Sunday, May 3, 2026
Homeರಾಷ್ಟ್ರೀಯಭಾರಿ ಬಹುಮತದಿಂದ ಗೆಲ್ಲುತ್ತೇನೆ : 1 ಕೋಟಿ ರೂ. ಚಾಲೆಂಜ್ ಹಾಕಿದ ಬಿಜೆಪಿ ಅಭ್ಯರ್ಥಿ

ಭಾರಿ ಬಹುಮತದಿಂದ ಗೆಲ್ಲುತ್ತೇನೆ : 1 ಕೋಟಿ ರೂ. ಚಾಲೆಂಜ್ ಹಾಕಿದ ಬಿಜೆಪಿ ಅಭ್ಯರ್ಥಿ

‘Will win by massive majority,’ says BJP’s George; bets Rs 1 crore on victory

ಕೊಟ್ಟಾಯಂ,ಮೇ.3: ಕೇರಳದ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ. ಜಾರ್ಜ್‌ತಾನು ಭಾರಿ ಬಹುಮತದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದು, ತನ್ನ ಹೇಳಿಕೆಗೆ ಬೆಂಬಲವಾಗಿ 1 ಕೋಟಿ ಪಣ ಹಾಕಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಭಾರೀ ಅಂತರದಿಂದ ಗೆಲ್ಲುತ್ತೇನೆ. ಯಾರಿಗಾದರೂ ಅನುಮಾನವಿದ್ದರೆ 1 ಕೋಟಿ ಪಣ ಹಾಕಬಹುದು ಎಂದು ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಪಕ್ಕದ ಪಾಲಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ತಮ ಪುತ್ರ ಶೋನ್‌ ಜಾರ್ಜ್‌ ಕೂಡ ಗೆಲ್ಲುವರೆಂದು ಅವರು ಭವಿಷ್ಯ ನುಡಿದಿದ್ದಾರೆ. ಇದರಿಂದ ತಂದೆ-ಮಗ ಇಬ್ಬರೂ ವಿಧಾನಸಭೆಗೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ರಾಜೀವ್‌ ಚಂದ್ರಶೇಖರ್‌ ನೇತೃತ್ವದಲ್ಲಿ ಬಿಜೆಪಿ ಮಹತ್ವದ ಸಾಧನೆ ಮಾಡಲಿದೆ ಎಂದು ಹೇಳಿದ ಜಾರ್ಜ್‌, ಈ ಬಾರಿ ಸ್ಪಷ್ಟ ಬಹುಮತ ಯಾರಿಗೂ ಸಿಗದೆ ಅತಂತ್ರ ಸ್ಥಿತಿ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟರು.

ಅವರ ಪ್ರಕಾರ, ಕಾಂಗ್ರೆಸ್‌‍ ನೇತೃತ್ವದ ಯುಡಿಎಫ್‌ ಹೆಚ್ಚು ಸ್ಥಾನ ಗೆಲ್ಲಬಹುದು ಆದರೆ ಸಿಪಿಎಂ ನೇತೃತ್ವದ ಎಲ್‌ಡಿಎಫ್‌‍ ಕೂಡ ಸಾಧನೆ ಮಾಡದು. ಎನ್‌ಡಿಎ ಸುಮಾರು 11 ಸ್ಥಾನಗಳನ್ನು ಗೆಲ್ಲಬಹುದು ಎಂದು ಅವರು ಅಂದಾಜಿಸಿದ್ದಾರೆ.140 ಸದಸ್ಯರ ಕೇರಳ ವಿಧಾನಸಭೆಗೆ ಏಪ್ರಿಲ್‌ 9ರಂದು ಮತದಾನ ನಡೆದಿದ್ದು, ಫಲಿತಾಂಶಗಳು ನಾಳೆ ಪ್ರಕಟವಾಗಲಿವೆ.

RELATED ARTICLES

Latest News