ನಿತ್ಯ ನೀತಿ : `ಅಸೂಯೆ, ಅಹಂಕಾರ ಮತ್ತು ದ್ವೇಷಗಳಿಂದ ನಮ ಮನಸ್ಸನ್ನು ಕೆಡಿಸಬಾರದು. ಅಂತರಂಗವನ್ನು ಸ್ವಚ್ಛಗೊಳಿಸಿದರೆ ಮಾತ್ರ ಅಮೃತಫಲ ಪಡೆಯಲು ಸಾಧ್ಯ’. – ಶ್ರೀ ಸಿದ್ಧೇಶ್ವರಸ್ವಾಮೀಜಿ
ಪಂಚಾಂಗ : ಶನಿವಾರ, 07-02-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ಷಷ್ಠಿ / ನಕ್ಷತ್ರ: ಚಿತ್ರಾ / ಯೋಗ: ಶೂಲ / ಕರಣ: ಗರಜ
ಸೂರ್ಯೋದಯ – 06.46
ಸೂರ್ಯಾಸ್ತ – 6.23
ರಾಹುಕಾಲ – 9.00-10.30
ಯಮಗಂಡ ಕಾಲ – 1.30- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಮಕ್ಕಳ ಪ್ರಗತಿಯಲ್ಲಿ ಮಿಶ್ರ ಪ್ರತಿಲ ಕಾಣಬೇಕಾಗುತ್ತದೆ. ಶ್ರಮ ವಹಿಸಿ ಕೆಲಸ ಮಾಡಿ.
ವೃಷಭ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.
ಮಿಥುನ: ಅನೇಕ ಬಾರಿ ನಿಮಗಾಗಿ ಸಮಯ ನೀಡುವುದನ್ನೇ ಮರೆತುಹೋಗುತ್ತೀರಿ.
ಕಟಕ: ವಾಹನ ಕೊಳ್ಳಲು ಆಲೋಚನೆ ಮಾಡುವಿರಿ.
ಸಿಂಹ: ತಂದೆಯ ಕಠಿಣ ನಡವಳಿಕೆ ಸಿಟ್ಟು ಬರಿಸುತ್ತದೆ.
ಕನ್ಯಾ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡಬೇಡಿ.
ತುಲಾ: ಹೊಸ ವ್ಯವಹಾರ ಪ್ರಾರಂಭಿಸಿಲು ಉತ್ತಮ ದಿನ.
ವೃಶ್ಚಿಕ: ವಧು-ವರನನ್ನು ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ಸಿಗುವುದು ಕಷ್ಟಸಾಧ್ಯ.
ಧನುಸ್ಸು: ದೊಡ್ಡ ದೊಡ್ಡ ಕಾರ್ಯಕ್ರಮ ಆಯೋಜಿಸುವ ಮುನ್ನ ಹಿರಿಯರೊಂದಿಗೆ ಚರ್ಚಿಸಿ.
ಮಕರ: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.
ಕುಂಭ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.
ಮೀನ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.
