Thursday, April 16, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-01-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-01-2026)

Today's Horoscope

ನಿತ್ಯ ನೀತಿ : ಜೀವನದ ಗಣಿತ ಹಣದಿಂದ ಕೂಡಿಸಿದರೆ ಸಿರಿವಂತ, ಗುಣದಿಂದ ಗುಣಿಸಿದರೆ ಗುಣವಂತ, ಭಾವನೆಗಳಿಂದ ಭಾಗಿಸಿದರೆ ಭಾಗ್ಯವಂತ, ಇದ್ದದ್ದನ್ನು ಕಳೆದರೆ ಸಾಲವಂತ, ಇವರೆಲ್ಲರನ್ನು ಗುಣಿಸಿ, ಭಾಗಿಸಿ, ಕೂಡಿಸಿ, ಕಳೆಯುವವನು ಭಗವಂತ.

ಪಂಚಾಂಗ : ಶುಕ್ರವಾರ, 16-01-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಪುಷ್ಯ / ಪಕ್ಷ: ಕೃಷ್ಣ / ತಿಥಿ: ತ್ರಯೋದಶಿ / ನಕ್ಷತ್ರ: ಮೂಲಾ ಪೂರ್ಣ / ಯೋಗ: ಧ್ರುವ / ಕರಣ: ಗರಜ
ಸೂರ್ಯೋದಯ – 06.46
ಸೂರ್ಯಾಸ್ತ – 6.13
ರಾಹುಕಾಲ – 10.30- 12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :

ಮೇಷ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಬಹಳ ಉತ್ತಮವಾದ ದಿನ. ದೂರ ಪ್ರಯಾಣ ಮಾಡುವಿರಿ.
ವೃಷಭ: ನಿಮ್ಮ ವರ್ಚಸ್ಸಿನ ಪ್ರಭಾವದಿಂದ ವಿನೂತನ ವಾದ ಅವಕಾಶಗಳು ದೊರೆಯಲಿವೆ.
ಮಿಥುನ: ಪೊಲೀಸ್‌ ಅಽಕಾರಿಗಳ ಜವಾಬ್ದಾರಿ ಕಡಿಮೆಯಾಗಲಿದೆ.

ಕಟಕ: ಹಿರಿಯರೊಂದಿಗೆ ಮನಸ್ತಾಪ ಉಂಟಾಗಬಹುದು. ಸಹನೆಯಿಂದ ವರ್ತಿಸಿ.
ಸಿಂಹ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್‌ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.
ಕನ್ಯಾ: ನಿಮ್ಮ ಬಗ್ಗೆ ನಿಮಗೆ ಒಂದು ರೀತಿ ಹೆಮ್ಮೆ ಇರುತ್ತದೆ.

ತುಲಾ: ಕಣ್ಣಿನ ತೊಂದರೆ ಇರುವುದರಿಂದ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ.
ವೃಶ್ಚಿಕ: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡು ವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ಧನುಸ್ಸು: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು.

ಮಕರ: ಹೊಟೇಲ್‌ ವ್ಯಾಪಾರಿಗಳಿಗೆ ಸಾಧಾರಣ ಲಾಭ. ಆರೋಗ್ಯದಲ್ಲಿ ಏರುಪೇರಾಗಲಿದೆ.
ಕುಂಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಶತ್ರುಗಳ ಕಾಟ ಹೆಚ್ಚಾಗಬಹುದು.
ಮೀನ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.

RELATED ARTICLES

Latest News