Wednesday, April 15, 2026
Homeರಾಷ್ಟ್ರೀಯಮಹಿಳೆಯರ ಜೊತೆ ಪುರುಷರಿಗೂ ಫ್ರೀ ಬಸ್‌‍ : ರಂಗೇರಿದ ತಮಿಳುನಾಡು ಚುನಾವಣಾ ಕಣ

ಮಹಿಳೆಯರ ಜೊತೆ ಪುರುಷರಿಗೂ ಫ್ರೀ ಬಸ್‌‍ : ರಂಗೇರಿದ ತಮಿಳುನಾಡು ಚುನಾವಣಾ ಕಣ

Free bus for men along with women: Tamil Nadu election Politics

ಚೆನ್ನೈ, ಜ.18- ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪಕ್ಷವು ಬರಪೂರ ಕೊಡುಗೆಗಳನ್ನು ಘೋಷಣೆ ಮಾಡಿದೆ. ಎಐಡಿಎಂಕೆ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್‌‍ ಸೇವೆ ವಿಸ್ತರಣೆ ಮಾಡುವುದಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ.

ಇಷ್ಟೇ ಅಲ್ಲದೇ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಲಾಗುವುದು. ಇದರೊಟ್ಟಿಗೆ ಪಕ್ಷವು ಸಾಮಾಜಿಕ ನ್ಯಾಯದ ಪರವಾಗಿ ಹೋರಾಡಲಿದ್ದು, ಜನರ ಕಲ್ಯಾಣಕ್ಕಾಗಿ ಕೆಲ ಕೊಡುಗೆಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

  1. ಮಹಿಳಾ ಕಲ್ಯಾಣ: (ಕುಲ ವಿಳಕ್ಕು ಯೋಜನೆ)
    ಸಮಾಜದಲ್ಲಿ ಆರ್ಥಿಕ ಸಮತೋಲನ ಕಾಯ್ದುಕೊಳ್ಳಲು, ಎಲ್ಲಾ ಕುಟುಂಬ ಕಾರ್ಡ್‌ಸಸ ಹೊಂದಿರುವವರಿಗೆ ಕುಲವಿಳಕ್ಕು ಯೋಜನೆಯ ಮೂಲಕ ಮಾಸಿಕ 2,000 ರೂ. ಆರ್ಥಿಕ ಸಹಾಯ.
  2. ಪುರುಷರಿಗೂ ಫ್ರೀ ಬಸ್‌‍
    ನಗರ ಬಸ್‌‍ಗಳಲ್ಲಿ ಪ್ರಯಾಣಿಸುವ ಪುರುಷರಿಗೂ ಉಚಿತ ಬಸ್‌‍ ಪ್ರಯಾಣ ಯೋಜನೆಯನ್ನು ವಿಸ್ತರಿಸಲಾಗುವುದು. ಜೊತೆಗೆ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್‌‍ ಸೇವೆ ಮುಂದುವರಿಕೆ.
  3. ಎಲ್ಲರಿಗೂ ಮನೆ (ಅಮ ಇಲ್ಲಂ ಯೋಜನೆ)
    ಅಮ ಇಲ್ಲಂ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಮನೆ ಇಲ್ಲದವರಿಗೆ ಭೂಮಿ ಖರೀದಿಸಿ ಮನೆ ನಿರ್ಮಿಸಿಕೊಡುವುದು. ಅದೇ ರೀತಿ ನಗರ ಪ್ರದೇಶಗಳಲ್ಲಿ ಸೂರಿಲ್ಲದ ಪ್ರತಿಯೊಬ್ಬರಿಗೂ ಅಪ್ಟಾರ್ಟ್‌ಮೆಂಟ್‌ಗಳ ನಿರ್ಮಾಣ .
  4. ಯೋಜನೆ 150 ದಿನಗಳಿಗೆ ಹೆಚ್ಚಳ
    100 ದಿನಗಳ ಉದ್ಯೋಗ ಯೋಜನೆಯನ್ನು ಗ್ರಾಮೀಣ ಪ್ರದೇಶಗಳ ಅಭಿವದ್ಧಿಗಾಗಿ 150 ದಿನಗಳಿಗೆ ಹೆಚ್ಚಿಸುವುದಾಗಿ ಎಐಡಿಎಂಕೆ ಭರವಸೆ ನೀಡಿದೆ.
  5. ಅಮ ದ್ವಿಚಕ್ರ ವಾಹನ ವಿತರಣಾ ಯೋಜನೆ
    ಒಟ್ಟು 5 ಲಕ್ಷ ಮಹಿಳೆಯರಿಗೆ ಅಮ ದ್ವಿಚಕ್ರ ವಾಹನ ವಿತರಣೆ, ಜೊತೆಗೆ 25,000 ರೂ. ಸಹಾಯಧನವನ್ನೂ ನೀಡಲಾಗುವುದು ಎಂದು ಎಡಪ್ಪಾಡಿ ಪಳನಿಸ್ವಾಮಿ ತಿಳಿಸಿದ್ದಾರೆ.
RELATED ARTICLES

Latest News