Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-11-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-11-2026)

ನಿತ್ಯ ನೀತಿ : ನಗುವಿನ ಹಿಂದೆ ನೋವು ಇದ್ದರೂ ಪರವಾಗಿಲ್ಲ, ನಂಬಿಕೆ ಹಿಂದೆ ಮೋಸ ಇರಬಾರದು.

ಪಂಚಾಂಗ : ಶನಿವಾರ, 21-11-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಏಕಾದಶಿ / ನಕ್ಷತ್ರ: ಉ.ಭಾ. / ಯೋಗ: ಸಿದ್ಧಿ / ಕರಣ: ಬವ
ಸೂರ್ಯೋದಯ – ಬೆ.6.21
ಸೂರ್ಯಾಸ್ತ – 05.51
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ: ಉದ್ಯೋಗದ ಸ್ಥಳದಲ್ಲಿ ಹೆಸರು ಗಳಿಸುವಿರಿ. ಸಮಯ-ಸಂದರ್ಭಗಳು ನಿಮ್ಮ ಪರವಾಗಿವೆ.
ವೃಷಭ: ಪ್ರೇಮ ಸಂಬಂಧದಲ್ಲಿ ಸೂಕ್ಷ್ಮತೆ ಇರಲಿದೆ.ಅಧಿಕಾರಿ ವರ್ಗಕ್ಕೆ ಉತ್ತಮ ದಿನ.
ಮಿಥುನ: ಬೇರೆಯವರೊಂದಿಗೆ ಅನಗತ್ಯವಾಗಿ ವಾದ-ವಿವಾದ ಮಾಡುವುದನ್ನು ನಿಲ್ಲಿಸಿ.

ಕಟಕ: ಕುಟುಂಬದ ಸದಸ್ಯರು ಆಧ್ಯಾತ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವರು.
ಸಿಂಹ: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು.
ಕನ್ಯಾ: ಕಚೇರಿಯಲ್ಲಿ ಅ ಕಾರಿ ಗಳೊಂದಿಗೆ ಯಾವುದೇ ರೀತಿಯ ವಾದಕ್ಕೆ ಇಳಿಯಬೇಡಿ.

ತುಲಾ: ಪ್ರಯಾಣ ಕೂಡ ಲಾಭಕರವಾಗಿರುತ್ತದೆ. ಶುಭಸುದ್ದಿ ಕೇಳುವಿರಿ.
ವೃಶ್ಚಿಕ: ತಂದೆ-ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆಯಿಂದಿರಿ.
ಧನುಸ್ಸು: ಉದ್ಯೋಗವನ್ನು ಹುಡುಕುತ್ತಿದ್ದರೆ ಸಕಾರಾತ್ಮಕ ಫಲಿತಾಂಶ ಪಡೆಯುವಿರಿ.

ಮಕರ: ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಉಂಟಾಗಿ ನೆಮ್ಮದಿ ಹಾಳಾಗಬಹುದು.
ಕುಂಭ: ಕೆಲಸದ ಸ್ಥಳದಲ್ಲಿ ವ್ಯವಹರಿಸುವಾಗ ಬಹಳ ಜಾಗರೂಕರಾಗಿರುವುದು ಒಳಿತು.
ಮೀನ: ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ ಮತ್ತು ಉಳಿತಾಯದ ಕಡೆ ಗಮನ ಹರಿಸುವುದು ಉತ್ತಮ.

RELATED ARTICLES

Latest News