Thursday, April 16, 2026
Homeರಾಜ್ಯಸದ್ದಿಲ್ಲದೆ ಅಕ್ಕಿ, ಬೇಳೆ ಸೇರಿದಂತೆ ದಿನಸಿ ಬೆಲೆಯೂ ಏರಿಕೆ

ಸದ್ದಿಲ್ಲದೆ ಅಕ್ಕಿ, ಬೇಳೆ ಸೇರಿದಂತೆ ದಿನಸಿ ಬೆಲೆಯೂ ಏರಿಕೆ

Grocery prices including rice and pulses also increased

ಬೆಂಗಳೂರು, ಫೆ. 6- ಕೇವಲ ಮದ್ಯ, ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ ಮಾತ್ರ ಆಗಿಲ್ಲ ಇದರ ಜೊತೆಗೆ ಸದ್ದಿಲ್ಲದೆ ಅಕ್ಕಿ, ಬೇಳೆಕಾಳುಗಳ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ನಗರದ ಮಾರುಕಟ್ಟೆಗಳಲ್ಲಿ ದಿನ ಬಳಕೆಯ ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಅಕ್ಕಿ, ಮೆಣಸು, ಬೇಳೆ ದರ ದಿಢೀರ್‌ ಏರಿಕೆ ಆಗಿದ್ದು ಜನರ ಜೇಬಿಗೆ ಕತ್ತರಿ ಬಿದ್ದಿದೆ.

ಸಿಲಿಕಾನ್‌ ಸಿಟಿಯ ದುಬಾರಿ ದುನಿಯಾದಲ್ಲಿ ಒಂದಿಲ್ಲೊಂದು ಬೆಲೆ ಏರಿಕೆ ಸಾಮಾನ್ಯವಾಗಿ ಹೋಗಿದೆ. ಮೆಟ್ರೋ ರೈಲು ಪ್ರಯಾಣ, ಮದ್ಯ, ಸಿಗರೇಟ್‌ ಮತ್ತಿತರ ತಂಬಾಕು ಉತ್ಪನ್ನಗಳ ಬೆಲೆ ಏರಿಕೆಯ ನಡುವೆಯೇ ಇದೀಗ ದಿನ ಬಳಕೆಯ ದಿನಸಿ ಪದಾರ್ಥಗಳ ಬೆಲೆ ದಿನದಿಂದ ದಿನಕ್ಕೆ ಜಿಗಿತ ಕಾಣಲು ಶುರುವಾಗಿದೆ.

ನಗರದ ಅತಿ ದೊಡ್ಡ ದಿನಸಿ ಪದಾರ್ಥಗಳ ಮಾರುಕಟ್ಟೆಯಾದ ಅಕ್ಕಿಪೇಟೆಯಲ್ಲಿ ಸಗಟು ವ್ಯಾಪಾರದಲ್ಲಿ ಭಾರೀ ಏರಿಕೆ ಕಂಡಿದೆ. ಪರಿಣಾಮ ನಗರದ ಚಿಲ್ಲರೆ ವ್ಯಾಪರದಲ್ಲೂ ದರ ಏರಿಕೆ ಆಗಿದ್ದು, ಅಹಾರ ಪದಾರ್ಥಗಳಿಂದ ಜನರ ಕೈ ಸುಡುವಂತಾಗಿದೆ.
ಯಾವ್ಯಾವ ಪದಾರ್ಥಗಳ ಬೆಲೆ ಏರಿಕೆ

ಪದಾರ್ಥಗಳು-ಹಳೆ ದರ-ಹೊಸ ದರ
ಜೀರಾ ಸಾಂಬರ್‌ ಅಕ್ಕಿ-140-200
ಸೋನಾ ಮಸೂರಿ ಅಕ್ಕಿ- 70-77
ಬಾಸುಮತಿ -90-130
ಒಣಮೆಣಸು- 200 -500
ತೊಗರಿ ಬೇಳೆ-95-130
ಕಡಲೆಬೀಜ -140-200
ಧನಿಯಾ -160 -220

RELATED ARTICLES

Latest News