Thursday, April 16, 2026
Homeರಾಜ್ಯಬಳ್ಳಾರಿ ಗಲಭೆ : ಸಿಬಿಐ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್‌‍ ವಿರುದ್ಧ ರಣಕಹಳೆ ಮೊಳಗಿಸಿದ ಬಿಜೆಪಿ

ಬಳ್ಳಾರಿ ಗಲಭೆ : ಸಿಬಿಐ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್‌‍ ವಿರುದ್ಧ ರಣಕಹಳೆ ಮೊಳಗಿಸಿದ ಬಿಜೆಪಿ

Bellary riots: BJP protests against Congress, demands CBI investigation

ಬಳ್ಳಾರಿ,ಜ.17- ನಗರದಲ್ಲಿ ಇತ್ತೀಚಿಗೆ ನಡೆದ ಬ್ಯಾನರ್‌ ಗಲಭೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದು ಹಾಗೂ ಶಾಸಕ ನಾರಾ ಭರತ್‌ ರೆಡ್ಡಿ ಮತ್ತವರ ಬೆಂಬಲಿಗರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌‍ ವಿರುದ್ಧ ಬಿಜೆಪಿ ರಣಕಹಳೆ ಮೊಳಗಿಸಿದೆ.

ಇಲ್ಲಿನ ಎಪಿಎಂಸಿ ಮೈದಾನದಲ್ಲಿ ನಡೆದ ಬಿಜೆಪಿ ಪ್ರತಿಭಟನೆ ಮತ್ತು ಸಮಾವೇಶದಲ್ಲಿ ಬಳ್ಳಾರಿ ಹಾಗೂ ವಿಜಯನಗರ ಸೇರಿದಂತೆ ಮತ್ತಿತರ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಸಮಾವೇಶದಲ್ಲಿ ಮಾತನಾಡಿದ ಬಿಜೆಪಿಯ ನಾಯಕರು, ಕಾಂಗ್ರೆಸ್‌‍ ಹಾಗೂ ಶಾಸಕ ನಾರಾ ಭರತ್‌ ರೆಡ್ಡಿ ವಿರುದ್ಧ ಅಕ್ಷರಶಃ ಬೆಂಕಿ ಉಗುಳಿದರು. ಘಟನೆ ನಡೆದು 15 ದಿನಗಳು ಆದರೂ ಈವರೆಗೂ ಶಾಸಕ ನಾರಾಭರತ್‌ ರೆಡ್ಡಿ ಅವರ ಆಪ್ತ ಸತೀಶ್‌ ರೆಡ್ಡಿ ಮತ್ತು ಬೆಂಬಲಿಗರನ್ನು ಏಕೆ ಬಂಧಿಸಿಲ್ಲ?

ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಇದನ್ನು ಮುಚ್ಚಿ ಹಾಕುವ ದುರುದ್ದೇಶದಿಂದಲೇ ಸಿಐಡಿಗೆ ವಹಿಸಲಾಗಿದೆ. ಇದು ಸರಕಾರದ ಮೂಗಿನಡಿ ತನಿಖೆ ನಡೆಯುತ್ತಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಅಂದು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿಯನ್ನು ರಿಪಬ್ಲಿಕ್‌ ಆಫ್‌ ಬಳ್ಳಾರಿಯಿಂದ ಮುಕ್ತಗೊಳಿಸಿದ್ದೇವೆ ಎಂದು ಡಂಗುರ ಹೊಡೆಯುತ್ತಿದ್ದಾರೆ. ಈಗ ಇಲ್ಲಿ ನಡೆಯುತ್ತಿರುವುದಾದರೂ ಏನು? ಎಂದು ಪ್ರಶ್ನೆ ಮಾಡಿದರು.
ಶಾಸಕ ನಾರಾಭರತ್‌ ರೆಡ್ಡಿ ರಕ್ಷಣೆ ಮಾಡುವುದಕ್ಕಾಗಿಯೇ ಸರ್ಕಾರ ಅವರನ್ನು ಬಂಧಿಸುತ್ತಿಲ್ಲ. ಬಂಧಿಸಿದರೆ ಕಾಂಗ್ರೆಸ್‌‍ ಸರ್ಕಾರದ ಮರ್ಯಾದೆ ಹಾಳಾಗುತ್ತದೆ ಎಂದು ಸಿಐಡಿಗೆ ವಹಿಸಿ ತಿಪ್ಪೇ ಸಾರಿಸುವ ಕೆಲಸ ಮಾಡುತ್ತಿದೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಶಪಥ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಮತ್ತು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹುಬ್ಬಳ್ಳಿಯಲ್ಲಿ ಮಹಿಳೆಯ ಮೇಲೆ ಪೊಲೀಸರು ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದಾರೆ, ಅಂಕೋಲದಲ್ಲಿ ದಲಿತ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ಹಾಡುಹಗಲೇ ಕಗ್ಗೊಲೆಯಾಗಿದೆ. ನಮ ಪಕ್ಷದ ಶಾಸಕಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕಾಮೆಂಟ್‌ ಮಾಡುತ್ತಾರೆ, ಸರ್ಕಾರ ಸೌಜನ್ಯಕ್ಕಾದರೂ ಅವರನ್ನು ಬಂಧಿಸಿಲ್ಲ ಎಂದು ಕಿಡಿಕಾರಿದರು.

ಪೊಲೀಸ್‌‍ ಠಾಣೆಗಳು ಇಂದು ಕಾಂಗ್ರೆಸ್‌‍ ಭವನಗಳಾಗಿ ಪರಿವರ್ತನೆಯಾಗಿವೆ ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೂ ಮತ ಬ್ಯಾಂಕ್‌ ಕೈ ಕೊಡಬಹುದೆಂಬ ಭೀತಿಯಿಂದ ಕ್ರಿಮಿನಲ್‌ಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌‍ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆಕೊಟ್ಟರು.

ಬಳ್ಳಾರಿ ಇಂದು ರಿಪಬ್ಲಿಕ್‌ ಆಫ್‌ ಕಾಂಗ್ರೆಸ್‌‍ ಆಗಿದೆ. ನಮಲ್ಲಿನ ಕೆಲವು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಅವರಲ್ಲಿ ಕೆಲವರು ಆಕಸಿಕವಾಗಿ ಶಾಸಕರಾಗಿದ್ದಾರೆ. ಆದರೆ ಅವರು ಹೋಗುತ್ತಿರುವ ದಾರಿ ನಡೆದುಕೊಳ್ಳುವ ರೀತಿನೀತಿಗಳು ಜನವಿರೋಧಿಯಾಗಿವೆ. ಇಂಥ ಶಾಸಕನನ್ನು ಮೊದಲು ಮನೆಗೆ ಕಳಿಸಿ ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಸಿದ್ದರಾಮಯ್ಯನವರು ಕುರ್ಚಿಯಿಂದ ಇಳಿಯುವ ಮೊದಲು ನ್ಯಾಯಯುತ ತನಿಖೆ ನಡೆಸಿ ನಾರಾ ಭರತ ರೆಡ್ಡಿಯನ್ನು ತಕ್ಷಣ ಬಂಧಿಸಬೇಕು. ಆಗ ಮಾತ್ರ ನೀವು ಉತ್ತಮ ಮುಖ್ಯಮಂತ್ರಿಯಾಗಿ ನೆನಪಿಸಿಕೊಳ್ಳುತ್ತೀರಿ. ಇಲ್ಲದಿದ್ದರೆ, ನೀವು ಕಪ್ಪು ಚುಕ್ಕೆಯೊಂದಿಗೆ ಮನೆಗೆ ಹೋಗುತ್ತೀರಿ ಎಂದು ಬಿಜೆಪಿ ನಾಯಕರು ಎಚ್ಚರಿಸಿದರು.

ಕುರ್ಚಿಯಿಂದ ಇಳಿಯುವ ಮೊದಲು, ಕಪ್ಪು ಚುಕ್ಕೆ ಬಿಡದೆ, ನ್ಯಾಯಯುತ ತನಿಖೆ ನಡೆಸಿ ನರ ಭರತ ರೆಡ್ಡಿಯನ್ನು ತಕ್ಷಣ ಬಂಧಿಸಿ. ಆಗ ಮಾತ್ರ ನೀವು ಉತ್ತಮ ಮುಖ್ಯಮಂತ್ರಿಯಾಗಿ ನೆನಪಿಸಿಕೊಳ್ಳುತ್ತೀರಿ. ಇಲ್ಲದಿದ್ದರೆ ನೀವು ಕಪ್ಪು ಚುಕ್ಕೆಯೊಂದಿಗೆ ಮನೆಗೆ ಹೋಗುತ್ತೀರಿ ಎಂದು ಬಿಜೆಪಿ ನಾಯಕರು ಎಚ್ಚರಿಸಿದರು.

ಕಾಂಗ್ರೆಸ್‌‍ ತನ್ನನ್ನು ತಾನು ರಕ್ಷಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಸತ್ಯಗಳನ್ನು ತಿರುಚುತ್ತಿದೆ. ನಾರಾ ಭರತ್‌ ರೆಡ್ಡಿಗೆ ಸಂಬಂಧಿಸಿದ ಖಾಸಗಿ ಗನ್‌ಮ್ಯಾನ್‌ ಒಬ್ಬ ಕಾಂಗ್ರೆಸ್‌‍ ಕಾರ್ಯಕರ್ತನ ಮೇಲೆ ಗುಂಡು ಹಾರಿಸಿರುವುದನ್ನು ಮುಚ್ಚಲಾಗುತ್ತಿದೆ. ಈಗ ಜಗತ್ತಿಗೆ ನಿಖರವಾಗಿ ಏನಾಗಿದೆ ಎಂದು ತಿಳಿದಿದೆ. ಆದರೂ ಏಕೆ ಅವರನ್ನು ಬಂಧಿಸಲಾಗಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌‍ ಅಪರಾಧಿಗಳನ್ನು ಮಾತ್ರ ಬೆಂಬಲಿಸುತ್ತದೆ. ಡಿ.ಕೆ ಶಿವಕುಮಾರ್‌ ಅವರಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಒಬ್ಬ ಆರೋಪಿಯು ಇಂತಹ ಕ್ರಿಮಿನಲ್‌ ಹಿನ್ನಲೆಯಲ್ಲಿ ಉಳ್ಳವರಿಗೆ ಬೆಂಬಲಿಸಲು ಸಾಧ್ಯ ಎಂದು ಬಿಜೆಪಿ ನಾಯಕರು ಟೀಕಾ ಪ್ರಹಾರ ನಡೆಸಿದರು.
ಸಮಾವೇಶದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಜನಾರ್ದನರೆಡ್ಡಿ, ಶ್ರೀರಾಮುಲು, ಸಂಸದ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್‌ ರೆಡ್ಡಿ, ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮಯಿ, ಶಾಸಕರಾದ ಸುನೀಲ್‌ಕುಮಾರ್‌, ದೊಡ್ಡನಗೌಡ ಪಾಟೀಲ್‌ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

RELATED ARTICLES

Latest News