ನಿತ್ಯ ನೀತಿ : ಮನುಷ್ಯ ಬಹಳ ವಿಚಿತ್ರ. ಅವನಿಗೆ ಜ್ಞಾನದ ಬಗ್ಗೆ ಅಹಂಕಾರವಿದೆ. ಆದರೆ ತನ್ನ ಅಹಂಕಾರದ ಬಗ್ಗೆ ಜ್ಞಾನವಿಲ್ಲ.
ಪಂಚಾಂಗ : ಸೋಮವಾರ, 09-11-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಹೇಮಂತ / ಮಾಸ: ಆಶ್ವಯುಜ / ಪಕ್ಷ: ಕೃಷ್ಣ / ತಿಥಿ: ಅಮಾವಾಸ್ಯೆ / ನಕ್ಷತ್ರ: ಸ್ವಾತಿ / ಯೋಗ: ಸೌಭಾಗ್ಯ / ಕರಣ: ಕಿಂಸ್ತುಘ್ನ
ಸೂರ್ಯೋದಯ – ಬೆ.6.16
ಸೂರ್ಯಾಸ್ತ – 05.52
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಪೋಷಕರ ಸೇವೆಯಲ್ಲಿ ಆಸಕ್ತಿ ವಹಿಸಿ ಮಾಡುವುದರಿಂದ ತೊಂದರೆಗಳಿಂದ ಮುಕ್ತರಾಗುವಿರಿ.
ವೃಷಭ: ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಉತ್ತಮ ಅವಕಾಶಗಳು ಸಿಗುವ ಸಾಧ್ಯತೆ ಇದೆ.
ಮಿಥುನ: ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭ ದೊರೆಯಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ.
ಕಟಕ: ವಾಹನಗಳು ಮತ್ತು ಯಂತ್ರೋಪಕರಣ ಗಳಿಂದ ಗಾಯವಾಗುವ ಸಂಭವವಿದೆ, ಎಚ್ಚರವಿರಲಿ.
ಸಿಂಹ: ಇಲ್ಲಸಲ್ಲದ ವಿಚಾರ ಗಳಿಗೆ ಕಿವಿಗೊಟ್ಟು ಮನಸ್ಸಿನ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ.
ಕನ್ಯಾ: ಆರ್ಥಿಕ ನಷ್ಟ ಉಂಟಾಗಬಹುದು. ಗೌರವಕ್ಕೆ ಧಕ್ಕೆಯಾಗಲಿದೆ.
ತುಲಾ: ವಿನಾಕಾರಣ ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ.
ವೃಶ್ಚಿಕ: ಒಡಹುಟ್ಟಿದವರಿಂದ ದೂರವಾಗಿದ್ದರೆ ಅವರೊಂದಿಗೆ ಮಾತನಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿ.
ಧನುಸ್ಸು: ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಗಳು ದೂರವಾಗಿ ಉತ್ತಮ ಬದಲಾವಣೆಗಳಾಗಲಿವೆ.
ಮಕರ: ಹಣ ಸುಲಭವಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡದಿರಿ.
ಕುಂಭ: ಹಣದ ಕೊರತೆ ಇರುವುದಿಲ್ಲ. ಹಿಂದೆ ಮಾಡಿದ್ದ ಸಾಲವನ್ನು ಸಹ ತೀರಿಸುವಿರಿ.
ಮೀನ: ಉದ್ಯೋಗಸ್ಥರಿಗೆ ವಿಶೇಷ ಲಾಭದ ಅವಕಾಶಗಳು ಸಿಗಲಿವೆ. ಉತ್ತಮವಾದ ದಿನ.
