Homeಮನರಂಜನೆಅಪ್ಪು ಪುಣ್ಯ ಸ್ಮರಣೆ : ಕುಟುಂಬಸ್ಥರಿಂದ ಸಮಾಧಿಗೆ ಪೂಜೆ, ಅಭಿಮಾನಿಗಳಿಂದ ಸಮಾಜಸೇವೆ

ಅಪ್ಪು ಪುಣ್ಯ ಸ್ಮರಣೆ : ಕುಟುಂಬಸ್ಥರಿಂದ ಸಮಾಧಿಗೆ ಪೂಜೆ, ಅಭಿಮಾನಿಗಳಿಂದ ಸಮಾಜಸೇವೆ

ಬೆಂಗಳೂರು,ಅ.29-ಪವರ್‌ ಸ್ಟಾರ್‌ ಡಾ. ಪುನೀತ್‌ ರಾಜ್‌ಕುಮಾರ್‌ ಅವರ 5ನೇ ವರ್ಷದ ಪುಣ್ಯಸರಣೆಯನ್ನು ರಾಜ್ಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. 2021 ಅ.29 ರಂದು ದೊಡನೆ ಮಗ ಪುನೀತ್‌ರಾಜ್‌ಕುಮಾರ್‌ ಅವರು ಅಭಿಮಾನಿಗಳನ್ನು ಅಗಲಿ ಇಂದಿಗೆ ಐದು ವರ್ಷ.

ಅಭಿಮಾನಿಗಳು ಅಪ್ಪು ಅವರ ಸಮಾಜಮುಖಿ ಕೆಲಸಗಳಿಂದಾನೇ ಅವರನ್ನ ಜೀವಂತವಾಗಿ ನೋಡ್ತಿದ್ದಾರೆ. ಇಂದು ಕೂಡ ಸಾರಕದ ಬಳಿ ಅನ್ನದಾನ, ರಕ್ತದಾನ ನಡೆದಿದೆ. ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಮಾಡಿದ್ದಾರೆ. ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಾಗೂ ರಾಜಕುಮಾರ್‌ ಕುಟುಂಬದ ಸದಸ್ಯರು ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಿದ್ದಾರೆ.

ಕುಟುಂಬದವರೆಲ್ಲ ಮುದ್ದಿನ ತಮನಿಗೆ ಇಷ್ಟದ ಅಡುಗೆ ಮಾಡಿ ಎಡೆ ಇಟ್ಟಿದ್ದಾರೆ. ಬಣ್ಣ ಬಣ್ಣದ ಹೂಗಳಿಂದ ನಗುಮುಖದ ಒಡೆಯನ ಸಮಾಧಿ ಅಲಂಕಾರಗೊಂಡಿದೆ. ಅಭಿಮಾನಿಗಳೆಲ್ಲಾ ಹೂಗಳನ್ನ ನೀಡಿ ಅಪ್ಪು ಅವರನ್ನ ಸರಿಸಿದರು. ಕರ್ನಾಟಕದ ಮೂಲೆ ಮೂಲೆಯಿಂದ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸಿ ತಮ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.

ಅಪ್ಪು ಅವರ ಸರಣಾರ್ಥ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಅಭಿಮಾನಿಗಳು ಬೆಳಗ್ಗೆಯಿಂದಲೇ ವಿವಿಧ ದೇವಾಲಯಗಳಲ್ಲಿ ಪೂಜಾ ಕಾರ್ಯಕ್ರಮಗಳು, ಅನ್ನದಾನ ಸೇರಿದಂತೆ ಹಲವು ಸಮಾಜಸೇವಾ ಕಾರ್ಯಗಳನ್ನು ಹಮಿಕೊಂಡಿದ್ದಾರೆ.ರಾಜ್ಯದ ಪ್ರಮುಖ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಪುನೀತ್‌ ನಟನೆಯ ಸೂಪರ್‌ ಹಿಟ್‌ ಚಿತ್ರಗಳಾದ ಅಪ್ಪು, ಅರಸು, ಮಿಲನ, ರಾಜಕುಮಾರ ಮತ್ತು ಅವರ ಕೊನೆಯ ಸಾಕ್ಷ್ಯ ಚಿತ್ರ ಗಂಧದ ಗುಡಿಯನ್ನು ಪ್ರದರ್ಶಿಸಲಾಗುತ್ತಿದೆ. ಇನ್ನು ನಗರದ ಹಲವು ಪ್ರದೇಶಗಳಲ್ಲಿ ಪುನೀತ್‌ ಅವರ ಚಲನಚಿತ್ರಗಳ ಹಾಡುಗಳ ಸಂಗೀತ ಸೌರಭ ಕಾರ್ಯಕ್ರಮವನ್ನು ಹಮಿಕೊಳ್ಳಲಾಗುತ್ತಿದೆ.

RELATED ARTICLES

Latest News