Tuesday, May 5, 2026
Homeರಾಷ್ಟ್ರೀಯರಾಷ್ಟ್ರಪತಿ ಭೇಟಿ ಮಾಡಿದ ಪಂಜಾಬ್‌ ಸಿಎಂ ಭಗವಂತ್‌ ಮಾನ್‌‍

ರಾಷ್ಟ್ರಪತಿ ಭೇಟಿ ಮಾಡಿದ ಪಂಜಾಬ್‌ ಸಿಎಂ ಭಗವಂತ್‌ ಮಾನ್‌‍

Punjab CM Bhagwant Mann Leaves for Delhi with MLAs, to Meet President

ಚಂಡೀಗಢ, ಮೇ 5: ನೇತೃತ್ವದ ಪಂಜಾಬ್‌ ಸರ್ಕಾರವು ಮಹತ್ವದ ರಾಜಕೀಯ ಬೆಳವಣಿಗೆಯ ನಡುವೆ ತುರ್ತು ಕ್ರಮಕ್ಕೆ ಮುಂದಾಗಿರುವ ಪಂಜಾಬ್‌ ಸಿಎಂ ಭಗವಂತ್‌ ಮಾನ್‌‍ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ.

ಆಮ್‌ಆದಿ ಪಕ್ಷದ ಏಳು ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆ, ಈ ವಿಚಾರವಾಗಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಲು ಸಿಎಂ ಮಾನ್‌ ಅವರು ಬೆಳಿಗ್ಗೆ ದೆಹಲಿಗೆ ತೆರಳಿದರು.

ಈ ಬೆಳವಣಿಗೆಯಿಂದ ಆಪ್‌ಗೆ ಭಾರೀ ಹಿನ್ನಡೆ ಉಂಟಾಗಿದ್ದು, ಪಕ್ಷದ 10 ರಾಜ್ಯಸಭಾ ಸದಸ್ಯರಲ್ಲಿ 7 ಮಂದಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಆರು ಮಂದಿ ಪಂಜಾಬ್‌ ಮೂಲದವರಾಗಿದ್ದಾರೆ.

ಇಂದು ಮಧ್ಯಾಹ್ನ ರಾಷ್ಟ್ರಪತಿಯನ್ನು ಮಾನ್‌ ಭೇಟಿ ಮಾಡುವ ನಿರೀಕ್ಷೆಯಿದೆ. “ಪಕ್ಷದ ಎಲ್ಲಾ ಶಾಸಕರು ಏಕತೆಯಿಂದ ನಮೊಂದಿಗಿದ್ದಾರೆ,” ಎಂದು ದೆಹಲಿಗೆ ತೆರಳುವ ಮುನ್ನ ಮಾನ್‌ ತಿಳಿಸಿದ್ದಾರೆ.

“ರಾಷ್ಟ್ರಪತಿ ಸಂವಿಧಾನದ ರಕ್ಷಕರು. ದೇಶದ ಸಂವಿಧಾನಾತ್ಮಕ ಮುಖ್ಯಸ್ಥರು,” ಎಂದು ಅವರು ಹೇಳಿದರು. ಪಂಜಾಬ್‌ ಹಕ್ಕುಗಳ ರಕ್ಷಣೆಗೆ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರ ನಡುವೆ, ಆಪ್‌ ಶಾಸಕರು ಮತ್ತು ಸಚಿವರು ಸಿಎಂ ನಿವಾಸದಲ್ಲಿ ಸೇರಿ ಪಕ್ಷ ತೊರೆದವರು ದೇಶದ್ರೋಹಿಗಳು ಫಲಕಗಳನ್ನು ಹಿಡಿದು ದೆಹಲಿಗೆ ಬಸ್‌‍ನಲ್ಲಿ ತೆರಳಿದರು.

ರಾಜ್ಯಸಭಾ ಅಧ್ಯಕ್ಷ ರಾಧಾಕೃಷ್ಣನ್‌ ಈ ಸಂಸದರ ಬಿಜೆಪಿ ಸೇರ್ಪಡೆಯನ್ನು ಅಧಿಕೃತವಾಗಿ ಅಂಗೀಕರಿಸಿದ್ದು, ಇದರೊಂದಿಗೆ ಆಪ್‌ ಪಕ್ಷದ ರಾಜ್ಯಸಭಾ ಬಲವು 10ರಿಂದ 3ಕ್ಕೆ ಇಳಿದಿದೆ.
ಪಕ್ಷದ ನಾಯಕರು ಈ ಘಟನೆಯನ್ನು “ಪಂಜಾಬ್‌ಗೆ ದ್ರೋಹ” ಎಂದು ಕರೆದಿದ್ದು, ರಾಜ್ಯದ ಜನರ ಹಕ್ಕುಗಳ ರಕ್ಷಣೆಗೆ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

RELATED ARTICLES

Latest News