Thursday, April 16, 2026
Homeಬೆಂಗಳೂರುಬೆಂಗಳೂರು : ಹುಡುಗರಂತೆ ವೇಷ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಯುವತಿಯರು ಸೆರೆ

ಬೆಂಗಳೂರು : ಹುಡುಗರಂತೆ ವೇಷ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಯುವತಿಯರು ಸೆರೆ

Two young women arrested for robbing houses while disguised as boys

ಬೆಂಗಳೂರು,ಜ.16- ಹುಡುಗರ ರೀತಿ ಡ್ರಸ್‌‍ ಮಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಟ್ಯಾನರಿ ರಸ್ತೆಯ ನಿವಾಸಿಗಳಾದ ಶಾಲು ಮತ್ತು ನೀಲು ಬಂಧಿತ ಯುವತಿಯರು.

ಈ ಇಬ್ಬರು ಹುಡುಗರ ರೀತಿ ಪ್ಯಾಂಟ್‌, ಶರ್ಟ್‌ , ಟೋಪಿ ಹಾಕಿಕೊಂಡು ಹಗಲು ವೇಳೆಯಲ್ಲೆ ಬೈಕ್‌ನಲ್ಲಿ ಸುತ್ತಾಡುತ್ತಾ ನಿರ್ಜನ ಪ್ರದೇಶದ ಸುತ್ತಮುತ್ತ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು.

ಜ.13 ರಂದು ಸಂಪಿಗೆಹಳ್ಳಿಯ ನಿವಾಸಿ ಸಂಗಮೇಶ್‌ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಇಬ್ಬರು ಹುಡುಗರು ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಾಗಲೇ ಅವರು ಹುಡುಗರಲ್ಲ. ಹುಡುಗಿಯರು ಎನ್ನುವುದು ಗೊತ್ತಾಗಿ ಪೊಲೀಸರು ಒಂದು ಕ್ಷಣ ಶಾಕ್‌ ಆಗಿದ್ದಾರೆ.

ಈ ಇಬ್ಬರು ಹುಡುಗರ ರೀತಿ ವೇಷ ಧರಿಸಿಕೊಂಡು ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದ್ದು, ಆ ಇಬ್ಬರು ಯುವತಿಯರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

RELATED ARTICLES

Latest News