Wednesday, April 29, 2026
Homeಬೆಂಗಳೂರುನಾಳೆ, ನಾಡಿದ್ದು ಜಿಬಿಎ ಬಜೆಟ್

ನಾಳೆ, ನಾಡಿದ್ದು ಜಿಬಿಎ ಬಜೆಟ್

ಬೆಂಗಳೂರು, ಮಾ.26- ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳ ಬಜೆಟ್ ಮಂಡನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಸೂಚನೆಯಂತೆ, ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ ಆಯಾ ವಲಯ ಗಳ ಬಜೆಟ್ ಮಂಡನೆಯಾಗಲಿದೆ.

ಮಾ.27 ಮತ್ತು 28ರಂದು ಎರಡು ಹಂತಗಳಲ್ಲಿ ಬಜೆಟ್ ಮಂಡನೆ ನಡೆಯಲಿದೆ. ಮೊದಲ ದಿನವಾದ ನಾಳೆ ಪೂರ್ವ ಹಾಗೂ ಕೇಂದ್ರ ನಗರಪಾಲಿಕೆಗಳು, ಎರಡನೇ ದಿನ ಮಾ.28ರಂದು ಉತ್ತರ, ಪಶ್ಚಿಮ ಹಾಗೂ ದಕ್ಷಿಣ ನಗರಪಾಲಿಕೆಗಳ ಬಜೆಟ್ ಮಂಡನೆಯಾಗಲಿದೆ.
ನಾಳೆ ಬೆಳಿಗ್ಗೆ 9.30ಕ್ಕೆ ಪೂರ್ವ ನಗರಪಾಲಿಕೆಯ ಬಜೆಟ್ ಎಂಎಲ್ಆರ್ ಸೆಂಟರ್ನಲ್ಲಿ ಮಂಡನೆಯಾಗಲಿದ್ದು, ಮಧ್ಯಾಹ್ನ 12.30ಕ್ಕೆ ಟೌನ್ ಹಾಲ್ನಲ್ಲಿ ಕೇಂದ್ರ ನಗರಪಾಲಿಕೆ ಬಜೆಟ್ ಮಂಡನೆ ನಡೆಯಲಿದೆ.

ಮಾ.28ರಂದು ಬೆಳಿಗ್ಗೆ 9.30ಕ್ಕೆ ಯಲಹಂಕ ಸಮೀಪದ ಅಂಬೇಡ್ಕರ್ ಭವನದಲ್ಲಿ ಉತ್ತರ ನಗರಪಾಲಿಕೆ ಬಜೆಟ್ ಮಂಡನೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಲ್ಲೇಶ್ವರದ ಜಲಮಂಡಳಿ ಭವನದಲ್ಲಿ ಪಶ್ಚಿಮ ನಗರಪಾಲಿಕೆ ಹಾಗೂ ಮಧ್ಯಾಹ್ನ 2.30ಕ್ಕೆ ಬನಶಂಕರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಕ್ಷಿಣ ನಗರಪಾಲಿಕೆ ಬಜೆಟ್ ಮಂಡನೆ ನಡೆಯಲಿದೆ.

ಈ ಬಾರಿ ಕೂಡ ಸಾರ್ವಜನಿಕರಿಗೆ ಬಜೆಟ್ ವೀಕ್ಷಣೆಗೆ ಅವಕಾಶ ನೀಡಲಾಗುವುದಿಲ್ಲ ಎಂಬುದು ಗಮನಾರ್ಹ.ರಾಜ್ಯ ಸರ್ಕಾರದಿಂದ 2026-27ನೇ ಸಾಲಿಗೆ ಸುಮಾರು 7 ಸಾವಿರ ಕೋಟಿ ರೂ. ಅನುದಾನ ಲಭ್ಯವಾಗಿದ್ದು, ಜೊತೆಗೆ ತೆರಿಗೆ, ಜಾಹೀರಾತು ಸೇರಿದಂತೆ ಇತರೆ ಆದಾಯ ಮೂಲಗಳನ್ನು ಪರಿಗಣಿಸಿ ಬಜೆಟ್ ಸಿದ್ಧಪಡಿಸಲಾಗಿದೆ. ನಿರೀಕ್ಷೆಗಳು ಏನು?ಇಂದಿರಾ ಕ್ಯಾಂಟೀನ್ಗೆ ಹೆಚ್ಚುವರಿ ಅನುದಾನ.ವಸತಿ ಯೋಜನೆಗಳ ವಿಸ್ತರಣೆ, ಒಂಟಿ ಮನೆ ನಿರ್ಮಾಣಕ್ಕೆ ಉತ್ತೇಜನ.ನಿರಾಶ್ರಿತರಿಗೆ ವಸತಿ ವ್ಯವಸ್ಥೆ.ಪ್ರವಾಹ ತಡೆಗೆ ಚರಂಡಿ ಅಭಿವೃದ್ಧಿಕೆರೆಗಳ ಅಭಿವೃದ್ಧಿ ಮತ್ತು ತಡೆಗೇಟ್ ನಿರ್ಮಾಣ.74 ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿ.110 ಗ್ರಾಮಗಳ ರಸ್ತೆ ಪುನರ್ ನಿರ್ಮಾಣ.
ಪ್ರತಿ ವಾರ್ಡಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ.ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣ.ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುದಾನ.ಕಾವೇರಿ 6ನೇ ಹಂತದ ನೀರು ಸರಬರಾಜು ಯೋಜನೆಗೆ ಒತ್ತು.

ಮುಖ್ಯ ಅಂಶಗಳು..!ಆಸ್ತಿ ತೆರಿಗೆ ಹೆಚ್ಚಳ ಇಲ್ಲ ಎನ್ನುವ ನಿರೀಕ್ಷೆ.ಇ-ಖಾತ ವಿತರಣೆಗೆ ಹೆಚ್ಚಿನ ಆದ್ಯತೆ.ಹೊಸ ಯೋಜನೆಗಳಿಗಿಂತ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಆದ್ಯತೆ.ಆಸ್ತಿ ತೆರಿಗೆ ಸಂಗ್ರಹ ಗುರಿ 6,000 ಕೋಟಿ.ಪೇಪರ್ಲೆಸ್ ಬಜೆಟ್ ಮಂಡನೆ ಮುಂದುವರಿಕೆ.
ಚುನಾವಣೆ ಗಿಮಿಕ್..?ಜನಪ್ರತಿನಿಧಿಗಳಿಲ್ಲದೇ ನಿರಂತರವಾಗಿ ಆರನೇ ಬಾರಿ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಬಜೆಟ್ ಮಂಡನೆ ನಡೆಯುತ್ತಿದೆ. ಇದರಿಂದಾಗಿ ಈ ಬಾರಿಯ ಬಜೆಟ್ ಚುನಾವಣೆ ಗಿಮಿಕ್ ಆಗುವ ಸಾಧ್ಯತೆಗಳಿವೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.
ಒಟ್ಟಾರೆ, ಬೆಂಗಳೂರಿನ ಅಭಿವೃದ್ಧಿಗೆ ಭರವಸೆಗಳ ಮಹಾಪೂರವೇ ಹರಿದು ಬರಲಿದೆಯೇ ಅಥವಾ ವಾಸ್ತವಿಕ ಯೋಜನೆಗಳಿಗೆ ಆದ್ಯತೆ ಸಿಗಲಿದೆಯೇ ಎಂಬುದು ಕಾದು ನೋಡಬೇಕಾಗಿದೆ.

RELATED ARTICLES

Latest News