ಹುಬ್ಬಳ್ಳಿ,ಏ.4- ವಾಣಿಜ್ಯ ನಗರಿಯಲ್ಲಿ ಲವ್ ಜಿಹಾದ್ ಆರೋಪ ಪ್ರಕರಣ ಸ್ಫೋಟಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಡೆಲ್ ಮಾಡುತ್ತೇನೆಂದು ಯುವತಿಯನ್ನು ಜಿಮ್ ತರಬೇತಿದಾರ ನಂಬಿಸಿ ತನ್ನ ಬಲೆಗೆ ಬೀಳಿಸಿಕೊಂಡಿರುವ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಜಿಮ್ ತರಬೇತಿದಾರ ಸಮೀರ್ ಎಂಬಾತ ಜಿಮ್‌ಗೆ ಬರುತ್ತಿದ್ದ ಯುವತಿ ಜೊತೆ ಸ್ನೇಹ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂಬ ಆರೋಪ ಕೇಳಿ ಬರುತ್ತಿದೆ.ತಮ ಮಗಳಿಗೆ ಆಮಿಷವೊಡ್ಡಿ ಮಾಡೆಲ್ ಮಾಡುತ್ತೇನೆಂದು ನಂಬಿಸಿ ಸಮೀರ್ ಜಿಮ್‌ಗೆ ಪ್ರತಿನಿತ್ಯ ಬರುವಂತೆ ಹೇಳಿ ಆತೀಯತೆ ಬೆಳೆಸಿ ಅದನ್ನೇ ಬಂಡವಾಳ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾನೆಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
ಯುವತಿಯನ್ನು ನಂಬಿಸಿ ಹೋಟೆಲ್‌ವೊಂದಕ್ಕೆ ಕರೆದೊಯ್ದು ತಂಪು ಪಾನಿಯದಲ್ಲಿ ಮತ್ತುಬರಿಸುವ ಔಷಧಿ ಬೆರಸಿ ಕೊಟ್ಟಿದ್ದಾನೆ. ಅದನ್ನು ಕುಡಿದು ಪ್ರಜ್ಞೆ ಕಳೆದುಕೊಂಡ ಯುವತಿಯ ಮೇಲೆ ಅತ್ಯಾಚಾರ ವೆಸಗಿದ್ದು, ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆಂಬ ಆರೋಪ ಕೇಳಿ ಬಂದಿದೆ.
ಯುವತಿ ಗರ್ಭಿಣಿಯಾಗಿರುವುದು ತಿಳಿದು ಆಕೆಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿದೆ ಎಂಬ ಬಲವಾದ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ವೈದ್ಯಕೀಯ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗರ್ಭಪಾತದ ಆರೋಪ ಕೇಳಿಬಂದಿರುವುದರಿಂದ ಪೊಲೀಸರು ಯುವತಿ ಹಾಗೂ ಜಿಮ್ ತರಬೇತಿದಾರ ಸಮೀರ್ ಇಬ್ಬರನ್ನು ಒಟ್ಟಿಗೆ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಈ ನಡುವೆ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಈ ಗಂಭೀರ ಆರೋಪದ ಬಗ್ಗೆ ಸಮೀರ್ ಪ್ರತಿಕ್ರಿಯಿಸಿ, ನಾನು ಯುವತಿಗೆ ಯಾವುದೇ ಔಷಧಿ ನೀಡಿಲ್ಲ ಎಂದು ವಾದಿಸಿದ್ದಾನೆ.ವಿಡಿಯೋ ರೆಕಾರ್ಡ್ ಆಗಿರುವುದು ನಿಜ. ಆದರೆ ಅದನ್ನು ನಾನು ಮಾಡಿಲ್ಲ. ಆ ಯುವತಿಯೇ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾಳೆ. ಅಂದು ಪ್ರಜ್ಞೆ ತಪ್ಪಿದ್ದು ನಾನೇ ಎಂದು ಹೇಳಿಕೆ ನೀಡಿದ್ದಾನೆ.
ಗರ್ಭಪಾತದ ಮಾತ್ರೆ ಕೊಟ್ಟಿದ್ದ ಸಮೀರ್!
ಯುವತಿ ಜೊತೆ ಲೈಂಗಿಕ ದೌರ್ಜನ್ಯ ವೆಸಗಿರುವ ಆರೋಪ ಕೇಳಿ ಬಂದಿರುವ ನಡುವೆಯೇ ಆಕೆಗೆ ಗರ್ಭಪಾತದ ಮಾತ್ರೆ ಕೊಟ್ಟಿರುವುದು ಬಯಲಾಗಿದೆ.ಯುವತಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಗರ್ಭಪಾತದ ಮಾತ್ರೆ ಕೊಡಿಸುತ್ತಿದ್ದ. ಮಾತ್ರೆ ತೆಗೆದುಕೊಳ್ಳಲು ಆಕೆ ನಿರಾಕರಿಸಿದಾಗ ಒತ್ತಡ ಹಾಕಿ ಬೆದರಿಸಿದ್ದಾನೆ. ಅಲ್ಲದೇ ಮಾತ್ರೆ ತೆಗೆದುಕೊಳ್ಳುವ ವಿಡಿಯೋ ಕಳುಹಿಸುವಂತೆ ಸಮೀರ್ ದಮ್ಕಿ ಹಾಕಿದ್ದ ಎಂಬುವುದು ಗೊತ್ತಾಗಿದೆ.
ಹಿಂದೂ ಯುವತಿಯರ ಜೊತೆ ವಾಟ್ಸಪ್ ಮಾಡಿರುವ ಚಾಟ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಒಟ್ಟಾರೆ ಈ ಪ್ರಕರಣದ ತನಿಖೆ ಕೈಗೊಂಡಿರುವ ವಿದ್ಯಾನಗರ ಠಾಣೆ ಪೊಲೀಸರು ಇಬ್ಬರ ಹೇಳಿಕೆಗಳು, ಪೋಷಕರ ದೂರನ್ನು ಪರಿಗಣಿಸಿ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಸಮೀರ್‌ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು -ತೀವ್ರ ತನಿಖೆ
ಹುಬ್ಬಳ್ಳಿ,ಏ.4- ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾದ ನಂತರ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಆರೋಪಿ ಸಮೀರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ. ಸ್ವತಃ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರೇ ಸಮೀರ್‌ನನ್ನು ವಿಚಾರಣೆ ಮಾಡಿದ್ದಾರೆ. ನಂತರ ಪೊಲೀಸ್ ಆಯುಕ್ತರು ಮಾಧ್ಯಮಕ್ಕೆ ಈ ಮಾಹಿತಿ ನೀಡಿದ್ದಾರೆ.
ಇನ್ನೂ ಯುವತಿ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ತಮನ ಕೃತ್ಯಕ್ಕೆ ಸಾಥ್ ನೀಡಿದ ಸಮೀರ್ ಸಹೋದರಿ ಮತ್ತು ಆತನ ಭಾವನನ್ನು ವಶಕ್ಕೆ ಪಡೆಯಲು ವಿದ್ಯಾನಗರ ಠಾಣೆ ಪೊಲೀಸರು ಮುಂದಾಗಿದ್ದಾರೆ. ಸಹೋದರಿ ತೈಸಿಮ್ ಮತ್ತು ಭಾವ ಲೂಕ್‌ನನ್ನು ಬಂಧಿಸುವ ಸಾಧ್ಯತೆಯಿದೆ.
