Homeರಾಜ್ಯ"ಮುಂದಿನ ಸಿಎಂ ಡಿ.ಕೆ.ಶಿವಕುಮಾರ್‌" ಘೋಷಣೆ ಕೂಗಿ ಬೆಂಕಿಗೆ ತುಪ್ಪ ಸುರಿದ ಅಭಿಮಾನಿಗಳು

“ಮುಂದಿನ ಸಿಎಂ ಡಿ.ಕೆ.ಶಿವಕುಮಾರ್‌” ಘೋಷಣೆ ಕೂಗಿ ಬೆಂಕಿಗೆ ತುಪ್ಪ ಸುರಿದ ಅಭಿಮಾನಿಗಳು

Fans added fuel to the fire by shouting slogans of "Next CM D.K. Shivakumar"

ಚಿಕ್ಕಮಗಳೂರು, ಮಾ.1- ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಂದು ಅಭಿಮಾನಿಗಳು ಘೋಷಣೆ ಕೂಗುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.ಡಿ.ಕೆ.ಶಿವಕುಮಾರ್‌ ಅವರು ಕುಟುಂಬ ಸಮೇತರಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಪೀಠಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು.

ಈ ವೇಳೆ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಬೆಂಬಲಿಗರು ಡಿ.ಕೆ.ಶಿವಕುಮಾರ್‌ ಅವರನ್ನು ಆತೀಯರನ್ನಾಗಿ ಬರಮಾಡಿಕೊಂಡರು. ಬೆಂಬಲಿಗರು ಡಿ.ಕೆ.ಶಿವಕುಮಾರ್‌ಗೆ ಜೈ, ಮುಂದಿನ ಮುಖ್ಯಮಂತ್ರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಪ್ರತಿ ಬಾರಿಯೂ ಇಂತಹ ಘೋಷಣೆಗಳು ಕೇಳಿ ಬಂದಾಗ ಡಿ.ಕೆ.ಶಿವಕಮಾರ್‌ ಹುಸಿ ಕೋಪ ಪ್ರದರ್ಶಿಸಿ, ಬೆಂಬಲಿಗರನ್ನು ತಡೆಯುತ್ತಿದ್ದರು. ಆದರೆ ಈ ಬಾರಿ ಘೋಷಣೆಗಳಿಂದ ಡಿ.ಕೆ.ಶಿವಕುಮಾರ್‌ ಆಹ್ಲಾದ ಪಡೆದಂತೆ ಕಂಡು ಬಂತು. ರಾಜ್ಯದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧ ಪಟ್ಟಂತೆ ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಇಂತಹ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಂಬ ಘೋಷಣೆ ವಾತಾವರಣ ಮತ್ತಷ್ಟು ಹದಗೆಡುವಂತೆ ಮಾಡಿದೆ.

RELATED ARTICLES
spot_img

Latest News