Homeರಾಜ್ಯಪಿಜಿ ವೈದ್ಯಕೀಯ 3ನೇ ಸುತ್ತು : ಇಂದಿನಿಂದ ನೋಂದಣಿಗೆ ಅವಕಾಶ

ಪಿಜಿ ವೈದ್ಯಕೀಯ 3ನೇ ಸುತ್ತು : ಇಂದಿನಿಂದ ನೋಂದಣಿಗೆ ಅವಕಾಶ

PG Medical Round 3: Registration open from today

ಬೆಂಗಳೂರು, ಜ.18-ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೂಚನೆ ಮೇರೆಗೆ ಪಿಜಿನೀಟ್‌-2025 ರ ಪಿಜಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಕನಿಷ್ಠ ಅರ್ಹತಾ ಅಂಕಗಳನ್ನು ಕಡಿಮೆಗೊಳಿಸಿ ಪರಿಷ್ಕರಿಸಿರುವುದರಿಂದ 3ನೇ ಸುತ್ತಿನ (ಮಾಪ್‌-ಅಪ್‌) ಸೀಟು ಹಂಚಿಕೆಗಾಗಿ ಅರ್ಹ ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಇದಕ್ಕಾಗಿ ಆನ್‌ಲೈನ್‌ ನೋಂದಣಿ, ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗಾಗಿ ಪ್ರಾಧಿಕಾರದ ಪೋರ್ಟಲ್‌ ಅನ್ನು ಇಂದಿನಿಂದ ಜ.26ರ ಬೆಳಿಗ್ಗೆ 11ರವರೆಗೆ ತೆರೆದಿರಲಾಗುತ್ತದೆ . 3ನೇ ಸುತ್ತಿನಲ್ಲಿ ಲಭ್ಯವಾಗುವ ಸೀಟುಗಳ ಹಂಚಿಕೆಗೆ ಮಾತ್ರ ಇತರೆ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಬಹುದು ಎಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆೆ.

ಮುಂದಿನ ಯಾವುದೇ ಸುತ್ತಿನ ಸೀಟು ಹಂಚಿಕೆಗೆ ಆನ್‌ಲೈನ್‌ ನೋಂದಣಿ ಮಾಡಿಕೊಳ್ಳಲು / ಅರ್ಜಿ ಸಲ್ಲಿಸಲು ಅವಕಾಶಗಳನ್ನು ನೀಡುವುದಿಲ್ಲ. 3ನೇ ಸುತ್ತಿಗೆ ಲಭ್ಯವಿರುವ ಸೀಟುಗಳ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ರದ್ದುಗೊಳ್ಳಬಹುದಾದ ಅಥವಾ ಹೊಸದಾಗಿ ಸೇರ್ಪಡೆಯಾಗುವ ಸೀಟುಗಳು ಇದ್ದಲ್ಲಿ ಅವನ್ನೂ ಹಂಚಿಕೆಗೆ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಪರಿಷ್ಕೃತ ಮಾಹಿತಿಗಾಗಿ ಆಗಿಂದಾಗ್ಗೆ ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಬೇಕು ಎಂದು ಹೇಳಿದೆ.

ಇದುವರೆಗೆ ನೋಂದಣಿ ಮಾಡದಿರುವ ಪಿಜಿ ವೈದ್ಯಕೀಯ ಅರ್ಹ ಅಭ್ಯರ್ಥಿಗಳೂ ನೋಂದಣಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

RELATED ARTICLES
spot_img

Latest News