Homeರಾಜ್ಯಮಾದಪ್ಪನ ಹುಂಡಿಯಲ್ಲಿ 36 ದಿನಗಳಲ್ಲಿ 2.79 ಕೋಟಿ ರೂ. ಕಾಣಿಕೆ ಸಂಗ್ರಹ

ಮಾದಪ್ಪನ ಹುಂಡಿಯಲ್ಲಿ 36 ದಿನಗಳಲ್ಲಿ 2.79 ಕೋಟಿ ರೂ. ಕಾಣಿಕೆ ಸಂಗ್ರಹ

ಹನೂರು,ಅ.29-ತಾಲ್ಲೂಕಿನ ಪುಣ್ಯಕ್ಷೇತ್ರ ಶ್ರೀಮಲೆ ಮಹದೇಶ್ವರ ಬೆಟ್ಟ ಮಾದಪ್ಪನ ದೇಗುಲದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು , 36 ದಿನಗಳಲ್ಲಿ 2.79 ಕೋಟಿ ರೂಗಳು ಸಂಗ್ರಹ ಆಗಿದೆ.ಸಾಲೂರು ಬೃಹನಠಾಧ್ಯಕ್ಷರಾದ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರ ಉಪಸ್ಥಿತಿಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪುರುಷೋತ್ತಮ್‌ ರವರ ನೇತತ್ವದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ.

36 ದಿನಗಳಲ್ಲಿ 2,79,16,048 ರೂ. ನಗದು (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ 19 ಗ್ರಾಂ 800 ಮಿಲಿ, ಬೆಳ್ಳಿ 1 ಕೆ.ಜಿ.145 ಗ್ರಾಂ, 2 ವಿದೇಶಿ ನೋಟುಗಳು, 2 ಸಾವಿರ ಮುಖ ಬೆಲೆ 3 ನೋಟುಗಳು ಹುಂಡಿಯಲ್ಲಿ ದೊರೆತಿದೆ.ಈ ಬಾರಿಯೂ ಭಕ್ತರಿಂದ ಹರಕೆ ರೂಪದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಣಿಕೆ ಸಂಧಿರುವುದು ಆಯುಧ ಪೂಜೆ ,ವಿಜಯ ದಶಮಿ, ಅಮಾವಾಸ್ಯೆ, ಹುಣ್ಣಿಮೆ, ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ, ರಜಾ ದಿನಗಳು ,ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ರೇತ್ರಕ್ಕೆ ಭೇಟಿ ನೀಡಿದ್ದರಿಂದ ಹೆಚ್ಚು ಹಣ ಸಂಗ್ರಹವಾಗಿದೆ.

ಮ. ಬೆಟ್ಟ ಬಸ್‌‍ ನಿಲ್ದಾಣದ ವಾಣಿಜ್ಯ ಕಟ್ಟಡದಲ್ಲಿ ಸಿಸಿ ಕ್ಯಾಮರಗಳ ಕಣ್ಗಾವಲಿನಲ್ಲಿ ಹಾಗೂ ಮ.ಬೆಟ್ಟ ಠಾಣೆ ಪೊಲೀಸ್‌‍ ಬಂದೋಬಸ್ತಿನಲ್ಲಿ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲ ಭ್ಯಾಂಕ್‌ ಆಫ್‌ ಬರೋಡ ಸ್ಥಳೀಯ ಶಾಖೆ ಸಿಬ್ಬಂದಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.

ಹುಂಡಿ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ, ಚಾ.ನಗರ ಜಿಲ್ಲಾಡಳಿತ ಕಛೇರಿಯ ವಿಷಯ ನಿರ್ವಾಹಕಿ ಸಂಗೀತ, ಬ್ಯಾಂಕ್‌ ಆಫ್‌ ಬರೋಡ ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕರಾದ ರವಿಶಂಕರ್‌ ಮತ್ತು ಸಿಬ್ಬಂದಿ ವರ್ಗ, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ಮಹದೇವು , ಪ್ರಾಧಿಕಾರದ ಸಿಬ್ಬಂದಿಗಳಾದ ಸರಗೂರು ಮಹದೆವಸ್ವಾಮಿ, ಇಂದ್ರೇಶ್‌, ಜನಾರ್ಧನ್‌, ವೆಂಕಟಾಚಾರಿ, ಮಹೇಶ್‌ ಕುಮಾರ್‌, ಪಾರುಪತ್ತೇದಾರ್‌ ಮಹಾಲಿಂಗನ ಕಟ್ಟೆ ಮಾದೇಶ್‌, ಸೂಪರ್‌ವೈಸರ್‌ ಮಾದೇಶ್‌ ಮತ್ತು ಪ್ರಾಧಿಕಾರದ ಎಲ್ಲಾ ವಿಭಾಗಗಳ ಸಿಬ್ಬಂದಿ ವರ್ಗದವರು , ಮ.ಬೆಟ್ಟದ ಪೊಲೀಸ್‌‍ ಠಾಣೆ ಪಿಎಸ್‌‍ಐ ಜಯರಾಮ್‌ ಹಾಗೂ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಮರಿಸ್ವಾಮಿ ಕಾಗಲವಾಡಿ ಮೊಳೆ, ಭಾಗ್ಯಮ ಕುಪ್ಯಾ ಹಾಜರಿದ್ದರು.

RELATED ARTICLES

Latest News