Thursday, April 30, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-03-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-03-2026)

Today's Horoscope

ನಿತ್ಯ ನೀತಿ : ದುರಹಂಕಾರದ ಅಲಂಕಾರ ಹೊತ್ತವರಿಗೆ ತಮ್ಮ ತಪ್ಪುಗಳನ್ನು ಸ್ವೀಕಾರ ಮಾಡುವ ಸಂಸ್ಕಾರವಿರುವುದಿಲ್ಲ. ಬದಲಾಗಿ, ಉಪಕಾರ ಮಾಡಿದವರನ್ನೇ ತಿರಸ್ಕಾರ ಮಾಡಿ ಅವರ ಅಸ್ವಿತ್ವವನ್ನು ಅವರೇ ಅಂತ್ಯಸಂಸ್ಕಾರ ಮಾಡಿಕೊಳ್ಳುತ್ತಾರೆ.

ಪಂಚಾಂಗ : ಗುರುವಾರ, 12-03-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಕೃಷ್ಣ / ತಿಥಿ: ನವಮಿ / ನಕ್ಷತ್ರ: ಮೂಲಾ / ಯೋಗ: ಸಿದ್ಧಿ / ಕರಣ: ತೈತಿಲ
ಸೂರ್ಯೋದಯ – 06.31
ಸೂರ್ಯಾಸ್ತ – 6.31
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :
ಮೇಷ
: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.
ವೃಷಭ: ನಿರೀಕ್ಷಿಸಿದಂತೆ ಅಧಿಕ ಧನಲಾಭ ದೊರೆಯ ಲಿದೆ. ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ.
ಮಿಥುನ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.

ಕಟಕ: ಖರ್ಚು-ವೆಚ್ಚಗಳನ್ನು ನಿಯಂತ್ರಣದಲ್ಲಿ ಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ.
ಸಿಂಹ: ಜೀವನ ಸಂಗಾತಿ ಯಿಂದ ಆರ್ಥಿಕ ಲಾಭ ಮತ್ತು ಗೌರವ ಪಡೆಯುವಿರಿ.
ಕನ್ಯಾ: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಲವಾದರೆ ತೊಂದರೆ ಅನುಭವಿಸಬೇಕಾಗುತ್ತದೆ.

ತುಲಾ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬನ್ನಿ.
ವೃಶ್ಚಿಕ: ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸದಿರುವುದು ಒಳಿತು.
ಧನುಸ್ಸು: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗಬಹುದಾದ ವಿಪತ್ತುಗಳು ದೂರವಾಗಲಿವೆ.

ಮಕರ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಕುಂಭ: ಮನಸ್ತಾಪ ತಪ್ಪಿಸಲು ಸಹೋದರರೊಂದಿಗೆ ಅತ್ಯಂತ ಜಾಣೆಯಿಂದ ವ್ಯವಹರಿಸುವುದು ಒಳಿತು.
ಮೀನ: ಹಣಕಾಸು ವ್ಯವಹಾರದಲ್ಲಿ ನಷ್ಟ ತಪ್ಪಿಸುವ ಉದ್ದೇಶದಿಂದ ಜಾಗರೂಕತೆಯಿಂದ ಇರಿ.

RELATED ARTICLES

Latest News