ಮಧುಗಿರಿ,ಅ.12-ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಪಡೆದುಕೊಂಡ ಸಾಲ ತೀರಿಸಲಾಗದೆ ಸಾಫ್ಟ್ ವೇರ್ ಎಂಜಿನಿಯರೊಬ್ಬರು ಮನನೊಂದು ನೇಣಿಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಮಹಿಳಾ ಸಮಾಜದ ಹಿಂಭಾಗದ ವಾಸದ ಮನೆಯಲ್ಲಿದ್ದ ವಾಗೀಶ್ (34) ಆತಹತ್ಯೆ ಮಾಡಿಕೊಂಡ ಟೆಕ್ಕಿ.
ಹಾಸನ ಜಿಲ್ಲೆ, ಹೊಳೆನರಸೀಪುರ ಟೌನ್, ದೇವಾಂಗ ಬೀದಿ ನಿವಾಸಿ ಅನುಷಾ ಎಂಬುವವರು 7 ವರ್ಷಗಳ ಹಿಂದೆ ಮಧುಗಿರಿ ಟೌನ್ ಕೆ.ಆರ್.ಬಡಾವಣೆಯ ನಿವಾಸಿ ವಾಗೀಶ್‌ರವರನ್ನು ಮದುವೆಯಾಗಿದ್ದು, ದಂಪತಿಗೆ ರಿಯಾ(4) ಎಂಬ ಒಬ್ಬಳೇ ಮಗಳಿದ್ದಾಳೆ.
ವಾಗೀಶ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಆನ್‌ಲೈನ್ ಗೇಮಿಂಗ್ ಹವ್ಯಾಸ ಬೆಳಸಿಕೊಂಡು ದುಡಿದ ಹಣವನ್ನು ಅದಕ್ಕೆ ಕಳೆಯುತ್ತಿದ್ದರಿಂದ ಆತನ ಪೋಷಕರು ಹಾಗೂ ಸಂಬಂಧಿಕರು ಬುದ್ದಿ ಹೇಳಿದ್ದರೂ ಸಹ ತಿದ್ದುಕೊಂಡಿರಲಿಲ್ಲ.
ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ವಾಗೇಶ್ ಅವರು 2 ವರ್ಷದ ಹಿಂದೆ ಕೆಲಸ ಬಿಟ್ಟು ವಾಪಸ್ ಮನೆಗೆ ಬಂದಿದ್ದರು. ಈ ಕುಟುಂಬ ಪಟ್ಟಣದಲ್ಲಿ ಒಟ್ಟಿಗೆವಾಸವಿದ್ದು, ವಾಗೇಶ್ ಮಾಡಿಕೊಂಡ ಸಾಲ ತೀರಿಸಲು ಮನೆಯಲ್ಲಿದ್ದ ಚಿನ್ನದ ಒಡವೆಗಳನ್ನು ಅಡವಿಟ್ಟಿದ್ದು, ಎಲೆಕ್ಟಿಕಲ್ ಅಂಗಡಿಯನ್ನು ಸಹ ಬೇರೆಯವರಿಗೆ ಬಾಡಿಗೆಗೆ ನೀಡಿದ್ದರು.
ಅತ್ತೆ-ಮಾವ ಹಾಗು ನನ್ನ ಮಾವನ ಅಣ್ಣ ಪ್ರಕಾಶ್ ಬಾಬು ಹಾಗು ನನ್ನ ಗಂಡನ ತಂಗಿ ಸೌಮ್ಯ ಲಕ್ಷೀ ರವರು ಎಲ್ಲರೂ ಸೇರಿ ಅನೇಕ ಬಾರಿ ಬುದ್ದಿ ಹೇಳಿದ್ದರೂ ಸಹ ಕೇಳದೇ ಅವರು ಆನ್ ಲೈನ್‌ಗೇಮ್‌ನಲ್ಲಿ ಹಣ ಕಳೆದುಕೊಂಡಿರುವ ವಿಚಾರದಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಇರುತ್ತಿದ್ದರು ಎಂದು ವಾಗೇಶ್ ಪತ್ನಿ ಅನುಷಾ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನಮ ಮಾವ ನವರ ಅಕೌಂಟ್‌ನಿಂದ ಅವರಿಗೆ ತಿಳಿಯದ ಹಾಗೆ ಸುಮಾರು 90 ಸಾವಿರ ಹಣ ಹೋಗಿರುವ ಬಗ್ಗೆ ನನ್ನ ಗಂಡನನ್ನು ನಾನು ನನ್ನ ಅತ್ತೆ ಮಾವ ವಿಚಾರ ಮಾಡಿದಾಗ ಆದು ಸೈಬರ್ ವಂಚಕರು ತೆಗೆದುಕೊಂಡಿರುತ್ತಾರೆ. ನಾನು ತೆಗೆದು ಕೊಂಡಿರುವುದಿಲ್ಲವೆಂದು ತಿಳಿಸಿದ್ದರು.
ಎಷ್ಟು ಬುದ್ದಿ ಹೇಳಿದರೂ ಸಹ ಕೇಳದೇ, ಜೀವನದಲ್ಲಿ ಜಿಗುಪ್ಪೆ ಗೊಂಡು ಅವರು ಮೊನ್ನೆ ರಾತ್ರಿ 9 ಗಂಟೆ ಸಮಯದಲ್ಲಿ ಮನೆಯ ಮೇಲಿನ ರೂಮಿಗೆ ಹೋಗಿ ಮಲಗಿದ್ದರು, ನಾನು ನನ್ನ ಮಗಳು ಮತ್ತು ಅತ್ತೆ-ಮಾವ ಕೆಳಗೆ ಮಲಗಿದೆವು. ನಾವು ನಿನ್ನೆ ಬೆಳಿಗ್ಗೆ 9.30 ಗಂಟೆಯದರೂ ನನ್ನ ಗಂಡ ಟಿಫನ್ ಮಾಡಲು ರೂಮಿನಿಂದ ಬಾರದೇ ಇದ್ದರಿಂದ, ನಮ ಮಾವ ಎದ್ದೇಳಿಸಲು ಹೋದಾಗ, ವಾಗೇಶ್ ರೂಮಿನ ಸೀಲಿಂಗ್ ಫ್ಯಾನ್‌ಗೆ ಬೆಡ್ ಶೀಟ್‌ನಿಂದ ನೇಣು ಬಿಗಿದುಕೊಂಡಿರುವುದನ್ನು ನೋಡಿ ಕೂಗಿಕೊಂಡರು ಆಗ ನಾವೆಲ್ಲಾ ಹೋಗಿ ನೋಡಿದಾಗ ಅವರು ಮತ ಪಟ್ಟಿದ್ದರು ಎಂದು ದೂರಿನಲ್ಲಿ ವಿವರವಾಗಿ ತಿಳಿಸಿದ್ದಾರೆ.
ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅಪ್ಪ-ಅಮ ಮತ್ತು ಹೆಂಡತಿ ಮತ್ತು ಮಗಳಿಗೆ ನನ್ನನ್ನು ಕ್ಷಮಿಸಿ ಎಂದಷ್ಟೇ ಬರೆದಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇನ್ನೆಷ್ಟು ಜೀವ ಬಲಿಯಾಗಲಿದೇಯೋ!
ಆನ್‌ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್‌ಆ್ಯಪ್‌ಗಳ ಹಾವಳಿಯಿಂದಾಗಿ ಯುವ ಪೀಳಿಗೆ ಹಾಗೂ ವಿದ್ಯಾವಂತ ಯುವಕರು ಜೀವ ಕಳೆದುಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಕಳವಳವನ್ನುಂಟುಮಾಡಿದೆ.
