Thursday, April 16, 2026
Homeರಾಜ್ಯಹುಬ್ಬಳ್ಳಿಯಲ್ಲಿ ಲವ್‌ಜಿಹಾದ್‌ : 2 ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಬಂಧನ

ಹುಬ್ಬಳ್ಳಿಯಲ್ಲಿ ಲವ್‌ಜಿಹಾದ್‌ : 2 ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಬಂಧನ

Love Jihad in Hubballi: Two arrested in 2 separate cases

ಹುಬ್ಬಳ್ಳಿ,ಏ.5- ನಗರದಲ್ಲಿ ನಡೆದಿರುವ ಎರಡು ಲವ್‌ ಜಿಹಾದ್‌ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಶಶಿಕುಮಾರ್‌ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿನ್ನೆ ಯುವತಿಯೊಬ್ಬಳು ಕೇಶ್ವಾಪುರ ಪೊಲೀಸ್‌‍ ಠಾಣೆಗೆ ದೂರು ನೀಡಿ, ಪರಿಚಯವಾಗಿದ್ದ ಮುಫೀಸ್‌‍ ಮೊದಲು ಸ್ನೇಹಿತರಾಗ್ದೆಿವು ನಂತರ ನನ್ನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ ಎಂದು ತಿಳಿಸಿದ್ದಾಳೆ.

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌ ಪ್ರಕರಣ ಬೆಳಕಿಗೆ

ಈ ಬಗ್ಗೆ ಆತನ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಯುವತಿ ಮಾಡಿರುವ ಆರೋಪದ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಅದೇ ರೀತಿ ವಿದ್ಯಾನಗರ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಲವ್‌ ಜಿಹಾದ್‌ ಆರೋಪ ಪ್ರಕರಣದಲ್ಲಿ ಜಿಮ್‌ ತರಬೇತಿದಾರ ಸಮೀರ್‌ ಎಂಬಾತನ ಬಂಧನವಾಗಿದೆ. ಆತನನ್ನು ನಿನ್ನೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಇಂದು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.

RELATED ARTICLES

Latest News