Thursday, April 16, 2026
Homeರಾಜ್ಯಹುಬ್ಬಳ್ಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌ ಪ್ರಕರಣ ಬೆಳಕಿಗೆ

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌ ಪ್ರಕರಣ ಬೆಳಕಿಗೆ

Another love jihad case comes to light in Hubballi

ಹುಬ್ಬಳ್ಳಿ,ಏ.5-ಜಿಮ್‌ ತರಬೇತಿದಾರ ಸಮೀರ್‌ ಕರ್ಮಕಾಂಡದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಲವ್‌ ಜಿಹಾದ್‌ ಪ್ರಕರಣ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವಕ ಪ್ರೀತಿ-ಪ್ರೇಮದ ಹೆಸರಲ್ಲಿ ಹಿಂದೂ ಯುವತಿ ಮೇಲೆ ಅತ್ಯಾಚಾರ ವೆಸಗಿ ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್‌ ಮಾಡಿರುವ ಬಗ್ಗೆ ಕೇಶ್ವಾಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಐದು ವರ್ಷಗಳ ಹಿಂದೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ತ ಯುವತಿಗೆ ಕಾರ್ಯಕ್ರಮವೊಂದರಲ್ಲಿ ಅನ್ಯ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕಮರಿಪೇಟೆಯ ಗವಿ ಓಣಿ ನಿವಾಸಿ ಮುಫೀಸ್‌‍ ಮಿಯನ್ನವರ್‌ ತನ್ನ ಜಾತಿಯ ಯುವತಿಯ ಸಹಾಯದಿಂದ ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾನೆ.

ಈ ಪರಿಚಯ ಇವರಿಬ್ಬರ ಮಧ್ಯೆ ಸ್ನೇಹವಾಗಿದೆ. ಆ ಸ್ನೇಹವನ್ನು ಆತ ದುರುಪಯೋಗ ಪಡಿಸಿಕೊಂಡು ಯುವತಿಯೊಂದಿಗೆ ಸಲುಗೆ ಬೆಳೆಸಿಕೊಂಡು ಹಲವು ಕಡೆಗಳಲ್ಲಿ ಓಡಾಡಿದ್ದಾರೆ.
ಆ ಸಂದರ್ಭದಲ್ಲಿ ಗದಗ ರಸ್ತೆಯ ಸೇತುವೆಯೊಂದರ ಬಳಿ ಯುವತಿಯನ್ನು ಕರೆದೊಯ್ದು ವಿರೋಧದ ನಡುವೆಯೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದಲ್ಲದೇ, ವಿಡಿಯೋ ಮಾಡಿಕೊಂಡು ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಉಳಿಸುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದಾನೆ.

ಯುವತಿ ಮನೆಗೆ ಆತ ಆಗಾಗ್ಗೆ ಬಂದು ಹೋಗುತ್ತಿದ್ದ, ಆ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆ ಮೇಲೆ ಅತ್ಯಾಚಾರ ವೆಸಗಿದ್ದು, ಈ ವಿಷಯ ಬಾಯ್ಬಿಟ್ಟರೆ ನಿನ್ನ ತಂದೆ, ತಾಯಿಯನ್ನು ಸುಮನೆ ಬಿಡುವುದಿಲ್ಲ ಎಂದು ದಮ್ಕಿ ಹಾಕಿದ್ದಾನೆ.

2025 ರಲ್ಲಿ ಯುವತಿಗೆ ಬ್ಲಾಕ್‌ಮೇಲ್‌ ಮಾಡಿ ಧಾರವಾಡದಲ್ಲಿ ರಿಜಿಸ್ಟರ್‌ ಮದುವೆ ಆಗಲು ಆರೋಪಿ ಮುಫೀಸ್‌‍ ಸಿದ್ದತೆ ನಡೆಸಿದ್ದ, ಈ ವಿಷಯ ಯುವತಿ ಮನೆಯವರಿಗೆ ತಿಳಿದು ಮದುವೆ ನಿಲ್ಲಿಸಿದ್ದರು.

ಇಷ್ಟೆಲ್ಲಾ ತನಗೆ ಅನ್ಯಾಯವಾಗಿದೆ ಎಂದು ತಿಳಿದಿದ್ದರೂ ಯುವತಿ ಆತನ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ.ಇತ್ತೀಚೆಗೆ ಜಿಮ್‌ ತರಬೇತಿದಾರ ಸಮೀರ್‌ನಿಂದ ಯುವತಿಯೊಬ್ಬರಿಗೆ ಅನ್ಯಾಯವಾಗಿದೆ ಎಂಬ ವಿಚಾರ ಪ್ರಸಾರವಾಗುತ್ತಿದ್ದಂತೆ ಈಕೆಯೂ ಸಹ ಇದೀಗ ಧೈರ್ಯದಿಂದ ಹೊರಬಂದು ಆರೋಪಿ ಮುಫೀಸ್‌‍ ನಿಂದ ದೌರ್ಜನ್ಯವಾಗಿರುವ ಬಗ್ಗೆ ದೂರು ನೀಡಿದ್ದಾರೆ.

RELATED ARTICLES

Latest News