Thursday, April 16, 2026
Homeಅಂತಾರಾಷ್ಟ್ರೀಯವಿದ್ಯುತ್‌, ಮೂಲ ಸೌಕರ್ಯ ಸ್ಥಾವರಗಳ ಬಳಿ ಮಾನವ ಸರಪಳಿ ನಿರ್ಮಿಸಲು ಜನತೆಗೆ ಇರಾನ್‌ ಕರೆ

ವಿದ್ಯುತ್‌, ಮೂಲ ಸೌಕರ್ಯ ಸ್ಥಾವರಗಳ ಬಳಿ ಮಾನವ ಸರಪಳಿ ನಿರ್ಮಿಸಲು ಜನತೆಗೆ ಇರಾನ್‌ ಕರೆ

'Tuesday at 2pm': Iran plans human chains at power plants as Trump’s strike deadline looms

ಟೆಹ್ರಾನ್‌,ಏ.7- ಅಮೆರಿಕದ ದಾಳಿಯಿಂದ ತಪ್ಪಿಸಿಕೊಳ್ಳಲು ಇರಾನ್‌ ಹೊಸ ಪ್ಲಾನ್‌ ಕಂಡುಕೊಂಡಿದೆ. ದೇಶದಲ್ಲಿ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ನಿರ್ಮಿಸುವಂತೆ ಯುವ ಜನತೆಗೆ ಕರೆ ನೀಡಲಾಗಿದೆ.

ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ಇರಾನ್‌ನನ್ನು ಸರ್ವನಾಶ ಮಾಡುವುದಾಗಿ ಟ್ರಂಪ್‌ ಬೆದರಿಕೆ ಹಾಕಿ ಇಂದು ರಾತ್ರಿಯವರೆಗೆ ಡೆಡ್‌ಲೈನ್‌ ಕೂಡ ನೀಡಿದ್ದಾರೆ. ಟ್ರಂಪ್‌ ಗಡುವು ಸಮೀಪಿಸುತ್ತಿದ್ದಂತೆ ಇರಾನ್‌ ದೇಶದಲ್ಲಿರುವ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ನಿರ್ಮಿಸುವಂತೆ ಇಡೀ ದೇಶದ ಯುವ ಸಮೂಹಕ್ಕೆ ಇರಾನ್‌ ಕರೆ ಕೊಟ್ಟಿದೆ.

ಕ್ರೀಡಾಪಟುಗಳು, ಕಲಾವಿದರು, ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ ಇರುವ ಯುವಜನರು ಇಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಪ್ರಮುಖ ಇಂಧನ ಮೂಲ ಸೌಕರ್ಯಗಳು ಹಾಗೂ ವಿದ್ಯುತ್‌ ಸ್ಥಾವರಗಳ ಬಳಿ ಒಟ್ಟುಗೂಡುವಂತೆ ಇರಾನ್‌ನ ಯುವ ಕ್ರೀಡಾ ಸಚಿವಾಲಯ ಹೇಳಿದೆ.

ದೇಶದ ಯುವ ಸಮೂಹಕ್ಕೆ ಇರಾನ್‌ ಹೇಳಿರೋದೇನು?ಯುವಜನರ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹಲವು ವಿಶ್ವವಿದ್ಯಾಲಯದ ಯುವಜನರು, ಯುವ ಕಲಾವಿದರು ಹಾಗೂ ಯುವ ಸಂಘಟನೆಗಳು ದೇಶದ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ರಚಿಸುವಂತೆ ಪ್ರಸ್ತಾಪಿಸಿದ್ದಾರೆ. ಉಜ್ವಲ ಭವಿಷ್ಯಕ್ಕಾಗಿ ಇರಾನ್‌ ಯುವಕರ ಮಾನವ ಸರಪಳಿ ಘೋಷವಾಕ್ಯದಡಿ ಅಭಿಯಾನ ಆರಂಭಿಸಲಾಗುತ್ತಿದೆ.

ದೇಶದ ಏಕತೆ ಮತ್ತು ದೃಢನಿಶ್ಚಯ ಪ್ರತಿಬಿಂಬಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ದೇಶಾದ್ಯಂತ ಯುವಜನರ ಭಾಗವಹಿಸುವಿಕೆಯೊಂದಿಗೆ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ರಚನೆಯಾಗಲಿದೆ. ಇದು ಮೂಲ ಸೌಕರ್ಯವನ್ನು ರಕ್ಷಿಸುವ ಮತ್ತು ಇರಾನ್‌ ಉಜ್ವಲ ಭವಿಷ್ಯಕ್ಕಾಗಿ ಯುವಕರ ಬದ್ಧತೆಯನ್ನು ಸೂಚಿಸುವ ಸಂಕೇತವಾಗಲಿದೆ ಎಂದು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಉಪಮುಖ್ಯಸ್ಥ ಅಲಿರೆಜಾ ರಹೀಮಿ ಹೇಳಿದ್ದಾರೆ.

RELATED ARTICLES

Latest News