Homeರಾಜ್ಯಸೌಜನ್ಯ ಕೊಲೆ ಪ್ರಕರಣ : ಮೂವರು ಪೊಲೀಸ್‌‍ ಅಧಿಕಾರಿಗಳ ವಿಚಾರಣೆ

ಸೌಜನ್ಯ ಕೊಲೆ ಪ್ರಕರಣ : ಮೂವರು ಪೊಲೀಸ್‌‍ ಅಧಿಕಾರಿಗಳ ವಿಚಾರಣೆ

ಬೆಂಗಳೂರು,ಅ.29-ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ತೀವ್ರಗೊಂಡಿದ್ದು, ಇಂದು ಈ ಪ್ರಕರಣದ ಅಂದಿನ ತನಿಖಾಧಿಕಾರಿಗಳಾಗಿದ್ದ ಮೂವರು ಪೊಲೀಸ್‌‍ ಅಧಿಕಾರಿಗಳು ಮಂಗಳೂರಿನ ಎಸ್‌‍ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.

ಅಂದಿನ ಬೆಳ್ತಂಗಡಿ ಠಾಣೆ ಸಬ್‌ಇನ್ಸ್ ಪೆಕ್ಟರ್‌ ಯೋಗೇಶ್‌, ಸರ್ಕಲ್‌ ಇನ್‌್ಸಪೆಕ್ಟರ್‌ ಬಾಸ್ಕರ್‌ ರೈ ಹಾಗೂ ಸಿಐಡಿ ಡಿವೈಎಸ್‌‍ಪಿ ರುದ್ರಮುನಿ ಅವರು ಇಂದು ತಮ ತಮ ಫೈಲ್‌ಗಳೊಂದಿಗೆ ಮಂಗಳೂರಿನ ಹಳೆ ಡಿಸಿ ಕಟ್ಟಡದಲ್ಲಿ ತೆರೆಯಲಾಗಿರುವ ಎಸ್‌‍ಐಟಿ ಕಚೇರಿಗೆ ಹಾಜರಾದರು.

ಈ ಮೂವರು ಪೊಲೀಸ್‌‍ ಅಧಿಕಾರಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿರುವ ತನಿಖಾಧಿಕಾರಿ ಮನೋಜ್‌ಕುಮಾರ್‌ ನಾಯಕ್‌ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. 2012 ರಲ್ಲಿ ಘಟನೆ ನಡೆದ ಆರಂಭಿಕ ದಿನಗಳಲ್ಲಿ ಪ್ರಮುಖ ಸಾಕ್ಷಿಗಳನ್ನು ನಾಶಪಡಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದವು.

ಈ ಪ್ರಕರಣದ ಮರುತನಿಖೆಗೆ ಸುಪ್ರಿಂ ಕೋರ್ಟ್‌ ಆದೇಶಿಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವುದರಿಂದ ಎಸ್‌‍ಐಟಿ ತನಿಖೆಯನ್ನು ಚುರುಕುಗೊಳಿಸಿದೆ.
ಇತ್ತೀಚೆಗಷ್ಟೇ ಸೌಜನ್ಯ ತಾಯಿ ಕುಸುಮಾವತಿ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.

ಇದೀಗ ಪ್ರಕರಣದ ತನಿಖೆಯ ಮುಂದುವರೆದ ಭಾಗವಾಗಿ ಈ ಮೂವರು ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌‍ಐಟಿ ನೋಟೀಸ್‌‍ ನೀಡಿತ್ತು. ಈ ಹಿನ್ನಲೆಯಲ್ಲಿ ಅವರುಗಳು ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಎಸ್‌‍ಐಟಿ ಮುಖ್ಯಸ್ಥ ಐಜಿಪಿ ಶಶಿಕುಮಾರ್‌ ಅವರು ನಿನ್ನೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಪ್ರಕರಣದ ಮಾಹಿತಿಗಳನ್ನು ನೀಡಿ ಚರ್ಚಿಸಿದ್ದಾರೆ.

RELATED ARTICLES

Latest News