Homeಬೆಂಗಳೂರುಬೆಂಗಳೂರಲ್ಲಿ ವೃದ್ಧೆ ಕೊಲೆ ಪ್ರಕರಣ : ಪರಿಚಯಸ್ಥರಿಂದಲೇ ಕೃತ್ಯ

ಬೆಂಗಳೂರಲ್ಲಿ ವೃದ್ಧೆ ಕೊಲೆ ಪ್ರಕರಣ : ಪರಿಚಯಸ್ಥರಿಂದಲೇ ಕೃತ್ಯ

ಬೆಂಗಳೂರು,ಅ.29-ವೃದ್ಧೆ ವೆಂಕಟಲಕ್ಷ್ಮಮ ಅವರನ್ನು ಪರಿಚಯಸ್ಥರೇ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂಬುವುದು ಬ್ಯಾಟರಾಯನಪುರ ಠಾಣೆ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ದುಷ್ಕರ್ಮಿಗಳು ಇವರ ಮನೆಗೆ ಬಂದು ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಅವರ ಜೊತೆ ಮಾತನಾಡಿದ್ದಾರೆ ಎಂಬುವುದು ಸಹ ಪೊಲೀಸರ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದೆ.

ನಂತರ ಆರೋಪಿಗಳು ವೆಂಕಟಲಕ್ಷ್ಮಮ ಅವರ ಜೊತೆ ಯಾವುದೋ ವಿಷಯಕ್ಕೆ ಜಗಳವಾಡಿದ್ದಾರೆ. ಒಂದು ಹಂತದಲ್ಲಿ ತಾವು ತಂದಿದ್ದ ಹರಿತವಾದ ಆಯುಧಯಿಂದ ಅವರ ತಲೆ ಹಾಗೂ ಇನ್ನಿತರ ಭಾಗಗಳಿಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ.

ತದನಂತರ ಅವರ ಮನೆಯ ಬೀರುವೊಂದರ ಬಾಗಿಲು ತೆಗೆದು ಅದರಲ್ಲಿರುವ ವಸ್ತುಗಳನ್ನು ಚೆಲ್ಲಿ ಏನನ್ನೋ ಹುಡುಕಾಟ ಮಾಡಿದ್ದಾರೆ. ಇದನ್ನು ನೋಡಿದರೆ ಆರೋಪಿಗಳು ಆಸ್ತಿ ಪತ್ರ ಅಥವಾ ಹಣ, ಆಭರಣಕ್ಕಾಗಿ ಈ ಕೊಲೆ ಮಾಡಿದ್ದಾರೆಂಬುವುದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನು ಬಂಧಿಸಲು ರಚಿಸಲಾಗಿರುವ ನಾಲ್ಕು ವಿಶೇಷ ತಂಡಗಳು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿವೆ. ಪರಾರಿಯಾಗಿರುವ ದುಷ್ಕರ್ಮಿಗಳನ್ನು ಬಂಧಿಸಲು ಈ ತಂಡಗಳು ಹಗಲು-ರಾತ್ರಿ ಶ್ರಮಿಸುತ್ತಿವೆ.

RELATED ARTICLES

Latest News