ಬೆಂಗಳೂರು,ಫೆ.11- ಮನೆ ಮುಂದೆ ಕೆಮಿದ್ದಕ್ಕೆ ಗಲಾಟೆಯಾಗಿ ಹಲ್ಲೆ ನಡೆಸಿದ್ದರಿಂದ ರಾಜಸ್ಥಾನದ ವ್ಯಕ್ತಿ ಮೃತಪಟ್ಟಿರುವ ಘಟನೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ವಿನೋದ್‌ಕುಮಾರ್ ಶೈನಿ (34) ಮೃತಪಟ್ಟವರು. ಇವರು ಕೇತಗಾನ ಹಳ್ಳಿಯಲ್ಲಿ ವಾಸವಾಗಿದ್ದರು.
ಟ್ರಾನ್ಸ್ ಫೋರ್ಟ್ ಕಂಪನಿಯ ಉದ್ಯೋಗಿಯಾಗಿರುವ ವಿನೋದ್ ಕುಮಾರ್ ಅವರು ಅಸ್ತಮಾದಿಂದ ಬಳಲುತ್ತಿದ್ದರು.ಫೆ.7 ರಂದು ಸಂಜೆ ವಿನೋದ್ ಕುಮಾರ್ ಜೋರಾಗಿ ಕೆಮುತ್ತಿದ್ದಾಗ ಅಕ್ಕಪಕ್ಕದವರು ಗಲಾಟೆ ಮಾಡಿದ್ದಾರೆ.
ಇದೇ ವಿಚಾರಕ್ಕೆ ಜಗಳ ವಿಕೋಪಕ್ಕೆ ತಿರುಗಿ ಅವರನ್ನು ತಲ್ಲಾಡಿ ನೂಕಾಡಿ ಹಲ್ಲೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಗಲ್ಲಕ್ಕೆ ಬಲವಾದ ಪೆಟ್ಟು ಬಿದ್ದಿದೆ. ತಕ್ಷಣ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವು ಹೇಗಾಗಿದೆ ಎಂಬುವುದು ಗೊತ್ತಾಗಲಿದೆ.
