ಹುಬ್ಬಳ್ಳಿ,ಏ.11-ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿದ್ದರಿಂದ ಮನನೊಂದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಉಣಕಲ್ನ ಸಿದ್ಧಕಲ್ಯಾಣ ನಗರದಲ್ಲಿ ನಡೆದಿದೆ. ಶ್ರಾವಣಿ ಮಾರುತಿ ಕಾಳೆ( 18) ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.77 ರಷ್ಟು ಅಂಕಗಳಿಸಿದ್ದರೂ ಸಹ, ತಾನು ಅಂದುಕೊಂಡ ಅಂಕ ಬಾರದ ಹಿನ್ನೆಲೆಯಲ್ಲಿ ಮನನೊಂದು ಆಕೆ ಆತಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಬ್ಬಳ್ಳಿ ವಿದ್ಯಾನಗರದ ಕನಕದಾಸ ಕಾಲೇಜಿನಲ್ಲಿ ಓದುತ್ತಿದ್ದ ಶ್ರಾವಣಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ರ್ಯಾಂಕ್ ನಿರೀಕ್ಷೆ ಇಟ್ಟುಕೊಂಡಿದ್ದಳು. ಆದರೆ ತಾನು ನಿರೀಕ್ಷೆ ಮಾಡಿದ ಲಿತಾಂಶ ಬಾರದಿದ್ದರಿಂದ ಆತಹತ್ಯೆಗೆ ಶರಣಾಗಿದ್ದಾಳೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮೃತ ವಿದ್ಯಾರ್ಥಿನಿ ಚಿಕ್ಕಪ್ಪ ಮಾರುತಿ ಮಾತನಾಡಿ, ನಮ ಮಗಳು ಶ್ರಾವಣಿ ತುಂಬಾ ಬುದ್ಧಿವಂತೆಯಾಗಿದ್ದಳು, 600 ಕ್ಕೆ 600 ಅಂಕ ತೆಗೆದುಕೊಳ್ಳುವ ಗುರಿ ಇಟ್ಟುಕೊಂಡಿದ್ದಳು. ಲಿತಾಂಶ ಸಹ ಚೆನ್ನಾಗಿ ಬಂದಿದೆ.
ಆದ್ರೆ ಅದು ಅವಳಿಗೆ ಸಮಾಧಾನ ತಂದಿಲ್ಲ, ಹೀಗಾಗಿ ಲಿತಾಂಶ ಬಂದ ಬಳಿಕ ಯಾರ ಜೊತೆಗೂ ಮಾತನಾಡದೆ ನೊಂದು ಆತಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಣ್ಣೀರು ಹಾಕಿದ್ದಾರೆ. ಅವರ ತಂದೆ ಆಟೋ ಓಡಿಸಿ ಜೀವನ ನಡೆಸುತ್ತಾರೆ. ಮನೆಯಲ್ಲಿ ಓದಲು ಆಗಲ್ಲ ಅಂತ ಅಜ್ಜಿ ತಾತ ಮನೆಯಲ್ಲಿ ಓದುತ್ತಿದ್ದಳು, ದಯವಿಟ್ಟು ಯಾವ ಮಕ್ಕಳು ಈ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಪಿಯುಸಿಯೇ ಜೀವನದಲ್ಲಿ ಅಂತಿಮವಲ್ಲ. ಭವಿಷ್ಯದಲ್ಲಿ ಎಲ್ಲಾ ಚೆನ್ನಾಗಿರುತ್ತೆ. ನಿಮ ದುಡುಕಿನ ನಿರ್ಧಾರ ತಂದೆ ತಾಯಿಗೆ ನರಕಯಾತನೆಗೆ ತಳ್ಳುತ್ತದೆ. ಕೈ ಮುಗಿದು ಕೇಳಿಕೊಳ್ಳುವೆ, ಯಾರೂ ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
