Homeಮನರಂಜನೆಈಗಿನ ಕಾಲದ ಹುಡುಗರಿಗೆ ಬೆಸ್ಟ್ ಮೆಸೇಜ್ ಕೊಡುವ "ನೆನಪುಗಳ ಮಾತು ಮಧುರ" ಚಿತ್ರ

ಈಗಿನ ಕಾಲದ ಹುಡುಗರಿಗೆ ಬೆಸ್ಟ್ ಮೆಸೇಜ್ ಕೊಡುವ “ನೆನಪುಗಳ ಮಾತು ಮಧುರ” ಚಿತ್ರ

Nenapugala Matu Madhura Movie Review

ಪತ್ರಕರ್ತರು ಆಗಿರು ಅಫ್ಜಲ್ ಅವರ ಮೊದಲ ನಿರ್ದೇಶನದ ಸಿನಿಮಾ ನೆನಪುಗಳ ಮಾತು ಮಧುರ. ಕತೆಗೆ ತಕ್ಕಂತೆ ಟೈಟಲ್ ಅನ್ನ ಆಯ್ಕೆ ಮಾಡಿಕೊಂಡಿರೋದು ಸಿನಿಮಾ ನೋಡಿದವರಿಗೆ ಅರ್ಥವಾಗುತ್ತದೆ. ನಾಲ್ಕು ಜನ ಸ್ನೇಹಿತರು ಸೇರಿ ತಮ್ಮ ನೆನಪುಗಳನ್ನ ಮೆಲುಕು ಹಾಕುವುದೇ ಕಥೆಯ ಬಹಳ ಮುಖ್ಯವಾದಂತ ಘಟ್ಟ.

ಕಥೆ ಸಾಗುವ ರೀತಿ ಅಧ್ಭುತ.. ಆರಂಭವಾಗುವ ರೀತಿಯೂ ಅಷ್ಟೇ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಅಪ್ಜಲ್. ನಾಲ್ಕು ಜನ ಸ್ನೇಹಿತರ ಕಥೆ ಈ ಸಿನಿಮಾದಲ್ಲಿದೆ. ನಾಲ್ಕು ಜನ ಸ್ನೇಹಿತರು ಚಿಕ್ಕ ವಯಸ್ಸಿನಿಂದ ಬೆಸ್ಟ್ ಫ್ರೆಂಡ್ಸ್ ಆಗಿರ್ತಾರೆ. ಒಂದಷ್ಟು ವರ್ಷಗಳು ಎಲ್ಲರು ಬ್ಯುಸಿಯಾಗಿರ್ತಾರೆ. ಒಂದಿನ ಎಲ್ಲರೂ ಭೇಟಿಯಾಗುವ ಫ್ಲ್ಯಾನ್ ಮಾಡಿಕೊಳ್ಳುತ್ತಾರೆ.

ಅದಕ್ಕಾಗಿ ರೆಸಾರ್ಟ್ ಒಂದನ್ನ ಬುಕ್ ಮಾಡಿಕೊಂಡು ಎಂಜಾಯ್ ಮಾಡುವ ಪ್ಲ್ಯಾನ್ ಮಾಡ್ತಾರೆ. ಅಪರೂಪಕ್ಕೆ ಜೊತೆಗೆ ಸೇರಿದಾಗ ಹಳೆಯ ದಿನಗಳನ್ನ ಮೆಲುಕು ಹಾಕುವುದು ಕಾಮನ್ ಅಲ್ವಾ. ಆಗ ನಿಜವಾದ ಕಥೆ ಶುರುವಾಗುತ್ತೆ. ಒಬ್ಬೊಬ್ಬರದ್ದು ಒಂದೊಂದು ಕಥೆ ತೆರೆದುಕೊಳ್ಳುತ್ತದೆ.

ಸಾಲ ಕೊಟ್ಟು ಮೋಸ ಹೋದವನ ಕಥೆ.. ಮರ್ಡರ್ ಮಿಸ್ಟ್ರಿ ಕಥೆ.. ಮತ್ತೊಂದು ಕಥೆ ತುಂಬಾ ಮುಖ್ಯ ಅದನ್ನ ತೆರೆಮೇಲೆ ನೋಡಿದರೇನೆ ಚಂದ. ರೊಮ್ಯಾನ್ಸ್ ಇದೆ. ಥ್ರಿಲ್ಲಿಂಗ್ ಅಂಶಗಳು ಇದಾವೆ. ಸೆವೆನ್ ರಾಜ್ ಈಗಾಗಲೇ ತಮ್ಮ ನಟನೆಯಿಂದ ಗಮನ ಸೆಳೆದವರು. ಈ ಸಿನಿಮಾದಲ್ಲೂ ನಟನೆಯ ಛಾಪೂ ಮೂಡಿಸಿದ್ದಾರೆ. ಹಾಡುಗಳು ಹಾಗೂ ಟೀಸರ್ ನಲ್ಲಿ ಗಮನ ಸೆಳೆದಿದ್ದ ಸಿನಿಮಾ ಇದೀಗ ಬೆಳ್ಳಿ ತೆರೆಮೇಲೂ ಕಮಾಲ್ ಮಾಡಿದೆ. ಉತ್ತಮ ಸಂದೇಶದೊಂದಿಗೆ ಸಿನಿಮಾ ಎಂಡ್ ಆಗುತ್ತೆ.

RELATED ARTICLES

Latest News