ಬೆಂಗಳೂರು, ನ.8-ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಲಿತ ದಲಿತ ಎಂದು ಸಂಬೋಧಿಸಿ, ಅವರಿಗೂ ಅವರ ತಂದೆ ಮಲ್ಲಿಕಾರ್ಜುನ ಖರ್ಗೆಗೂ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಎಂದು ಪ್ರಶ್ನಿಸಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಯುವ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ, ಬೆಂಗಳೂರಿನ ವಿವಿಧೆಡೆ ಪ್ರತ್ಯುತ್ತರ ಬ್ಯಾನರ್ಗಳನ್ನು ಅಳವಡಿಸಿದೆ. ಬ್ಯಾನರ್ಗಳಲ್ಲಿ ಹೌದು, ನಾವು ಬಲಿತ ದಲಿತನೇ ಸುಮಾರಣ್ಣ. ನಾನು ಬೆಳೆದಿದ್ದು ನಮ ಸಂವಿಧಾನ ಮತ್ತು ಕಾಂಗ್ರೆಸ್ ನಿಂದಲೇ; ನಿಮ ಮನೆಯ ಆಲೂಗಡ್ಡೆಯಿಂದಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
