಿದರು.

ಎರಡು ಚರಣದ ನಿರ್ಧಾರದ ಹಿನ್ನೆಲೆ :
ಱವಂದೇ ಮಾತರಂೞ ಗಾಯನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸೆ.8ರಂದು ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಮತ್ತು ಅಧಿಕೃತ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಮೊದಲ ಎರಡು ಚರಣಗಳನ್ನು ಹಾಡುವಂತೆ ಸೂಚಿಸಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪೂರ್ಣ ಆವೃತ್ತಿಗೆ ಅವಕಾಶ ನೀಡಲಾಗಿದೆ. ಸರ್ಕಾರ ಈ ಕ್ರಮವನ್ನು ಕಾರ್ಯಕ್ರಮದ ಸ್ವರೂಪಕ್ಕೆ ಅನುಗುಣವಾದ ಏಕರೂಪತೆ, ಗೌರವ ಮತ್ತು ಶಿಷ್ಟಾಚಾರಕ್ಕಾಗಿ ತೆಗೆದುಕೊಂಡ ನಿರ್ಧಾರ ಎಂದು ವಿವರಿಸಿದೆ.

ಇದೇ ವಿಚಾರ ಈಗಾಗಲೇ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದೆ. ಅರ್ಜಿದಾರರು ಕೇಂದ್ರದ ಮಾರ್ಗಸೂಚಿ ಮತ್ತು ರಾಜ್ಯದ ಎರಡು ಚರಣಗಳ ನಿರ್ಧಾರದ ನಡುವಿನ ವ್ಯತ್ಯಾಸವನ್ನು ಪ್ರಶ್ನಿಸಿದ್ದಾರೆ.

ಹರಿಪ್ರಸಾದ್‌ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ
ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷದ ಸದಸ್ಯರು ಪೂರ್ಣ ಗೀತೆ ಹಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌‍ ನಾಯಕ ಬಿ.ಕೆ. ಹರಿಪ್ರಸಾದ್‌, ಈ ಸದನದಲ್ಲಿ ಈ ಹಿಂದೆ ಎರಡು ಚರಣಗಳೇ ಹಾಡಲಾಗುತ್ತಿತ್ತು ಎಂದು ಹೇಳಿದರು. ಬಿಜೆಪಿ ಸದಸ್ಯರು ಸಭಾಪತಿ ಬಂದ ಸಂದರ್ಭದಲ್ಲಿ ಪೂರ್ಣ ಗೀತೆ ಹಾಡಲು ಆರಂಭಿಸಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಇದು ಕಾಂಗ್ರೆಸ್‌‍ ಕಚೇರಿಯಲ್ಲ, ವಿಧಾನಪರಿಷತ್‌ ಎಂದು ಆಕ್ಷೇಪಿಸಿದರು. ಹರಿಪ್ರಸಾದ್‌ ಅವರ ಮಾತಿನ ನಡುವೆ ಘೋಷಣೆಗಳು ಮೊಳಗಿದವು. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕೆಲಕಾಲ ತೀವ್ರ ವಾಗ್ವಾದ ನಡೆಯಿತು.

ಕಸ್ತೂರಿರಂಗನ್‌ ಚರ್ಚೆಗೆ ಮರಳಿಸಲು ಪರಮೇಶ್ವರ್‌ ಮನವಿ
ಗದ್ದಲದ ನಡುವೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ಅವರು ಸದನದ ಉದ್ದೇಶವನ್ನು ನೆನಪಿಸಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ಕಸ್ತೂರಿರಂಗನ್‌ ವರದಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಹೀಗಾಗಿ ಸದಸ್ಯರು ಸಹಕರಿಸಿ ಬರ, ರೈತರ ಸಮಸ್ಯೆಗಳು ಮತ್ತು ಕಸ್ತೂರಿರಂಗನ್‌ ವರದಿ ಕುರಿತು ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.

ಱಱಪರವಾಗಿಲ್ಲ, ವಿರೋಧವಾಗಿಲ್ಲ?ನಿಮ ಅಭಿಪ್ರಾಯವನ್ನು ಹೇಳಿ. ಕಸ್ತೂರಿರಂಗನ್‌ ವರದಿ ಬಗ್ಗೆ ಚರ್ಚೆ ಮಾಡಿ, ರಾಜ್ಯದ ಹಿತದ ಬಗ್ಗೆ ಮಾತನಾಡಿ,ೞೞ ಎಂಬ ಅರ್ಥದಲ್ಲಿ ಪರಮೇಶ್ವರ್‌ ಪ್ರತಿಪಕ್ಷಕ್ಕೆ ಮನವಿ ಮಾಡಿದರು.

ಆದರೆ ಬಿಜೆಪಿ ಸದಸ್ಯರು ಕಸ್ತೂರಿರಂಗನ್‌ ವರದಿಯ ಜಾರಿಗೆ ತಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು. ಸಿ.ಟಿ. ರವಿ, ಕಸ್ತೂರಿರಂಗನ್‌ ವರದಿ ಕಾಂಗ್ರೆಸ್‌‍ ಸರ್ಕಾರದ ಹಿಂದಿನ ನೀತಿಗಳ ಪರಿಣಾಮ ಎಂಬ ಆರೋಪ ಮಾಡುತ್ತಾ ಪರಮೇಶ್ವರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಮತ್ತೆ ಎರಡೂ ಬದಿಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬರ, ಕಸ್ತೂರಿರಂಗನ್‌ ಹಿನ್ನೆಲೆಯಲ್ಲೇ ವಿಶೇಷ ಅಧಿವೇಶನ
ಸೆ.21ರಿಂದ 23ರವರೆಗೆ ನಡೆಯುತ್ತಿರುವ ವಿಶೇಷ ಅಧಿವೇಶನವನ್ನು ಮುಖ್ಯವಾಗಿ ಕಸ್ತೂರಿರಂಗನ್‌ ವರದಿ ಮತ್ತು ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕರೆಯಲಾಗಿದೆ. ಸೆ.21ರಂದು ಕಸ್ತೂರಿರಂಗನ್‌ ವರದಿ, ನಂತರದ ದಿನಗಳಲ್ಲಿ ರೈತರ ಸಮಸ್ಯೆಗಳು ಮತ್ತು ಬರಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ.

ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದ ಪ್ರಸ್ತಾವನೆಯಡಿ ಸುಮಾರು 20,668 ಚದರ ಕಿ.ಮೀ. ಪ್ರದೇಶದ 1,576 ಗ್ರಾಮಗಳನ್ನು 33 ತಾಲ್ಲೂಕುಗಳಲ್ಲಿ ಒಳಗೊಳ್ಳುವ ಪ್ರಸ್ತಾವನೆ ಇರುವುದರಿಂದ, ರೈತರು ಮತ್ತು ಸ್ಥಳೀಯ ನಿವಾಸಿಗಳ ಆತಂಕವೂ ಪ್ರಮುಖ ರಾಜಕೀಯ ವಿಚಾರವಾಗಿದೆ. ಕೇಂದ್ರದ ಕರಡು ಅಧಿಸೂಚನೆಗೆ ರಾಜ್ಯದ ಆಕ್ಷೇಪ ಸಲ್ಲಿಸಲು ಸೆ.27ರವರೆಗೆ ಕಾಲಾವಕಾಶವಿದೆ.ಇತ್ತ ರಾಜ್ಯದಲ್ಲಿ ಬರ ಪರಿಸ್ಥಿತಿಯೂ ಅಧಿವೇಶನದ ಪ್ರಮುಖ ವಿಚಾರವಾಗಿದೆ. ಸರ್ಕಾರದ ಪ್ರಕಾರ ಈಗಾಗಲೇ 124 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನಷ್ಟು ಪ್ರದೇಶಗಳ ಮೌಲ್ಯಮಾಪನ ಮುಂದುವರಿದಿದೆ.

ಆರಂಭದಲ್ಲೇ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾದ ಸದನ
ಹೀಗಾಗಿ ರಾಜ್ಯದ ರೈತರು, ಬರಪರಿಹಾರ, ನೀರಿನ ಸಮಸ್ಯೆ ಮತ್ತು ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆ ಕುರಿತು ಚರ್ಚಿಸಬೇಕಿದ್ದ ವಿಶೇಷ ಅಧಿವೇಶನದ ಮೊದಲ ದಿನವೇ ವಂದೇ ಮಾತರಂ ಗಾಯನದ ವಿಚಾರ ಕೇಂದ್ರಬಿಂದುವಾಯಿತು. ಸರ್ಕಾರದ ಎರಡು ಚರಣಗಳ ಆದೇಶ ಹಾಗೂ ಬಿಜೆಪಿ ಸದಸ್ಯರ ಪೂರ್ಣ ಗಾಯನದ ಒತ್ತಾಯ ಮುಖಾಮುಖಿಯಾಗಿದ್ದು, ಇದರೊಂದಿಗೆ ಸಭಾಪತಿಯ ಅಧಿಕಾರ, ಸರ್ಕಾರದ ಆದೇಶ ಮತ್ತು ರಾಷ್ಟ್ರೀಯ ಗೀತೆಯ ಗಾಯನದ ವಿಧಾನ ಕುರಿತ ರಾಜಕೀಯ ಚರ್ಚೆಯೂ ತೀವ್ರಗೊಂಡಿದೆ. ಸದನದಲ್ಲಿ ಪ್ರತಿಪಕ್ಷಗಳ ಮತ್ತು ಆಡಳಿತಾ ಸದಸ್ಯರ ನಡುವೆ ಗದ್ದಲ ಉಂಟಾದ ಪರಿಣಾಮ ಸಭಾಧ್ಯಕ್ಷರು ಕಲಾಪವನ್ನು ಕೆಲಕಾಲ ಮುಂದೂಡಿದರು.

RELATED ARTICLES
spot_img

Latest News