Saturday, April 18, 2026
Homeರಾಜ್ಯನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು..?

ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು..?

What did Karnataka get in the budget?

ನವದೆಹಲಿ,ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್‌ನಲ್ಲಿ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ 7 ಹೈಸ್ಪೀಡ್‌ ರೈಲ್ವೆ ಕಾರಿಡಾರ್‌ ಯೋಜನೆಯಲ್ಲಿ 2 ಕರ್ನಾಟಕಕ್ಕೆ ದಕ್ಕಿವೆ.

ಹೈದ್ರಾಬಾದ್‌-ಬೆಂಗಳೂರು ಮತ್ತು ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್‌ ರೈಲ್ವೆ ಕಾರಿಡಾರ್‌ ಯೋಜನೆಯನ್ನು ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ.
ತಮ ಬಜೆಟ್‌ನಲ್ಲಿ ಒಟ್ಟು 7 ಹೈಸ್ಪೀಡ್‌ ರೈಲ್ವೆ ಕಾರಿಡಾರ್‌ ಯೋಜನೆಗಳನ್ನು ಘೋಷಣೆ ಮಾಡಿರುವ ಅವರು, ಮುಂಬೈ-ಪುಣೆ, ಪುಣೆ-ಹೈದ್ರಾಬಾದ್‌ ಸೇರಿದಂತೆ ಮುಂದಿನ ದಿನಗಳಲ್ಲೂ ಅಗತ್ಯವಿರುವ ಕಡೆಯೂ ಸ್ಥಾಪಿಸುವುದಾಗಿ ತಿಳಿಸಿದರು.

ಹೈಸ್ಪೀಡ್‌ ರೈಲು ಯೋಜನೆ ಘೋಷಣೆಯಿಂದ ಕರ್ನಾಟಕದ ಪ್ರಮುಖ ಬೆಂಗಳೂರು ನಗರ, ತೆಲಂಗಾಣ ರಾಜ್ಯದ ಪ್ರಮುಖ, ಮಹಾರಾಷ್ಟ್ರದ ಮುಂಬೈ ಸೇರಿದಂತೆ ವಿವಿಧ ರಾಜ್ಯಗಳ ಮಹಾನಗರಗಳ ಮಧ್ಯ ರೈಲು ಸಾರಿಗೆ ಸುಧಾರಿಸಲಿದೆ. ಪ್ರಮುಖ ನಗರಗಳನ್ನು ಜೋಡಿಸುವ ಉದ್ದೇಶದಿಂದ ಈ ಏಳು ಹೈಸ್ಪೀಡ್‌ ರೈಲು ಯೋಜನೆ ಘೋಷಿಸಲಾಗಿದೆ ಎಂದು ಹೇಳಿದರು.

ಈ ಯೋಜನೆ ಮೂಲಕ ಪ್ರಮುಖ ಮಾರ್ಗಗಳ ಪ್ರಯಾಣ ಸಮಯ ಕಡಿಮೆಯಾಗಲಿದೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿದೆ. ಮಹಾರಾಷ್ಟ್ರ ಜೊತೆಗೆ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟಕದ ಬೆಂಗಳೂರು, ತಮಿಳುನಾಡಿನ ಚೆನ್ನೈ, ತೆಲಂಗಾಣದ ಹೈದರಾಬಾದ್‌, ದೆಹಲಿ ಹಾಗೂ ವಾರಣಾಸಿ ಮಧ್ಯೆ ಭವಿಷ್ಯದಲ್ಲಿ ಹೈಸ್ಪೀಡ್‌ ರೈಲುಗಳ ಸಂಚಾರ ಸೇವೆ ಸಿಗಲಿದೆ.

ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಈಗಾಗಲೇ ಕ್ರಾಂತಿ ಸೃಷ್ಟಿಸಿದ್ದ ವಂದೇ ಭಾರತ್‌ ಎಕ್‌್ಸಪ್ರೆಸ್‌‍ ಹಾಗೂ ಅಮೃತ್‌ ಭಾರತ್‌ ರೈಲುಗಳ ಬೆನ್ನಲ್ಲೇ ದೇಶದ ಏಳು ನಗರಗಳು ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆ ಪಡೆದಿವೆ. ಇದರಿಂದ ಸುದೀರ್ಘ ಪ್ರಯಾಣವನ್ನು ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಇದಕ್ಕೆ ತಕ್ಕಂತೆ ಈಗಾಗಲೇ ವಂದೇ ಭಾರತ್‌ ಸ್ಲೀಪರ್‌ ರೈಲುಗಳ ಕಾರ್ಯಾಚರಣೆ ಆರಂಭಿಸಿದೆ. ಪೂರಕವಾಗಿ ರೈಲ್ವೆ ಹಳಿ, ದ್ವಿಪಥ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಒಟ್ಟಾರೆ ರೈಲ್ವೆ ಮೂಲಸೌಕರ್ಯ ಸುಧಾರಿಸಲಾಗಿದೆ. ಅದರ ಬೆನ್ನಲ್ಲೇ ಹೊಸ ರೈಲ್ವೆ ಯೋಜನೆ ಘೋಷಣೆ ಆಗಿರುವುದು ದೇಶದ ಜನರಲ್ಲಿ ಸಂತಸ ಮೂಡಿಸಿದೆ.

ಮುಂದಿನ 5 ವರ್ಷಗಳಲ್ಲಿ 20 ರಾಷ್ಟ್ರೀಯ ಜಲಮಾರ್ಗಗಳನ್ನು ಪ್ರಾರಂಭಿಸಲಿದ್ದು ಇದರಲ್ಲಿ 5 ಜಲಮಾರ್ಗಗಳು ಒಡಿಶಾದಲ್ಲಿ ಪ್ರಾರಂಭವಾಗಲಿವೆ. ಥೈಚರ್‌ ಮತ್ತು ಅಂಗುಲ್‌ ಕೈಗಾರಿಕಾ ಪ್ರದೇಶ, ಕಳಿಂಗ ನಗರ, ಪ್ರದೀಪ್‌ ಅಂಡ್‌ ಧರ್ಮದಲ್ಲೂ ಪ್ರಾರಂಭಿಸುವುದಾಗಿ ಘೋಷಿಸಿದರು.
ಪೂರ್ವ ಮತ್ತು ಪಶ್ಚಿಮದ ನಡುವೆ ಸಂಪರ್ಕ ಕಲ್ಪಿಸಲು ಈ ಕಾರಿಡಾರ್‌ ಯೋಜನೆ ಅನುಕೂಲವಾಗಲಿದ್ದು, ಮುಂದಿನ 5 ವರ್ಷಗಳಲ್ಲಿ ಕಾರ್ಯಾರಂಭವಾಗಲಿವೆ.

ಜಲಮಾರ್ಗಗಳ ನಿರ್ವಹಣೆಗಾಗಿ ತರಬೇತಿ ಕೇಂದ್ರವನ್ನೂ ಸಹ ಪ್ರಾರಂಭಿಸಲಾಗುವುದು. ಇದರಿಂದ ಯುವಕರಿಗೆ ಉದ್ಯೋಗ ದೊರೆಯಲಿದೆ. ವಾರಾಣಸಿ ಮತ್ತು ಪಾಟ್ನಾ ನಡುವೆಯೂ ಜಲಮಾರ್ಗಗಳನ್ನು ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.
ಏಳು ಪ್ರಮುಖ ಹೈಸ್ಪೀಡ್‌ ರೈಲು ಕಾರಿಡಾರ್‌ ಮಾರ್ಗಗಳು:
1) ಮುಂಬೈ-ಪುಣೆ
2) ಪುಣೆ-ಹೈದರಾಬಾದ್‌
3) ಹೈದರಾಬಾದ್‌-ಬೆಂಗಳೂರು
4) ಹೈದರಾಬಾದ್‌-ಚನ್ನೈ
5) ಚೆನ್ನೈ-ಬೆಂಗಳೂರು
6) ದೆಹಲಿ-ವಾರಾಣಸಿ
7) ವಾರಾಣಸಿ-ಸಿಲಿಗುರಿ

RELATED ARTICLES

Latest News