ಮರಾನಾ (ಅರಿಜೋನಾ), ಏ. 9 (ಎಪಿ) ಅರಿಜೋನಾದ ಸಣ್ಣ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ರನ್‌ವೇಯಿಂದ ಜಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ಮರಾನಾ ಮೇಯರ್ ಜಾನ್ ಪೋಸ್ಟ್ ಹೇಳಿದ್ದಾರೆ.
ವಿಮಾನದಲ್ಲಿ ಇಬ್ಬರು ಜನರಿದ್ದರು ಎಂದು ನಗರದ ವಕ್ತಾರ ವಿಕ್ ಹ್ಯಾಥ್‌ವೇ ಹೇಳಿದ್ದಾರೆ. ಅವರ ಗುರುತು ಪತ್ತೆಯಾಗಿಲ್ಲ. ಬೇರೆ ಯಾವುದೇ ಗಾಯಗಳು ವರದಿಯಾಗಿಲ್ಲ ಮತ್ತು ಬೇರೆ ಯಾವುದೇ ವಿಮಾನಗಳು ಭಾಗಿಯಾಗಿಲ್ಲ ಎಂದು ಮರಾನಾ ಪೊಲೀಸ್ ಇಲಾಖೆ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಪಘಾತದ ಕಾರಣದ ತನಿಖೆಯನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ವಹಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮರಾನಾ ಟಕ್ಸನ್‌ನಿಂದ ವಾಯುವ್ಯಕ್ಕೆ ಸುಮಾರು 32 ಕಿ.ಮೀ ದೂರದಲ್ಲಿದೆ.
