ಬೆಂಗಳೂರು,ಏ.4-ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಬೈಕ್ ತೆಗೆದುಕೊಳ್ಳುತ್ತಿದ್ದಂತೆ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಉದ್ಯೋಗಿ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಹೂಡಿಯ ತಿಗಳರ ಪಾಳ್ಯ ನಿವಾಸಿ ಪ್ರಶಾಂತ್ (31) ಮೃತಪಟ್ಟ ಬೈಕ್ ಸವಾರ. ಇವರು ಖಾಸಗಿ ಬ್ಯಾಂಕ್ವೊಂದರ ಉದ್ಯೋಗಿ.ಪ್ರಶಾಂತ್ ಅವರು ಬೈಕ್ನಲ್ಲಿ ರಾತ್ರಿ 11.45ರ ಸುಮಾರಿನಲ್ಲಿ ಏರ್ಪೋರ್ಟ್ ಸರ್ವಿಸ್ ರಸ್ತೆಯಲ್ಲಿ ಬಂದು ಏರ್ಪೋರ್ಟ್ ಟೋಲ್ ಬಳಿ ಹೆದ್ದಾರಿ ರಸ್ತೆಗೆ ತಿರುವು ಪಡೆೆದುಕೊಳ್ಳುತ್ತಿದ್ದಂತೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
