ಬೆಂಗಳೂರು,ಮೇ3- ರಾಜ್ಯದಲ್ಲಿ ಪೂರ್ವ ಮುಂಗಾರು ಚೇತರಿಕೆ ಕಂಡಿದ್ದು , ಕಳೆದ ಬುಧವಾರ ರಾಜಧಾನಿಯಲ್ಲಿ ಅಬ್ಬರಿಸಿದ ಗಾಳಿ ಮಳೆಗೆ ನೆಲಕಚ್ಚಿದ್ದ ಮರಗಳ ತೆರವು ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ಮಳೆಗಾಳಿಗೆ ನಗರದಾದ್ಯಂತ ನೂರಾರು ಮರಗಳು ಧರೆಗುರುಳಿದ್ದು, ಕೆಲವು ಕಡೆ ಭಾರೀ ಅನಾಹುತವೇ ಸಂಭವಿಸಿದೆ. ಜಬಿಎ ಅರಣ್ಯ ಘಟಕದ ಸಿಬ್ಬಂದಿಗಳು, ಪೌರಕಾರ್ಮಿಕರು ಮರಗಳ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುತ್ತಲೆ ಇದೆ. ಕೆಲವು ಕಡೆ ಸಂಚಾರಿ ಪೊಲೀಸರು ಸಹ ಜಿಬಿಎ ಸಿಬ್ಬಂದಿಗಳ ಮರ ತೆರವು ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ.
ಇಂದು ಭಾನುವಾರವಾದ್ದರಿಂದ ವಾಹನ ಹಾಗೂ ಸಾರ್ವಜನಿಕರ ಸಂಚಾರ ಕಡಿಮೆ ಇರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯಾಗಂತೆ ಇಂದಿರಾ ಗಾಂಧಿ, ಅಕ್ಷಯ ನಗರ, ಎಲ್‌ಐಸಿ ಕಾಲೋನಿ, ಜೀವನ್‌ಭಿಮನಗರ , ಇಂದಿರಾ ನಗರ, ನೀಲಸಂದ್ರ, ಸೇರಿದಂತೆ ಮತ್ತಿತರ ಕಡೆ ಮರಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.
ಬೃಹತ್ ಕ್ರೇನ್‌ಗಳ ಮೂಲಕ ರೆಂಬೆ-ಕೊಂಬೆ ಹಾಗೂ ದಿಮಿಗಳನ್ನು ಸ್ಥಳಾಂತರ ಮಾಡಲಾಯಿತು. ಇನ್ನು ಮನೆಗಳ ಮೇಲೆ ಕೊಂಬೆಗಳನ್ನು ಸಹ ತೆರವು ಮಾಡಲಾಯಿತು.
