ದುಬೈ, ಏ. 6: ಇರಾನ್ನ ರಾಜಧಾನಿ ಟೆಹರಾನ್ ಸಮೀಪದ ದಕ್ಷಿಣ-ಪಶ್ಚಿಮ ಭಾಗದಲ್ಲಿರುವ ನಗರದಲ್ಲಿ ಇಂದು ಬೆಳಿಗೆ ನಡೆದ ಅಮೆರಿಕ ವಾಯುಪಡೆ ದಾಳಿಯಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಅರ್ಧ ಸರ್ಕಾರಿ ಸುದ್ದಿಸಂಸ್ಥೆಗಳ ಪ್ರಕಾರ ಈ ದಾಳಿ ಎಸ್ಲಾಮ್ಶಹರ್ ಸಮೀಪ ನಡೆದಿರುವುದಾಗಿ ತಿಳಿಸಿವೆ. ನಾಗರೀಕರ ವಾಸದಕಟ್ಟಡವನ್ನು ಏಕೆ ಗುರಿಯಾಗಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಬೆಳಗಿನ ದಾಳಿಗಳಿಗೆ ಅಮೆರಿಕ ಅಥವಾ ಇಸ್ರೇಲ್ ಯಾವುದು ಹೊಣೆ ಹೊತ್ತಿಲ್ಲ. ಆದರೆ, ಇರಾನ್ಗೆ ಹೋರ್ಮುಜ್ ಜಲಸಂಧಿಯನ್ನುಮತ್ತೆ ತೆರೆಯುವಂತೆ ಟಂಪ್ ಎಚ್ಚರಿಕೆ ನೀಡಿದ ನಂತರ ಈ ದಾಳಿಗಳು ನಡೆದಿವೆ.
ಇದಲ್ಲದೆ,ಶರೀಫ್ ತಾಂತ್ರಿಕ ಕಾಲೇಜಿನ ಮೇಲೆಯೂ ವಾಯುದಾಳಿ ನಡೆದಿದೆ. ವಿಶ್ವವಿದ್ಯಾಲಯದ ಕಟ್ಟಡಗಳು ಹಾಗೂ ಅದರ ಪಕ್ಕದಲ್ಲಿರುವ ನೈಸರ್ಗಿಕ ಅನಿಲ ವಿತರಣೆ ಕೇಂದ್ರಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಯುದ್ಧದ ಕಾರಣದಿಂದ ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳು ಆನ್ಲೈನ್
ತರಗತಿಗಳಿಗೆ ನಡೆಯುತ್ತಿರುವುದರಿಂದ, ವಿದ್ಯಾರ್ಥಿಗಳು ಅಲ್ಲಿ ಇರಲಿಲ್ಲ.ಈ ವಿಶ್ವವಿದ್ಯಾಲಯವು ಇರಾನ್ನ ಕ್ಷಿಪಣಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಗಳಲ್ಲಿ ತೊಡಗಿರುವ ಕಾರಣ ಹಲವು ದೇಶಗಳಿಂದ ನಿರ್ಬಂಧಗಳಿಗೆ ಒಳಪಟ್ಟಿದೆ.
ಈ ಕಾರ್ಯಕ್ರಮವನ್ನು ದೇಶದ ಪರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ನಿಯಂತ್ರಿಸುತ್ತದೆ.ಇದಲ್ಲದೆ, ನಗರದ ವಸತಿ ಪ್ರದೇಶದಲ್ಲಿಯೂ ನಡೆದ ಮತ್ತೊಂದು ವಾಯುದಾಳಿಯಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ. ಇರಾನ್ ಹಲವು ದಿನಗಳಿಂದ ಯುದ್ಧದಲ್ಲಿ ಸಂಭವಿಸಿದ ಒಟ್ಟು ಸಾವು-ನೋವುಗಳ ಬಗ್ಗೆ ಮಾಹಿತಿ ನೀಡಿಲ್ಲ. ಅದರ ಸೈನಿಕ ಹಾನಿಗಳ ಕುರಿತು ಸಹ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ.
