Homeರಾಜ್ಯಹಾಸನಾಂಬ ದರ್ಶನೋತ್ಸವ 10ನೇ ದಿನ : ಭಾರೀ ಸಂಖ್ಯೆಯಲ್ಲಿ ಭಕ್ತರಿಂದ ದರ್ಶನ

ಹಾಸನಾಂಬ ದರ್ಶನೋತ್ಸವ 10ನೇ ದಿನ : ಭಾರೀ ಸಂಖ್ಯೆಯಲ್ಲಿ ಭಕ್ತರಿಂದ ದರ್ಶನ

ಹಾಸನ,ನ.8- ವಾರಾಂತ್ಯ ಹಾಗೂ ಜಾತ್ರೆಯ ಅಂತಿಮ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಾಸನಾಂಬ ದೇವಿ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದೆ.ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯದ ಜಾತ್ರಾ ಮಹೋತ್ಸವದ ಸಾರ್ವಜನಿಕ ದರ್ಶನದ 10ನೇ ದಿನವಾದ ಇಂದು ರಾಜ್ಯದ ವಿವಿಧ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಧರ್ಮದರ್ಶನದ ಸಾಲುಗಳು 300 ಹಾಗೂ 1000 ರೂ. ವಿಶೇಷ ದರ್ಶನದ ಸಾಲುಗಳೂ ಕೂಡಾ ಭಕ್ತರಿಂದ ತುಂಬಿ ತುಳುಕುತ್ತಿವೆ.ದೇವಿಯ ದರ್ಶನಕ್ಕೆ ಇನ್ನೆರೆಡು ದಿನ ಮಾತ್ರ ಅವಕಾಶವಿದ್ದು, ಗಣ್ಯರು, ನಟ-ನಟಿಯರು, ಜನಪ್ರತಿನಿಧಿಗಳು, ಭಕ್ತರು ಆಗಮಿಸಿ ದೇವಿಯ ಕೃತಪೆಗೆ ಪಾತ್ರರಾಗಿದ್ದಾರೆ.

ಸರದಿ ಸಾಲಿನ ನಿರ್ವಹಣೆಗಾಗಿ ಪೊಲೀಸ್‌‍ ಇಲಾಖೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತಿದೆ. ಜನಸಂದಣಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೇವಾಲಯದ ಆವರಣದೊಳಗೆ ಮೊಬೈಲ್‌ ಬಳಕೆ ನಿರ್ಬಂಧಿಸಲಾಗಿದೆ. ಫೋಟೊ ಮತ್ತು ವಿಡಿಯೋ ಚಿತ್ರೀಕರಣ ಕೂಡಾ ನಿಷೇಧಿಸಲಾಗಿದೆ. ತ್ವರಿತ ದರ್ಶನ ಪಡೆದು ಉಳಿದ ಭಕ್ತರಿಗೆ ಅನುಕೂಲ ಮಾಡಿಕೊಡಿ ಎಂದು ಪೊಲೀಸರು ಹಾಗೂ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಭಕ್ತರಲ್ಲಿ ಮನವಿ ಮಾಡುತ್ತಿದ್ದಾರೆ.

RELATED ARTICLES

Latest News