Thursday, April 16, 2026
Homeರಾಜಕೀಯರಾಜ್ಯಕ್ಕೆ ಹಿಡಿದಿರುವ ಗ್ರಹಣಗಳಿಗೆ ಮುಕ್ತಿಕೊಡಲು ನನಗೆ ಒಂದು ಅವಕಾಶ ಕೊಟ್ಟುನೋಡಿ : HDK

ರಾಜ್ಯಕ್ಕೆ ಹಿಡಿದಿರುವ ಗ್ರಹಣಗಳಿಗೆ ಮುಕ್ತಿಕೊಡಲು ನನಗೆ ಒಂದು ಅವಕಾಶ ಕೊಟ್ಟುನೋಡಿ : HDK

ಬೆಂಗಳೂರು, ಏ.11- ನಾಡಿನ ಜನತೆ ಮತ್ತು ಬೆಂಗಳೂರು ನಗರದ ನಾಗರೀಕರು ಒಂದು ಬಾರಿ ಅವಕಾಶ ಕೊಡಿ. ರಾಜ್ಯಕ್ಕೆ ಹಿಡಿದಿರುವ ಗ್ರಹಣಗಳಿಗೆ ಮುಕ್ತಿಕೊಡೊದಕ್ಕೆ ನನ್ನ ಪರೀಕ್ಷೆ ಮಾಡಿ ಎಂದು ಜೆಡಿಎಸ್ ರಾಜ್ಯಾದ್ಯಕ್ಷ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಕೋರಿದರು.


ಕೊಮ್ಮಘಟ್ಟದ ಬಳಿಯ ಮೈದಾನದಲ್ಲಿ ನಡೆದ ಜನತಾ ಸಮಾವೇಶ ಹಾಗೂ ಜೆಡಿಎಸ್ ಬೆಳ್ಳಿಹಬ್ಬದ ಸಂಭ್ರಮಾಚರಣೆ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ.‌ ಜೆಡಿಎಸ್ ಮೈತ್ರಿ ಸರ್ಕಾರ ಬಂದಾಗ ಗ್ರಹಣದಿಂದ ಮುಕ್ತಿ ಪಡೆಯಲಿದೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದು, ಸ್ವತಂತ್ರ ಸರ್ಕಾರ ನಡೆಸಲಿಲ್ಲ. ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ನಡೆಸಿದ್ದೆ ಎಂದರು.


ಇವತ್ತಿನ ಕಾರ್ಯಕ್ರಮ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ನಾವು ಶ್ರಮ ಪಟ್ಟರೆ ಯಾರಿಗೂ ಕಮ್ಮಿ ಇಲ್ಲ. ಪಕ್ಷದ ಸಂಘಟನೆ ಮಾಡಲು ತಯಾರಿದ್ದೇವೆ ಎಂಬ ಸಂದೇಶವನ್ನು ಕಾರ್ಯಕರ್ತರು ಕೊಟ್ಟಿದ್ದಾರೆ. ಜಿಬಿಎ ವ್ಯಾಪ್ತಿಯಲ್ಲಿ ಐವರಿಗೆ ನಾಯಕತ್ವ ಜವಾಬ್ದಾರಿ ಕೊಟ್ಟಿದ್ದೆವೆ.‌ನಾವು ಹಿಂದೆ ಮಾಡಿರುವ ಕಾರ್ಯಕ್ರಮಗಳು ಒಂದು ಭಾಗ. ಬೆಂಗಳೂರು ನಗರದ ದುಸ್ಥಿತಿ ಸರಿಪಡಿಸುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಜಿಬಿಎ ಚುನಾವಣೆ ಮಾಡಲಿದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಮಾವೇಶದ ಮೂಲಕ ನಮ್ಮ ಕಾರ್ಯಕರ್ತರು ಚುನಾವಣೆಗೆ ಸದೃಡವಾಗಬೇಕೆಂಬ ಸಂದೇಶ ಕೊಟ್ಟಿದ್ದಾರೆ. ಮೆಟ್ರೊ ರೈಲು ನಗರಕ್ಕೆ ಬರಲು ಅಂದು 19 ಕಿ.ಮೀ.ಉದ್ದ ಮೆಟ್ರೋ ರೈಲು ಯೋಜನೆಯ ಶಂಕುಸ್ಥಾಪನೆ ಆಗಿನ‌ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಿದ್ದೆ. ಫ್ಲೈಓವರ್, ಸುರಂಗ ರಸ್ತೆ ಮಾಡಲು ಯೋಜನೆ ರೂಪಿಸಲಾಗಿತ್ತು. ಈಗ ಸುರಂಗ ರಸ್ತೆಯ ಕನವರಿಕೆ ಮಾಡುತ್ತಿದ್ದಾರೆ. ಅಂದೆ ನಾನು ಕೋರಿಯಾ ಕಂಪನಿಯ ಜೊತೆ ನಾಲ್ಕು ಪಥದ ಸುರಂಗ ರಸ್ತೆಯ ಮಾಡಲು ಮುಂದಾಗಿದ್ದೆ ಎಂದು ಹೇಳಿದರು.


ಔಟರ್ ಪೆರಿಪೆರಲ್ ರಸ್ತೆಗೆ ಆಗ ಮೂರು ಸಾವಿರ ಕೊಟಿ ರೂ‌ ಖರ್ಚು ಅಗುತ್ತಿತ್ತು. ಈಗ 29 ಸಾವಿರ ಕೋಟಿ ರೂ. ಆಗುತ್ತದೆ ಎಂದು ಹೇಳುತ್ತಿದೆ ರಾಜ್ಯ ಸರ್ಕಾರ. ಬೆಂಗಳೂರಿನಲ್ಲಿ ಕಾವೇರಿ ನೀರು ಕುಡಿಯುತ್ತಿದ್ದರೆ ಅದಕ್ಕೆ ಕಾರಣ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು.
ಎಂದರು.


ಕೋಗಿಲು, ಥಣೀಸಂದ್ರ ಬಡಾವಣೆಯಲ್ಲಿ ಮನೆಗಳನ್ನು ಏಕಾಏಕಿ ಕೆಡವಿದರು. ಅಕ್ರಮಗಳ ಮೂಲಕ ಸುಳ್ಳು ದಾಖಲೆ ಸೃಷ್ಟಿ ಮಾಡಿ ಕಟ್ಟಿರುವ ದೊಡ್ಡ ದೊಡ್ಡ ಕಟ್ಟಡಗಳನ್ನ ಒಡೆಯೊಲ್ಲ. ಜನರು ಕಟ್ಟಿಕೊಂಡ ಮನೆಗಳನ್ನು ಹೊಡಿಯುತ್ತಾರೆ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚಳಿ, ಮಳೆಯಲ್ಲೂ ಹಲವಾರು ಗರ್ಭಿಣಿಯರು, ಹೆಣ್ಣುಮಕ್ಕಳು ಯಾಥನೆ ಪಟ್ಟು ಬುದುಕುತ್ತಿದ್ದರು. ಸರ್ಕಾರಕ್ಕೆ ಮುನಷ್ಯತ್ವ ಇದೆಯೇ? ಎಷ್ಟು ಜನರಿಗೆ ಮನೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.


ಅಧಿಕಾರಿಗಳ ಜೊತೆ ಶಾಮೀಲಾಗಿ ಸುಳ್ಳು ದಾಖಲೆ ಮಾಡಿದವರ ಮೇಲೆ ಕ್ರಮ ಇಲ್ಲ. ಇದಕ್ಕೆಲ್ಲಾ ಫುಲ್ ಸ್ಟಾಪ್ ಹಾಕಬೇಕಲ್ವೇ? ಪ್ರತಿನಿತ್ಯ ಗುಂಡಿಯ ಸಮಸ್ಯೆ ಹೆಚ್ಚಾಗಿದೆ. ಆಕಸ್ಮಿಕವಾಗಿ ಸಿಎಂ ಆಗಿದ್ದಾಗ 59 ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು.ಇಂಟರ್ ಕೋರ್ ರಿಂಗ್ ಮಾಡಲು‌ ತೀರ್ಮಾನ ಮಾಡಿದ್ದೆ. ಆದರೆ, ಮುಂದೆ ಬಂದ ಸರ್ಕಾರ ಯಾವುದೇ ತೀರ್ಮಾನ ಮಾಡಲಿಲ್ಲ ಎಂದು ಅವರು ಟೀಕಿಸಿದರು.

ಗ್ರಾಮೀಣಕ್ಕೆ ಸೀಮಿತವಲ್ಲ

ಬರೀ ಗ್ರಾಮೀಣಕ್ಕೆ ಮಾತ್ರ ಈ ಪಕ್ಷ ಸೀಮಿತವಾಗಿಲ್ಲ. ನಗರದಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ತಡೆ ಹಾಕೋದಕ್ಕೆ ಒಂದು ಅವಕಾಶ ಕೊಡಿ. ಬೆಂಗಳೂರಿನ ಮೂಲಭೂತ ಸೌಕರ್ಯಗಳ ಹೆಸರಲ್ಲಿ ಲೂಟಿ ಮಾಡಿದ್ದಾರೆ.‌ ಈ ಭಾಗದ ಶಾಸಕರೊಬ್ಬರು ಬಿಜೆಪಿ, ಕಾಂಗ್ರೆಸ್ ಹೋಗಿ ಬೇಕಾದರೂ ಚುನಾವಣೆ ನಿಲ್ಲುತ್ತೇನೆ ಅಂತಾರೆ. ಆದರೆ, ಜನತಾದಳ ಹೆಸರು ಹೇಳಿಲ್ಲ. ಏಕೆಂದರೆ ಜನತಾದಳ ಮಾರಾಟ ಪಕ್ಷ ಅಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಶಾಸಕ ಎಸ್. ಟಿ. ಸೋಮಶೇಖರ್ ಗೆ ಟಾಂಗ್ ಕೊಟ್ಟರು.


ಇಂತವರಿಗೆ ಅವಕಾಶ ಕೊಡುತ್ತೀರಾ? ಎಂದು ಪ್ರಶ್ನಿಸಿದ ಅವರು, ವಿಧಾನ ಪರಿಷತ್ ಸದಸ್ಯ ಜವರಾಯಿಗೌಡರಿಗೆ ಅಪಾರ್ಟ್ ಮೆಂಟ್ ನಿವಾಸಿಗಳಿಂದ ಸೋತಿದ್ದಾರೆ. ನಮ್ಮ ಕಾರ್ಯಕರ್ತರು ವಾರ್ಡ್ ಗಳಲ್ಲಿ ದಿನಕ್ಕೆ ಒಂದು ಗಂಟೆ ಶ್ರಮ ಹಾಕಿದರೆ, ಯಾರ ಮುಂದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಬರುವುದಿಲ್ಲ. ಸರ್ಕಾರವಿದ್ದರೂ ಅವರಿಂದ ಇಂತಹ ಸಮಾವೇಶ ಮಾಡಲು ಆಗಲ್ಲ ಎಂದು ಕಾಂಗ್ರೆಸ್ ನವರಿಗೆ ತಿರುಗೇಟು ಕೊಟ್ಟರು.

ನಾಡಿನ ಆರುವರೆ ಕೋಟಿ ಜನರ ಆಶೀರ್ವಾದದಿಂದ ನಾನು ಸಿಎಂ ಆಗಲಿಲ್ಲ. ನಾನು ಕೇಂದ್ರದ ಜೊತೆ ಜಗಳ ಆಡಲಿಲ್ಲ. ಆದರೂ ರೈತರ ಸಾಲ ಮನ್ನಾ ಮಾಡಿದ್ದೆ. ನಾನು ಬೆಂಗಳೂರಿನಲ್ಲಿ ಇದ್ದರೆ ಮುಖ್ಯಮಂತ್ರಿಯವರೆ, ಕಾಂಗ್ರೆಸ್ ಮಿತ್ರರೆ, ನಮ್ಮ ಮನೆಗೆ ಸೂಟು ಬೂಟು ಹಾಕಿಕೊಂಡು ಬರೊದಿಲ್ಲ. ಹಲವಾರು ಸಮಸ್ಯೆಗಳನ್ನು ಹೊತ್ತು ಬರುತ್ತಾರೆ. ಕಿಡ್ನಿ, ಹಾರ್ಟ್ ಹಟ್ಯಾಕ್ ಆದವರನ್ನು ನಿಮ್ಮ ಎರಡು ಸಾವಿರ ರೂ.ಬದುಕಿಸೊಲ್ಲಾ ಎಂದು ಟೀಕಿಸಿದರು.
ನಾನು ಬಡವರ ನಾಯಕ ಅಂತಾರೆ. ಸರ್ಕಾರಿ ಶಾಲೆಗಳನ್ನು ಹಂತಹಂತವಾಗಿ ಮುಚ್ಚುತ್ತಿದ್ದಾರೆ. 7೦ ಸಾವಿರ ಶಿಕ್ಷಕರ ಕೊರತೆ ಇದೆ. ಧಾರವಾಡದಲ್ಲಿ ಯುವಕರು ಧರಣಿ ಮಾಡಿದ ನಂತರ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಿರಾ? ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಜಾರಿ ಮಾಡಲಿಲ್ಲ ಎಂದು ನನ್ನ ಮೇಲೆ ಅಪಾದನೆ ಮಾಡಿದ ಸಿದ್ದರಾಮಯ್ಯ ಅವರು, ಇಲ್ಲಿವರೆಗೆ ಅದನ್ನು ಏಕೆ ಜಾರಿಗೆ ತಂದಿಲ್ಲಾ? ಹೆದರಿಕೆ ಶುರುವಾಗಿದೆಯೇ ಸಿದ್ದರಾಮಯ್ಯನವರೇ? ಹೆಚ್ ಎಂಟಿ ಕಾರ್ಖಾನೆಗೆ ಜೀವ ಕೊಡಲು ಹೋದರೇ, ಅರಣ್ಯ ಇಲಾಖೆಗೆ ಭೂಮಿ ಸೇರಿದ್ದು ಅಂತ ಕೋರ್ಟ್ ಗೆ ಹೋಗಿದ್ದೀರಿ. ಕುದುರೆಮುಖದಲ್ಲೂ ತಕರಾರು ತೆಗೆದು ಕೆಲಸ ಮಾಡಿಸೋಕೆ ಬಿಡಲಿಲ್ಲಾ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಸದ ಸಮಸ್ಯೆ ವೈಜ್ಞಾನಿಕವಾಗಿ ಯಾಕೆ ಸರಿ ಮಾಡುತ್ತಿಲ್ಲಾ? ನಾನು ಸಿಎಂ ಅದಾಗ ಈ ಸಮಸ್ಯೆ ಪರಿಹಾರ ಮಾಡಲು ಬಿಡಲಿಲ್ಲಾ. ನರ್ಮ್ ಯೋಜನೆಯಲ್ಲಿ 25 ಸಾವಿರ ಕೋಟಿ ರೂ.ಅನುದಾನ ತಂದೆ. ಆಂದ್ರದಲ್ಲಿ ಮಾಡಿರುವ ಅಭಿವೃದ್ಧಿ ಬಗ್ಗೆ ಈಗ ಮಾತನಾಡುವುದಿಲ್ಲ. ಗ್ಯಾರಂಟಿ ಬಗ್ಗೆ ಚರ್ಚೆ ಮಾಡಿದರೆ ನಗೆಪಾಟಲು. ಬೆಂಗಳೂರು ಅಭಿವೃದ್ಧಿಗಾಗಿ ಕಾರ್ಯಕ್ರಮ ತರಲು ಜೆಡಿಎಸ್ ಸಿದ್ಧವಾಗಿದೆ. ಜಿಬಿಎ ಚುನಾವಣೆಗೆ ಸಿದ್ದರಾಗಿ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ನಾವು ಮೈತ್ರಿಯಲ್ಲಿ ಇದ್ದೇವೆ. ಅದರ ನಿರ್ಣಯಗಳನ್ನು ನನಗೆ ಬಿಡಿ. ನಿಮಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ.ಆದರೆ, ಶಕ್ತಿ ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಕಾರ್ಯಕರ್ತರಿಗೆ ಅವರು ಕಿವಿ‌ಮಾತು ಹೇಳಿದರು.

ಆರ್ಥಿಕ‌ ನೆರವು :

ಗ್ಯಾಸ್ ಸಮಸ್ಯೆಯಿಂದ ಆಟೋ ಚಾಲಕರು ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ಕ್ಷೇತ್ರದ ಪಕ್ಷದ ಮುಖಂಡ ಪುನೀತ್ ಗೌಡ ಅವರು 950 ಚಾಲಕರಿಗೆ ತಲಾ 5 ಸಾವಿರ ರೂ. ಆರ್ಥಿಕ ನೆರವು ನೀಡಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಅವರು 10 ಚಾಲಕರಿಗೆ ಸಾಂಕೇತಿಕ ಐದು ಸಾವಿರ ರೂ. ಚೆಕ್ ನೀಡಿದರು.

RELATED ARTICLES

Latest News