Homeಕ್ರೀಡಾ ಸುದ್ದಿರಣಜಿ : ಕರ್ನಾಟಕಕ್ಕೆ ಇನ್ನಿಂಗ್ಸ್ ಗೆಲುವು

ರಣಜಿ : ಕರ್ನಾಟಕಕ್ಕೆ ಇನ್ನಿಂಗ್ಸ್ ಗೆಲುವು

ಮೈಸೂರು, ಅ. 29- ಶ್ರೇಯಸ್‌‍ ಗೋಪಾಲ್‌ ಅವರ ಸ್ಪಿನ್‌ ಅಸ್ತ್ರಕ್ಕೆ ಶರಣಾದ ತ್ರಿಪುರ ಇನ್ನಿಂಗ್‌್ಸ ಹಾಗೂ 116 ರನ್‌ಗಳ ಸೋಲು ಕಂಡಿದೆ.ಮೊದಲ ಇನ್ನಿಂಗ್ಸ್ ನಲ್ಲಿ 296 ರನ್‌ಗಳ ಭಾರೀ ಹಿನ್ನೆಡೆ ಅನುಭವಿಸಿದ್ದ ತ್ರಿಪುರ ದ್ವಿತೀಯ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಕಂಡರೂ, ಶ್ರೇಯಸ್‌‍ ಗೋಪಾಲ್‌ ಆರಂಭಿಕ ಆಟಗಾರರಾದ ಭಕ್ತರಂಜನ್‌ ದಾಸ್‌‍ (26 ರನ್‌) ಹಾಗೂ ಋತುರಾಜ್‌ ರಾಯ್‌ (13 ರನ್‌) ವಿಕೆಟ್‌ ಪಡೆದರು.

ಶ್ರೀರಾಮ್‌ಪೌಲ್‌ (50ರನ್‌) ಅವರ ಅರ್ಧಶತಕದ ನೆರವಿದ್ದರೂ ತ್ರಿಪುರ ದ್ವಿತೀಯ ಇನ್ನಿಂಗ್ಸ್ ನಲ್ಲಿ 180 ರನ್‌ಗಳಿಗೆ ಸರ್ವಪತನ ಕಂಡು ಇನ್ನಿಂಗ್ಸ್ ಹಾಗೂ 116ರನ್‌ಗಳಿಂದ ಸೋಲೊಪ್ಪಿಕೊಂಡಿತು.ಕರ್ನಾಟಕ ಪರ ಶ್ರೇಯಸ್‌‍ ಗೋಪಾಲ್‌ (36ಕ್ಕೆ5) ಯಶಸ್ವಿ ಬೌಲರ್‌ ಎನಿಸಿಕೊಂಡರೆ, ವೇಗಿಗಳಾದ ಮನ್ವಂತ್‌ಕುಮಾರ್‌ ಹಾಗೂ ವೈಶಾಕ್‌ ವಿಜಯ್‌ಕುಮಾರ್‌ ತಲಾ ಎರಡು ವಿಕೆಟ್‌ ಪಡೆದರು.ಈ ಗೆಲುವಿನೊಂದಿಗೆ 3 ಪಂದ್ಯಗಳಿಂದ 9 ಅಂಕ ಗಳಿಸಿದ ಕರ್ನಾಟಕ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

ಸಂಕ್ಷಿಪ್ತ ಸ್ಕೋರ್‌:
ತ್ರಿಪುರ ಮೊದಲ ಇನ್ನಿಂಗ್ಸ್ 194, ದ್ವಿತೀಯ ಇನ್ನಿಂಗ್ಸ್ 180
ಕರ್ನಾಟಕ ಮೊದಲ ಇನ್ನಿಂಗ್‌್ಸ 490/9 ಡಿಕ್ಲೇರ್ಡ್

RELATED ARTICLES

Latest News