Thursday, April 16, 2026
Homeರಾಷ್ಟ್ರೀಯಏ.15ರಿಂದ ಅಮರನಾಥ ಯಾತ್ರೆಗೆ ಬುಕಿಂಗ್‌ ಆರಂಭ

ಏ.15ರಿಂದ ಅಮರನಾಥ ಯಾತ್ರೆಗೆ ಬುಕಿಂಗ್‌ ಆರಂಭ

Amarnath Yatra 2026: Registration Opens April 15,

ನವದೆಹಲಿ, ಏ.11- ಇದೇ ಏ.15 ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್‌ ಪ್ರಾರಂಭವಾಗಲಿದ್ದು, ಯಾತ್ರಿಕರು ತಮ್ಮ ಲೈಸೆನ್‌್ಸಗಳನ್ನು ಪಡೆದುಕೊಳ್ಳಬಹುದಾಗಿದೆ.

ಶ್ರೀ ಅಮರನಾಥ ಯಾತ್ರಾ ಮಂಡಳಿಯು 550ಕ್ಕೂ ಹೆಚ್ಚು ಬ್ಯಾಂಕ್‌ಗಳಲ್ಲಿ ನೋಂದಣಿಗಳು ಲಭ್ಯವಿರುತ್ತವೆ ಎಂದು ಘೋಷಿಸಿದೆ. ಪ್ರತಿ ವರ್ಷ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ಪ್ರಕ್ರಿಯೆಯು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ.

13ರಿಂದ 70 ವರ್ಷ ವಯಸ್ಸಿನ ಯಾತ್ರಿಕರು ಮಾತ್ರ ನೋಂದಣಿಗೆ ಅರ್ಹರಾಗಿರುತ್ತಾರೆ ಎಂದು ಮಾರ್ಗಸೂಚಿಗಳು ತಿಳಿಸಿವೆ. 6 ವಾರಗಳಿಗಿಂತ ಹೆಚ್ಚು ಗರ್ಭಿಣಿಯರಿಗೆ ಸಹ ತೀರ್ಥಯಾತ್ರೆಯನ್ನು ಕೈಗೊಳ್ಳಲು ಅನುಮತಿ ಇಲ್ಲ. ಏಪ್ರಿಲ್‌ 15ರಿಂದ ದೇಶಾದ್ಯಂತ 550 ಕ್ಕೂ ಹೆಚ್ಚು ಅಧಿಕೃತ ಬ್ಯಾಂಕ್‌ ಶಾಖೆಗಳಲ್ಲಿ ಯಾತ್ರಿಕರು ಅಮರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳಬಹುದು.

ಆಧಾರ್‌ ಆಧಾರಿತ ಬಯೋಮೆಟ್ರಿಕ್‌ ದೃಢೀಕರಣವು ಎಲ್ಲಾ ಯಾತ್ರಿಕರಿಗೆ ಕಡ್ಡಾಯವಾಗಿರುತ್ತದೆ. ಈ ಹಂತವು ಸುರಕ್ಷತೆಯನ್ನು ಸುಧಾರಿಸುವ ಮತ್ತು ಪ್ರಯಾಣ ಕೈಗೊಳ್ಳುವ ಯಾತ್ರಿಕರ ನಿಖರವಾದ ದಾಖಲೆಗಳನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ. ಇದು ತುರ್ತು ಸಂದರ್ಭಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

RELATED ARTICLES

Latest News