ಕೊಲ್ಕತ್ತಾ, ಮೇ 5: ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಟಿಎಂಸಿ ಕಚೇರಿಗಳು ಧ್ವಂಸ ಹಾಗೂ ಅಗ್ನಿಸ್ಫೋಟದ ಘಟನೆಗಳು ವರದಿಯಾಗಿವೆ.ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಆಚರಣೆ ನಡೆಸುತ್ತಿರುವ ವೇಳೆ ಈ ಘಟನೆಗಳು ಸಂಭವಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಲಿಗಂಜ್, ಬರೂಇಪುರ್, ಕಾಮಾರಹಾಟಿ, ಬರಾನಗರ, ಬಹಾರಂಪುರ್,ಹೌರಾ ಮತ್ತು ಕಸ್ಬಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಧ್ಯಾಹ್ನದಿಂದಲೇ ಅಟ್ಟಹಾಸಿ ಗುಂಪುಗಳು ಟಿಎಂಸಿ ಕಚೇರಿಗಳನ್ನು ಧ್ವಂಸಗೊಳಿಸಿದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಲಿಗಂಜ್‌ನ ಬಿಜೋಯ್ಗಢ-ನೆತಾಜಿನಗರ ಪ್ರದೇಶದಲ್ಲಿ ಟಿಎಂಸಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಅರೂಪ್ ಅವರ ಚುನಾವಣಾ ಕಚೇರಿಯನ್ನು ಗುಂಪೊಂದು ಧ್ವಂಸಗೊಳಿಸಿದೆ. ಅಲ್ಲದೆ ಕೆಲವರು ಒಡೆದ ಹೋರ್ಡಿಂಗ್‌ಗಳನ್ನು ಕಾಲಿನಿಂದ ತಳ್ಳುತ್ತಿರುವುದು ಕಂಡುಬಂದಿತು.
ರೂಬಿ ಕ್ರಾಸಿಂಗ್ ಪ್ರದೇಶದಲ್ಲಿ ಟಿಎಂಸಿ ಕಾರ್ಪೊರೇಟರ್ ಸುಶಾಂತ್ ಘೋಷ್ ಅವರ ಕಚೇರಿಯನ್ನು ಹಾನಿಗೊಳಪಡಿಸಿದೆ.ಈ ಘಟನೆಗಳನ್ನು ಖಂಡಿಸಿರುವ ಟಿಎಂಸಿ, ಸಾಮಾಜಿಕ ಜಾಲತಾಣಅಧಿಕಾರಕ್ಕೆ ಬಂದ ತಕ್ಷಣವೇ ಬಿಜೆಪಿ ತನ್ನ ನಿಜಸ್ವರೂಪ ತೋರಿಸಿದೆಎಂದು ಆರೋಪಿಸಿದೆ.
