Friday, May 1, 2026
Homeಜಿಲ್ಲಾ ಸುದ್ದಿಗಳುಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಒಡೆದ ಮೂವರು ದುಷ್ಕರ್ಮಿಗಳ ಬಂಧನ

ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಒಡೆದ ಮೂವರು ದುಷ್ಕರ್ಮಿಗಳ ಬಂಧನ

Three miscreants arrested for breaking windows of cars parked in front of houses

ಕೊರಟಗೆರೆ,ಮಾ.26- ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಸುಮಾರು 15 ಕ್ಕೂ ಹೆಚ್ಚು ಕಾರುಗಳ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಪಟ್ಟಣದ ವಿವಿಧ ಬೀದಿಗಳಲ್ಲಿ ನಿಲ್ಲಿಸಿದ್ದ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಗ್ಲಾಸ್‌‍ಗಳು ಬೆಳಗ್ಗೆ ಒಡೆದ ಸ್ಥಿತಿಯಲ್ಲಿ ಕಂಡುಬಂದವು. ಸುಮಾರು 10 ರಿಂದ 15 ವಾಹನಗಳಿಗೆ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ಈ ಘಟನೆ ತಿಳಿದು ಸ್ಥಳೀಯರು ತಕ್ಷಣವೇ ಪೊಲೀಸ್‌‍ ಠಾಣೆಗೆ ಮಾಹಿತಿ ನೀಡಿದ್ದಾರೆ.

ಕೊರಟಗೆರೆ ಸಿಪಿಐ ಅನಿಲ್‌ ಪಿಎಸ್‌‍ಐ ತೀರ್ಥೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ದುಷ್ಕರ್ಮಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಹಿನ್ನೆಲೆ, ಸ್ಥಳೀಯರು ರಾತ್ರಿ ವೇಳೆಯಲ್ಲಿ ಪೊಲೀಸ್‌‍ ಪೆಟ್ರೋಲಿಂಗ್‌ ಹೆಚ್ಚಿಸಲು ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೊರಟಗೆರೆ ಪೊಲೀಸ್‌‍ ಸಿಪಿಐ ಅನಿಲ್‌ ಹಾಗೂ ಪಿಎಸ್‌‍ಐ ತೀರ್ಥೇಶ್‌ ಮತ್ತು ತಂಡ ಘಟನೆ ನಡೆದ ಎರಡೆ ಗಂಟೆಗಳಲ್ಲಿ ತುಮಕೂರಿನ ಪುಂಡರನ್ನು ಎಡೆಮುರಿ ಕಟ್ಟಿದ ಕೊರಟಗೆರೆ ಪೊಲೀಸರು ಸಂತೋಷ್‌, ಕಲ್ಯಾಣ್‌, ಹರೀಶ್‌ ಎಂಬ ಆರೋಪಿಗಳನ್ನು ಬಂಧಿಸಲಾಗಿ ಮತ್ತೆ ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Latest News