Thursday, April 16, 2026
Homeಅಂತಾರಾಷ್ಟ್ರೀಯಒಪ್ಪಂದಕ್ಕೆ ಬನ್ನಿ, ಇಲ್ಲವೇ ಶರಣಾಗಿ : ಇರಾನ್‌ಗೆ ಟ್ರಂಪ್‌ ಕೊನೆ ಎಚ್ಚರಿಕೆ

ಒಪ್ಪಂದಕ್ಕೆ ಬನ್ನಿ, ಇಲ್ಲವೇ ಶರಣಾಗಿ : ಇರಾನ್‌ಗೆ ಟ್ರಂಪ್‌ ಕೊನೆ ಎಚ್ಚರಿಕೆ

"Tuesday. 8 pm. Eastern Time": Trump's Latest After "Hell" Warning To Iran

ವಾಷಿಂಗ್ಟನ್‌, ಏ.6- ಒಪ್ಪಂದಕ್ಕೆ ಬನ್ನಿ ಇಲ್ಲವೇ ಶರಣಾಗಿ ಇಲ್ಲದಿದ್ದರೆ ನಾಳೆ ರಾತ್ರಿ ಮತ್ತಷ್ಟು ಮಾರಕ ದಾಳಿ ನಡೆಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಇರಾನ್‌ ಕೊನೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಈ ಬೆದರಿಕೆ ಇರಾನ್‌ನ ಇಂಧನ ಸೌಲಭ್ಯಗಳ ಮೇಲೆ ಪ್ರಮುಖ ದಾಳಿಯನ್ನು ನಡೆಸಬಹುದು ಎಂದು ಅಂದಾಜಿಸಲಾಗಿದೆ. ಈ ದಾಳಿಯಿಂದ ಇಡೀ ದೇಶದ ವಿದ್ಯುತ್‌ ಸರಬರಾಜಿನಲ್ಲಿ ಅಡ್ಡಿ ಉಂಟಾಗಬಹುದು ಎನ್ನುವ ಭಯ ಉಂಟಾಗಿದೆ.

ಮಾರ್ಚ್‌ 26 ರಂದು ಟ್ರಂಪ್‌ 10 ದಿನಗಳ ಅಂತಿಮ ಎಚ್ಚರಿಕೆ ನೀಡಿದ್ದರು. ನಂತರ, ಭಾನುವಾರ ಏಪ್ರಿಲ್‌ 4 ರಂದು, ಅವರು ಅಂತಿಮ 48 ಗಂಟೆಗಳ ಎಚ್ಚರಿಕೆಯನ್ನು ನೀಡಿದ್ದಾರೆ.ಹಾರ್ಮುಜ್‌ ಚೋಕ್‌ ಪಾಯಿಂಟ್‌‍, ಬುಶೆಹರ್‌ ಪರಮಾಣು ಸ್ಥಾವರ, ದಕ್ಷಿಣ ಪಾರ್ಸ್‌ ಅನಿಲ ಕ್ಷೇತ್ರ, ಖಾರ್ಕ್‌ ದ್ವೀಪದ ತೈಲ ಕೇಂದ್ರ, ಅಬದಾನ್‌ ಸಂಸ್ಕರಣಾಗಾರ, ಬಂದರ್‌ ಅಬ್ಬಾಸ್‌‍ ಸಂಸ್ಕರಣಾಗಾರ, ಇರಾನ್‌ನ ಬ್ಯಾಲಿಸ್ಟಿಕ್‌ ಕ್ಷಿಪಣಿ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಹೇಳಿದೆ.

ರಿಯಾದ್‌ ನಲ್ಲಿರುವ ಸಿಐಎ ಸ್ಟೇಷನ್‌ ಮೇಲೆ ಇರಾನ್‌ ದಾಳಿ ನಡೆಸಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಅಮೇರಿಕನ್‌ ರಾಜತಾಂತ್ರಿಕ ಪೋಸ್ಟ್‌ ಗಳಂತೆ ರಿಯಾದ್‌ನಲ್ಲಿರುವ ಅಮೇರಿಕನ್‌ ರಾಯಭಾರ ಕಚೇರಿಯು ತನ್ನದೇ ಆದ ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸುವುದಿಲ್ಲ.

ಒಂದೇ ನಿಮಿಷದ ಅಂತರದಲ್ಲಿ 2 ಡ್ರೋನ್‌ ದಾಳಿ ನಡೆಸಲಾಗಿದೆ. ಎರಡನೇ ಡ್ರೋನ್‌ ಮೊದಲ ದಾಳಿಯಿಂದ ಉಂಟಾದ ರಂಧ್ರದೊಳಗೆ ನೇರವಾಗಿ ನುಗ್ಗಿ ಸ್ಫೋಟಿಸಿತು. ದಾಳಿ ಮುಗಿಯುವಷ್ಟರಲ್ಲಿ ರಿಯಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೂರು ಮಹಡಿಗಳು ಗಂಭೀರವಾಗಿ ಹಾನಿಗೊಳಗಾಗಿದ್ದವು ಮತ್ತು ಅದರೊಳಗಿನ ಸಿಐಎ ಕಚೇರಿಗೂ ಹೊಡೆತ ಬಿದ್ದಿತ್ತು.

ಫೆಬ್ರವರಿ 28ರಂದು ಯುದ್ಧ ಆರಂಭವಾದ ನಂತರ, ಇರಾನ್‌ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ತನ್ನ ಅತಿ ವ್ಯಾಪಕ ದಾಳಿಗಳನ್ನು ನಡೆಸಿದೆ. ರಿಯಾದ್‌ ಮಾತ್ರವಲ್ಲ, ಬಾಗ್ದಾದ್‌‍, ದುಬೈ, ಕುವೈತ್‌ ಮತ್ತು ಇರಾಕ್‌ ಕುರ್ದಿಸ್ತಾನದ ಎರ್ಬಿಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳನ್ನೂ ಇರಾನಿಯನ್‌ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಗುರಿಯಾಗಿಸಿವೆ.

ಆ ದಾಳಿಗಳಲ್ಲಿ ಯಾವುದೂ ಅಮೆರಿಕನ್‌ ಸಾವುಗಳಿಗೆ ಕಾರಣವಾಗದಿದ್ದರೂ, ಈ ಪ್ರದೇಶದ ಅಮೆರಿಕ ನೆಲೆಗಳ ಮೇಲೆ ತೆಹ್ರಾನ್‌ ನಡೆಸಿದ ದಾಳಿಗಳು ಏಳು ಅಮೆರಿಕ ಸೈನಿಕರ ಸಾವಿಗೆ, ನೂರಾರು ಮಂದಿಯ ಗಾಯಗಳಿಗೆ ಕಾರಣವಾಗಿದ್ದು, ವಿಮಾನಗಳು ಮತ್ತು ರಕ್ಷಣಾ ಸಾಧನಗಳಿಗೆ ಕೋಟ್ಯಂತರ ಡಾಲರ್‌ ಮೌಲ್ಯದ ಹಾನಿಯನ್ನುಂಟುಮಾಡಿವೆ.

ಇನ್ನೊಂದೆಡೆ ಹಾರ್ಮುಜ್‌ ಜಲಸಂಧಿಯನ್ನು ಓಪನ್‌ ಮಾಡಲು ಇರಾನ್‌ಗೆ ನೀಡಿರುವ 48 ಗಂಟೆಗಳ ಗಡುವು ಸೋಮವಾರ ಅಂತ್ಯವಾಗುತ್ತಿದೆ. ಇದರ ಬೆನ್ನಲ್ಲೇ, ಇರಾನ್‌ಗೆ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌‍, ಪುನಃ ಇರಾನ್‌ಗೆ ಹೊಸ ಬೆದರಿಕೆ ಹಾಕಿ, ವಿದ್ಯುತ್‌ ಘಟಕಗಳು, ಪವರ್‌ ಪ್ಲಾಂಟ್‌ಗಳು ಮತ್ತು ದೇಶದ ಪ್ರಮುಖ ಸೇತುವೆಗಳನ್ನು ಏಕಕಾಲದಲ್ಲಿ ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಎಬಿಸಿ ನ್ಯೂಸ್‌‍ಗೆ ನೀಡಿದ ಸಂದರ್ಶನದಲ್ಲಿ, ಒಪ್ಪಂದ ಮಾಡಿಕೊಳ್ಳದಿದ್ದರೆ, ಅಮೆರಿಕ ಇಡೀ ದೇಶವನ್ನೇ ನಾಶಮಾಡಬಹುದು ಎಂದು ಟ್ರಂಪ್‌ ಹೇಳಿದ್ದಾರೆ. ವಿದ್ಯುತ್‌ ಸ್ಥಾವರಗಳು ಮತ್ತು ಸೇತುವೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಬಹುದು ಎಂದು ಅವರು ಸುಳಿವು ನೀಡಿದ್ದಾರೆ.

RELATED ARTICLES

Latest News