Homeರಾಷ್ಟ್ರೀಯಬಸ್ತಾರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತಾರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತಾರ್‌,ನ.8- ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌‍ಗಢದ ಬಸ್ತಾರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು. ದೇಶದ ಗಡಿಗಳಲ್ಲಿ ಹಾಗೂ ಆಂತರಿಕ ಭದ್ರತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಯನ್ನು ಪ್ರಧಾನಿ ಅಭಿನಂದಿಸಿ, ಅವರ ಸೇವೆ ಮತ್ತು ತ್ಯಾಗವನ್ನು ಶ್ಲಾಘಿಸಿದರು.

ಭದ್ರತಾ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ದೀಪಾವಳಿ ಕುಟುಂಬ ಸದಸ್ಯರು ಮತ್ತು ಪ್ರೀತಿಪಾತ್ರರು ಒಟ್ಟಾಗಿ ಸೇರಿ ಆಚರಿಸುವ ಹಬ್ಬವಾಗಿದೆ. ದೇಶದ ರಕ್ಷಣೆಗೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಲು ತಾವು ಬಸ್ತಾರ್‌ಗೆ ಬಂದಿರುವುದಾಗಿ ಹೇಳಿದರು.

ಗಡಿಗಳಲ್ಲಿ ಮತ್ತು ದೇಶದೊಳಗೆ ರಾಷ್ಟ್ರವನ್ನು ರಕ್ಷಿಸುತ್ತಿರುವವರು, ರಾಷ್ಟ್ರದ ರಕ್ಷಕರು ಹಾಗೂ ಭಾರತ ಮಾತೆಯ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರು. ನೀವೆಲ್ಲರೂ ನನ್ನ ಕುಟುಂಬ ಸದಸ್ಯರು ಎಂದರು.

ದೇಶದ ಕೋಟ್ಯಂತರ ಜನರು ಹಾಗೂ ವಿದೇಶಗಳಲ್ಲಿರುವ ಭಾರತೀಯರು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭದಲ್ಲಿ, ಭದ್ರತಾ ಸಿಬ್ಬಂದಿ ತಮ ಕರ್ತವ್ಯದಿಂದಾಗಿ ಕುಟುಂಬದಿಂದ ದೂರ ಉಳಿದು ದೇಶದ ಸುರಕ್ಷತೆಯನ್ನು ಕಾಪಾಡುತ್ತಿದ್ದಾರೆ ಎಂದು ಹೇಳಿದರು.

ದೀಪಾವಳಿ ಸಂದರ್ಭದಲ್ಲಿ ಅನೇಕರು ತಮ ಕುಟುಂಬದವರೊಂದಿಗೆ ಹಬ್ಬ ಆಚರಿಸಲು ದೂರದ ಊರುಗಳಿಂದ ಮನೆಗೆ ಮರಳುತ್ತಾರೆ. ಆದರೆ ರಾಷ್ಟ್ರದ ಭದ್ರತೆಯನ್ನು ಖಚಿತಪಡಿಸಲು ಕರ್ತವ್ಯದಲ್ಲಿರುವ ಸಿಬ್ಬಂದಿ ತಮ ಕುಟುಂಬಗಳಿಂದ ದೂರವಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಿಬ್ಬಂದಿಯೊಂದಿಗೆ ಹಬ್ಬ ಆಚರಿಸುವುದು ತಮ ಪಾಲಿಗೆ ವಿಶೇಷ ಎಂದು ಮೋದಿ ಹೇಳಿದರು.

RELATED ARTICLES

Latest News