Homeರಾಷ್ಟ್ರೀಯ1 ಲಕ್ಷ ರೂಪಾಯಿಗೆ ಗಂಡು ಮಗುವನ್ನು ಮಾರಾಟ ಮಾಡಿದ ತಂದೆ

1 ಲಕ್ಷ ರೂಪಾಯಿಗೆ ಗಂಡು ಮಗುವನ್ನು ಮಾರಾಟ ಮಾಡಿದ ತಂದೆ

Toddler ‘sold for Rs 1 lakh’: Odisha Police rescue baby boy in Balasore

ಬಾಲಸೋರ್‌, ಫೆ.15- ಎರಡೂವರೆ ವರ್ಷದ ಗಂಡು ಮಗುವನ್ನು ತಂದೆಯೇ 1 ಲಕ್ಷ ರೂ.ಮಾರಟ ಮಾಡಿದ ಘಟನೆ ಇಲ್ಲಿ ನಡೆದಿದೆ.ಘಟನೆಗೆ ಸಂಭಂದಿಸಿದಂತೆ ಮಾರಾಟಗಾರ ಮತ್ತು ಖರೀದಿದಾರ ಇಬ್ಬರನ್ನೂ ಬಂಧಿಸಲಾಗಿದೆ ಎಂ ಪೊಲೀಸರು ತಿಳಸಿದ್ದಾರೆ.ನೀಲಗಿರಿ ಅಧಿಸೂಚಿತ ಪ್ರದೇಶ ಮಂಡಳಿ ಪ್ರದೇಶದ ಬರಿಸಹಿ ಗ್ರಾಮದಲ್ಲಿ ನಡೆದ ಈ ಘಟನೆ ನಡೆದಿದೆ.

ತಂದೆ ಖರೀದಿದಾರನೊಂದಿಗೆ ಚೌಕಾಶಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.ಸ್ಥಳೀಯರೊಬ್ಬರು ಘಟನೆ ಕುರಿತು ನೀಲಗಿರಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು ಆದಾಗ್ಯೂ, ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮಾರಾಟವಾಗಿದ್ದ ಮಗುವನ್ನು ಚಿಮಿನಿಭಾಟಿ ಪ್ರದೇಶದಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ನೀಲಗಿರಿ ಪ್ರದೇಶದ ಉಪವಿಭಾಗೀಯ ಪೊಲೀಸ್‌‍ ಅಧಿಕಾರಿ ಪ್ರಮೋದ್‌ ಕುಮಾರ್‌ ಮಲ್ಲಿಕ್‌ ತಿಳಿಸಿದ್ದಾರೆ.

ಪೊಲೀಸರು ತಂದೆಯನ್ನು ರಾಕೇಶ್‌ ಕುಮಾರ್‌ ಬೆಹೆರಾ ಅಲಿಯಾಸ್‌‍ ಕುವಾ ಎಂದು ಗುರುತಿಸಿದ್ದಾರೆ,ಈತ ವೃತ್ತಿಯಲ್ಲಿ ಮೇಸ್ತಿಯಾಗಿದ್ದು ತನ್ನ ಮಗು ಮಾರಾಟದ ಮೊದಲ ಕಂತಾಗಿ 50,000 ರೂ.ಗಳನ್ನು ಪಡೆದಿದ್ದ ಎನ್ನಲಾಗಿದೆ.

ಆರ್ಥಿಕ ಸಂಕಷ್ಟವೇ ಇಂತಹ ನಿರ್ಧಾರಕ್ಕೆ ಕಾರಣ.ನನಗೂ ನಾಲ್ಕು ಮಕ್ಕಳಿದ್ದು, ಅವರನ್ನು ಬೆಳೆಸುವಲ್ಲಿ ತೊಂದರೆ ಅನುಭವಿಸುತ್ತಿದ್ದೇನೆ. ಪರಿಚಿತ ವ್ಯಕ್ತಿಯೊಬ್ಬರು ಖರೀದಿದಾರರ ವ್ಯವಸ್ಥೆ ಮಾಡಿದರು ಮತ್ತು ನಾನು ಮಗುವನ್ನು ಹಸ್ತಾಂತರಿಸಿದೆ ಎಂದು ಆರೋಪಿ ತಂದೆ ಹೇಳಿದ್ದಾನೆ.

ಆರೋಪಿ ಇಬ್ಬರನ್ನು ವಿವಾಹವಾಗಿದ್ದರು ಮತ್ತು ಮಾರಾಟ ಮಾಡಲಾಗಿತ್ತು ಎಂದು ಹೇಳಲಾದ ಮಗು ಅವರ ಎರಡನೇ ಪತ್ನಿಗೆ ಜನಿಸಿದ್ದು, ಅವರು ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

RELATED ARTICLES

Latest News