ನಿತ್ಯ ನೀತಿ : ಪ್ರತಿಯೊಂದು ಕಷ್ಟವೂ ಅನುಭವವನ್ನು ನೀಡುತ್ತದೆ, ಪ್ರತಿಯೊಂದು ಅನುಭವವೂ ವ್ಯಕ್ತಿಯನ್ನು ಬದಲಾಯಿಸುತ್ತದೆ.
ಪಂಚಾಂಗ : ಗುರುವಾರ, 08-10-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಭಾದ್ರಪದ / ಪಕ್ಷ: ಕೃಷ್ಣ / ತಿಥಿ: ತ್ರಯೋದಶಿ / ನಕ್ಷತ್ರ: ಪೂರ್ವಾ / ಯೋಗ: ಶುಕ್ಲ / ಕರಣ: ಗರಜ
ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.07
ರಾಹುಕಾಲ – 1.30- 3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00- 10.30
ರಾಶಿಭವಿಷ್ಯ :
ಮೇಷ: ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ಯಾವುದೇ ಗೊಂದಲಗಳು ಸೃಷ್ಟಿಯಾಗಬಹುದು.
ವೃಷಭ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ತಮ್ಮ ಹಣ ಕಳೆದುಕೊಳ್ಳಬಹುದು.
ಮಿಥುನ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವುದ ರಿಂದ ನಿಮ್ಮ ಪ್ರತಿಷ್ಠೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ.
ಕಟಕ: ದೈಹಿಕ ಒತ್ತಡ ಕಡಿಮೆಯಾಗುವುದರಿಂದ ಮಾನಸಿಕ ಶಕ್ತಿ ಹೆಚ್ಚಾಗಲಿದೆ.
ಸಿಂಹ: ನಿಮ್ಮ ಮಾತುಗಳು ನಿಮ್ಮ ಆಪ್ತರಿಗೆ ಅರ್ಥ ವಾಗುವುದಿಲ್ಲವಾದ್ದರಿಂದ ತೊಂದರೆಗೆ ಸಿಲುಕುವಿರಿ
ಕನ್ಯಾ: ವ್ಯವಹಾರದ ವಿಷಯದಲ್ಲಿ ಸ್ನೇಹಿತರ ಸಹಕಾರ ಸಿಗಲಿದೆ.
ತುಲಾ: ಹಳೆಯ ಸ್ನೇಹಿತರ ಭೇಟಿಯಿಂದ ಗೊಂದಲಗಳಿಗೆ ಪರಿಹಾರ ದೊರೆಯಲಿವೆ.
ವೃಶ್ಚಿಕ: ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಸಂತೋಷ ಸಿಗಲಿದೆ.
ಧನುಸ್ಸು: ಖರ್ಚು ಕಡಿತ ಮಾಡುವುದು ಮುಖ್ಯ ಎಂಬುದನ್ನು ನೆನಪಿನಲ್ಲಿಡಿ.
ಮಕರ: ಪ್ರೇಮ ಸಂಬಂಧಗಳು ಬಲವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಕುಂಭ: ತಾಯಿ-ತಂದೆ ಮತ್ತು ಕುಟುಂಬದವರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.
ಮೀನ: ಕೆಲಸ ಮಾಡುವ ಮೊದಲೇ ಅದರ ಬಗ್ಗೆ ಒಳ್ಳೆಯದು ಕೆಟ್ಟದ್ದನ್ನು ಯೋಚಿಸಬೇಡಿ.
