Thursday, April 16, 2026
Homeರಾಷ್ಟ್ರೀಯಮಹಿಳಾ ಮೀಸಲಾತಿ ಕಾಯ್ದೆ ಮಸೂದೆಗೆ ಕೇಂದ್ರ ಸಂಪುಟ ಸಮ್ಮತಿ

ಮಹಿಳಾ ಮೀಸಲಾತಿ ಕಾಯ್ದೆ ಮಸೂದೆಗೆ ಕೇಂದ್ರ ಸಂಪುಟ ಸಮ್ಮತಿ

Cabinet clears draft amendment Bill to implement women’s quota

ನವದೆಹಲಿ,ಏ.9- ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಕಾಯ್ದೆ ಮಸೂದೆಗಳನ್ನು ಮಂಡಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ.

ಈ ನಿಟ್ಟಿನಲ್ಲಿ ಏ.16ರಿಂದ 18ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದ್ದು, ಈ ವೇಳೆ ಸಂಬಂಧಿತ ನಾರಿ ಶಕ್ತಿ ವಂದನ್‌ ಅಧಿನಿಯಮ ( ಮಹಿಳಾ ಮೀಸಲಾತಿ ಕಾಯ್ದೆ ) ಜಾರಿಗೆ ತರಲು ಸರ್ಕಾರವು ಮುಂದಾಗಿದೆ. 2023ರಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಂಸತ್ತಿನ ಬಜೆಟ್‌ ಅಧಿವೇಶನವನ್ನು ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ. ಈ ವಿಶೇಷ ಅಧಿವೇಶನವು ಏ.16, 17 ಮತ್ತು 18ರಂದು ನಡೆಯಲಿದ್ದು, ಮಹಿಳಾ ಹಕ್ಕುಗಳ ಬಗ್ಗೆ ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ.

ಈ ಪ್ರಸ್ತಾವನೆಯು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಪ್ರಸ್ತುತ 543 ರಿಂದ 816ಕ್ಕೆ ಹೆಚ್ಚಿಸಲಿದ್ದು, 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಈ ಪ್ರಸ್ತಾವನೆಯು ಮೊದಲು ಆ ವರ್ಷ ನಡೆಯುವ ಲೋಕಸಭಾ ಚುನಾವಣೆಗಳು ಮತ್ತು ಕೆಲವು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಜಾರಿಗೆ ಬರಲಿದೆ. ಈ ಹಿಂದೆ ಮೀಸಲಾತಿ ಜಾರಿಯಾಗಬೇಕಾದರೆ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಕಡ್ಡಾಯವಾಗಿ ನಡೆಯಬೇಕಿತ್ತು.

ಆದರೆ ಈಗಿನ ಹೊಸ ತಿದ್ದುಪಡಿಯ ಪ್ರಕಾರ, ಈ ಮೀಸಲಾತಿಯನ್ನು ಜನಗಣತಿಯ ಪ್ರಕ್ರಿಯೆಯಿಂದ ಬೇರ್ಪಡಿಸಿ, 2029ರ ಲೋಕಸಭಾ ಚುನಾವಣೆಯಿಂದಲೇ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಸರ್ಕಾರವು ಈ ವಿಶೇಷ ಅಧಿವೇಶನದಲ್ಲಿ ಒಟ್ಟು ಮೂರು ಮಸೂದೆಗಳನ್ನು ಮಂಡಿಸಲಿದೆ. ಮೀಸಲಾತಿ ಅನುಷ್ಠಾನದಲ್ಲಿ ಎದುರಾಗುವ ತಾಂತ್ರಿಕ ತೊಂದರೆಗಳನ್ನು ನಿವಾರಿಸುವುದು,ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿ ನಂತರದ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು, ಮಸೂದೆಗೆ ಅಗತ್ಯವಿರುವ ತಿದ್ದುಪಡಿಗಳನ್ನು ತಂದು ಸರ್ವಾನುಮತದ ಅಂಗೀಕಾರ ಪಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

ಸದಸ್ಯ ಬಲದ ಹೆಚ್ಚಳ ಮತ್ತು ಮೀಸಲಾತಿ: ಮಹಿಳಾ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೆ ತರುವ ಸಲುವಾಗಿ ಶಾಸನಸಭೆಗಳ ಒಟ್ಟು ಸದಸ್ಯರ ಸಂಖ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಪ್ರಕ್ರಿಯೆಯ ಮೂಲಕ ಲೋಕಸಭೆಯ ಈಗಿರುವ 543 ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಏರಿಸುವ ಸಾಧ್ಯತೆಯಿದೆ. ಹೀಗೆ ಹೆಚ್ಚಳವಾಗುವ ಒಟ್ಟು ಸ್ಥಾನಗಳಲ್ಲಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಈ ಕ್ರಮದಿಂದಾಗಿ ಯಾವುದೇ ರಾಜ್ಯದ ಪ್ರಾತಿನಿಧ್ಯವು ಕಡಿಮೆಯಾಗುವುದಿಲ್ಲ ಎಂದು ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಮಂಡಿಸಲಾಗುವುದು. ಒಂದು 2023ರ ಮಹಿಳಾ ಮೀಸಲಾತಿ ಕಾಯ್ದೆಗೆ ಅಗತ್ಯವಿರುವ ತಿದ್ದುಪಡಿ ತರುವುದು, ಎರಡನೆಯದು ಕ್ಷೇತ್ರ ಮರುವಿಂಗಡಣಾ ಆಯೋಗವನ್ನು ಸ್ಥಾಪಿಸುವುದು. ಈ ಆಯೋಗವು ಜೂನ್‌ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದ್ದು, ಯಾವ ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಬೇಕು ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಲಿದೆ.

ಒಟ್ಟಾರೆಯಾಗಿ, ಈ ಕ್ರಮವು ಭಾರತೀಯ ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ಹೊಸ ಮೈಲಿಗಲ್ಲಾಗಲಿದೆ. ರಾಜ್ಯ ವಿಧಾನಸಭೆಗಳಲ್ಲಿ ಪ್ರಸ್ತುತ ಶೇಕಡಾ 9 ರಷ್ಟಿರುವ ಮಹಿಳಾ ಶಾಸಕರ ಸಂಖ್ಯೆ ಮತ್ತು ಲೋಕಸಭೆಯಲ್ಲಿರುವ ಶೇಕಡಾ 13 ರಷ್ಟಿರುವ ಮಹಿಳಾ ಸಂಸದರ ಸಂಖ್ಯೆಯು ಈ ಕಾಯ್ದೆಯ ಜಾರಿಯಿಂದ ಗಣನೀಯವಾಗಿ ಏರಿಕೆಯಾಗಲಿದೆ.
ಪ್ರತ್ಯೇಕ ಮಸೂದೆ

ರಾಜ್ಯ ಶಾಸಕಾಂಗ ಸಭೆಗಳಲ್ಲಿಯೂ ಸಹ ಅದೇ ಅನುಪಾತದಲ್ಲಿ ಸ್ಥಾನಗಳನ್ನು ಕಾಯ್ದಿರಿಸಲಾಗುವುದು. ಸರ್ಕಾರವು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಚಯಿಸುತ್ತದೆ, ಜೊತೆಗೆ ಸೀಟುಗಳನ್ನು ಹೊಸದಾಗಿ ನಿರ್ಧರಿಸಲು ಡಿಲಿಮಿಟೇಶನ್‌ ಕಾಯ್ದೆಯನ್ನು ತಿದ್ದುಪಡಿ ಮಾಡಲು ಪ್ರತ್ಯೇಕ ಸಾಮಾನ್ಯ ಮಸೂದೆಯನ್ನು ಪರಿಚಯಿಸುತ್ತದೆ. ಹೊಸ ಸ್ಥಾನಗಳನ್ನು 2027ರ ಜನಗಣತಿಯ ಬದಲಿಗೆ 2011 ರ ಜನಗಣತಿಯ ಆಧಾರದ ಮೇಲೆ ನಿರ್ಧರಿಸಬಹುದು. ಈ ಕಾನೂನು ರಾಜ್ಯ ಶಾಸಕಾಂಗಗಳು ಮತ್ತು ದೆಹಲಿ, ಜಮು ಮತ್ತು ಕಾಶೀರ ಮತ್ತು ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸುತ್ತದೆ.

ಉತ್ತರ ಪ್ರದೇಶದಲ್ಲಿ ಮಹಿಳಾ ಲೋಕಸಭಾ ಸ್ಥಾನಗಳು ಅತಿ ಹೆಚ್ಚು ಏರಿಕೆಯಾಗಲಿದ್ದು, 40 ಸ್ಥಾನಗಳು 80ರಿಂದ 120ಕ್ಕೆ ಏರಿಕೆಯಾಗಲಿವೆ. ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ 24 ಸ್ಥಾನಗಳು ಮೀಸಲಾಗಲಿದ್ದು, ಅದರ ಲೋಕಸಭಾ ಸ್ಥಾನಗಳು 48ರಿಂದ 72ಕ್ಕೆ ಏರಿಕೆಯಾಗಲಿವೆ.
ಬಿಹಾರದಲ್ಲಿ ಮಹಿಳಾ ಸ್ಥಾನಗಳ ಸಂಖ್ಯೆ 20 ಕ್ಕೆ ಹೆಚ್ಚಾಗಬಹುದು, ಇದರಿಂದಾಗಿ ಅಲ್ಲಿನ ಒಟ್ಟು ಸ್ಥಾನಗಳ ಸಂಖ್ಯೆ 40ರಿಂದ 60 ರವರೆಗೆ ಹೆಚ್ಚಾಗಬಹುದು. ಮಧ್ಯಪ್ರದೇಶದಲ್ಲಿ 15 ಮಹಿಳಾ ಮೀಸಲು ಸ್ಥಾನಗಳು ಹೆಚ್ಚಾಗಬಹುದು. ತಮಿಳುನಾಡಿನಲ್ಲಿ 20 ಮತ್ತು ದೆಹಲಿಯಲ್ಲಿ ನಾಲ್ಕು ಸ್ಥಾನಗಳು ಇರುತ್ತವೆ. ಜಾರ್ಖಂಡ್‌ನಲ್ಲಿ ಏಳು ಮಹಿಳಾ ಮೀಸಲು ಸ್ಥಾನಗಳು ಹೆಚ್ಚಾಗುವ ನಿರೀಕ್ಷೆಯಿದೆ.

ವಿಪಕ್ಷಗಳ ಒತ್ತಾಯ ಮತ್ತು ಕಾಂಗ್ರೆಸ್‌‍ ಪತ್ರ ಮತ್ತೊಂದೆಡೆ, ವಿಧಾನಸಭಾ ಚುನಾವಣೆಗಳ ನಂತರವೇ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌‍ ಸರ್ಕಾರಕ್ಕೆ ಪತ್ರ ಬರೆದಿತ್ತು. ಕಾಂಗ್ರೆಸ್‌‍ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯದಲ್ಲಿ ಎಲ್ಲಾ ಪಕ್ಷಗಳ ಅಭಿಪ್ರಾಯ ಪಡೆಯಲು ಱಸರ್ವಪಕ್ಷ ಸಭೆೞ ಕರೆಯುವಂತೆ ಆಗ್ರಹಿಸಿದ್ದಾರೆ. ಸರ್ಕಾರವು ನಿರಂಕುಶವಾಗಿ ವರ್ತಿಸುತ್ತಿಲ್ಲ ಮತ್ತು ಪ್ರತಿಪಕ್ಷಗಳ ಸಂಸದರನ್ನೂ ವಿಶ್ವಾಸಕ್ಕೆ ಪಡೆಯಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಮುಂದಿನ ಹಾದಿ ಏಪ್ರಿಲ್‌ 16ರಿಂದ ಆರಂಭವಾಗುವ ಅಧಿವೇಶನವು ಅತ್ಯಂತ ನಿರ್ಣಾಯಕವಾಗಿದ್ದು, 2029ರ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ಭಾರತದ ಸಂಸತ್ತು ಮತ್ತು ಶಾಸನಸಭೆಗಳ ಚಿತ್ರಣವೇ ಬದಲಾಗುವ ನಿರೀಕ್ಷೆಯಿದೆ.

RELATED ARTICLES

Latest News