Thursday, April 16, 2026
Homeಮನರಂಜನೆಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ

Veteran singer Asha Bhosle hospitalised; doctor treating her shares health update

ಮುಂಬೈ,ಏ.12- ಸುಮಾರು ಎಂಟು ದಶಕಕ್ಕೂ ಹೆಚ್ಚು ಕಾಲ ತಮ ಸುಮಧುರ ಕಂಠದ ಮೂಲಕ ಭಾರತ ಮಾತ್ರವಲ್ಲದೆ ದೇಶ- ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿ ಸಂಗೀತ ಲೋಕದ ಮಹಾನ್‌ ಸಾಮ್ರಾಜ್ಞ ಎನಿಸಿದ್ದ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತೆ ಆಶಾ ಬೋಂಸ್ಲೆ(92) ಇನ್ನು ನೆನಪು ಮಾತ್ರ!

ಶನಿವಾರ ಲಘು ಹೃದಯಾಘಾತ ಹಾಗೂ ಬಹು ಅಂಗಾಂಗ ವೈಪಲ್ಯದಿಂದ ಇಲ್ಲಿನ ಬೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಪ್ರೀತಿಯ ಗಾಯಕಿ ಆಶಾ ಭೋಂಸ್ಲೆ ನಿಧನರಾದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ಪ್ರತೀತ್‌ ಸಮದಾನಿ ತಿಳಿಸಿದ್ದಾರೆ.

ಆಶಾ ಬೋಸ್ಲೆ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ರಾಧಾಕೃಷ್ಣನ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.ಎಂಟು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದೊಂದಿಗೆ, ಆಶಾ ಭೋಂಸ್ಲೆ ತಮ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದರು.

ಪ್ರಣಯ ಗೀತೆಗಳಿಂದ ಹಿಡಿದು ಗಜಲ್‌ಗಳವರೆಗೆ ಮತ್ತು ಉತ್ಸಾಹಭರಿತ ಹಾಡುಗಳವರೆಗೆ ಅನೇಕ ಸರಣೀಯ ಮಧುರ ಹಾಡುಗಳನ್ನು ಹಾಡಿದ್ದರು. ದೀನನಾಥ ಮಂಗೇಶ್ಕರ್‌ ಅವರ ಮಗಳಾಗಿ ಅಕ್ಕ ಲತಾ ಮಂಗೇಶ್ಕರ್‌ ಜೊತೆಯಲ್ಲಿ ಸಿನಿಮಾದಲ್ಲಿ ಒಂದಷ್ಟು ಅಭಿನಯ ಮತ್ತು ಗಾಯನಗಳಲ್ಲಿ ಚಿಕ್ಕಂದಿನಲ್ಲೇ ಆಶಾ ತೊಡಗಿಕೊಂಡಿದ್ದರು. ಬದುಕಿನಲ್ಲಿ ಕವಿದ ಹಲವು ಕಾರ್ಮೋಡಗಳ ಹಿನ್ನೆಲೆಯಲ್ಲಿ ಆಶಾ ಅವರು ತಮ ಆಶಯಗಳಿಗಾಗಿ ಸಂಗೀತವನ್ನೇ ಸಂಗಾತಿಯನ್ನಾಗಿ ಮಾಡಿಕೊಂಡು ಮುಂದುವರೆದಿದ್ದರು.

ಅಂದು ಅಕ್ಕ ಲತಾ ಮಂಗೇಶ್ಕರ್‌ ಅವರಿಗಿದ್ದ ಅಸಾಮಾನ್ಯ ಪ್ರತಿಭೆ ಮತ್ತು ಬೇಡಿಕೆಗಳ ದೆಸೆಯಿಂದ ಮತ್ತು ಆಶಾ ಅವರ ಧ್ವನಿಯಲ್ಲಿ ಕೆಲವೊಂದು ಸಂಗೀತ ನಿರ್ದೇಶಕರು ಪಡೆದಿದ್ದ ಮಾದಕತೆಯ ಬೆರೆತ ಹಾಡುಗಳಿಗಾಗಿನ ಯಶಸ್ಸು, ಅವರ ಪ್ರತಿಭೆಯನ್ನು ಬಹಳಷ್ಟು ಕಾಲ ಮಾದಕ ನೃತ್ಯಕ್ಕೆ ಪೂರಕವಾದಂತಹ ಹಾಡುಗಳಿಗೇ ಸೀಮಿತಗೊಳಿಸಿಬಿಟ್ಟಿತ್ತು.

ವಿ. ಶಾಂತಾರಾಂ ಅವರ ನವರಂಗ್‌ ಅಂತಹ ಚಿತ್ರದಲ್ಲಿ ಮಹೇಂದ್ರ ಕುಮಾರ್‌ ಅವರೊಂದಿಗೆ ಹಾಡಿದಂತಹ ಸುಶ್ರಾವ್ಯ ಗೀತೆ ಆದಾ ಹೈ ಚಂದ್ರಮಾದಂತಹ ಗೀತೆಗಳಿಗೆ ಹೆಚ್ಚು ಪ್ರಚಾರ ಸಿಗದೇ ಇದ್ದದ್ದು ಕೂಡಾ ಅಚ್ಚರಿಯ ವಿಷಯವೇ!

ನಂತರದ ದಿನಗಳಲ್ಲಿ ಸಜ್ಜದ್‌ ಹುಸೇನ್‌, ಓ ಪಿ ನಯ್ಯರ್‌ ಮುಂತಾದ ಸಂಗೀತ ನಿರ್ದೇಶಕರು ಆಶಾ ಅವರಿಗೆ ಪೊರೀತ್ಸಾಹ ನೀಡಿದರು. ಮುಂದೆ ತೀಸ್ರಿ ಮಂಜಿಲ್‌ ಚಿತ್ರದ ಆಜಾ ಆಜಾ ಮೈ ಹೂಂ ಪ್ಯಾರ್‌ ತೆರಾ ಹಾಡು ಆಶಾ ಅವರಿಗೆ ಬಹಳಷ್ಟು ಪ್ರಖ್ಯಾತಿ ತಂದುಕೊಟ್ಟಿತು. ಮುಂದೆ ಆಶಾ ಅವರಿಗೆ ಜೀವನ ಸಂಗಾತಿಯೂ ಆದ ಆರ್‌. ಡಿ. ಬರ್ಮನ್‌ ಅವರಿಗೆ ಮೊದಲ ಗಣನೀಯ ಯಶಸ್ಸು ದೊರೆತದ್ದೂ ತೀಸ್ರೀ ಮಂಜಿಲ್‌ ಚಿತ್ರದಲ್ಲೇ.

ಆ ಚಿತ್ರದ ಓ ಹಸೀನಾ ಝುಲ್ಫೋನ್ವಾಲಿ ಮತ್ತು ಓ ಮೇರ ಸೋನಾ ರೆ ಹಾಡುಗಳು ಅತ್ಯಂತ ಜನಪ್ರಿಯವಾದವು. ಕ್ಯಾರವಾನ್‌ ಚಿತ್ರದ ಪಿಯಾ ತೂ ಅಬ್‌ ತೊ ಆಜಾ, ಡಾನ್‌ ಚಿತ್ರದ ಏ ಮೆರಾ ದಿಲ್‌, ಯಾದೋಂ ಕಿ ಬಾರಾತ್‌ ಚಿತ್ರದ ಚುರಾಲಿಯಾ ಹೈ ತುಮ್‌ ನೆ ಜೋ ದಿಲ್‌ ಕೊ ಶಿಖಾರ್‌ೞ ಚಿತ್ರದ ಪರ್ದೆ ಮೆ ರೆಹನೆ ದೋ ಮುಂತಾದ ಹಲವಾರು ಹಾಡುಗಳು ಆಶಾ ಅವರನ್ನು ಅತ್ಯಂತ ಜನಪ್ರಿಯವಾಗಿಸಿದವು.

ಉಮ್ರಾನ್‌ ಜಾನ್‌ ಚಿತ್ರದ ಅಭಿನಯಕ್ಕೆ ರೇಖಾ ರಾಷ್ಟ್ರೀಯ ಪ್ರಶಸ್ತಿ ಪಡೆದರೆ, ಆಶಾ ಅವರು ದಿಲ್‌ ಚೀಜ್‌ ಕ್ಯಾ ಹೈ ಆಪ್‌ ಮೇರಿ ಜಾನ್‌ ಲಿಜೀಯೆ ಹಾಡಿಗೆ ತಮ ಮೊಟ್ಟ ಮೊದಲ ರಾಷ್ಟ್ರಪ್ರಶಸ್ತಿ ಗಳಿಸಿಕೊಂಡರು. ಕೆಲವು ವರ್ಷಗಳ ನಂತರ, ಇಜಾಝತ್‌ ಚಿತ್ರದ ೞಮೇರಾ ಕುಚ್‌ ಸಮಾನ್‌ ಹಾಡಿಗಾಗಿ ಅವರು ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು.

ಆಶಾ ತಮ 62ನೇ ವಯಸ್ಸಿನಲ್ಲಿ ಹಾಡಿದ ರಂಗೀಲಾ ಚಿತ್ರದ ತನ್ಹಾ ತನ್ಹಾ, ರಂಗೀಲಾರೆ ಗೀತೆಗಳು ಸಂಗೀತಪ್ರಿಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದವು. ಅವರು ತಮ 72ನೇ ವಯಸ್ಸಿನಲ್ಲಿ ಹಾಡಿದ ತಮಿಳು ಚಿತ್ರ ಚಂದ್ರಮುಖಿ ಚಿತ್ರದ ಹಾಡುಗಳು ಮತ್ತು ಇತ್ತೀಚಿನ ವರ್ಷದಲ್ಲಿ ಯಶಸ್ಸು ಕಂಡ ಲಕ್ಕಿ ಚಿತ್ರಕ್ಕಾಗಿ ಹಾಡಿದ ಪಾಪ್‌ ಗಾಯನಗಳು ಅತ್ಯಂತ ಹೆಚ್ಚಿನ ಮಾರಾಟ ಕಂಡ ಧ್ವನಿಮುದ್ರಣಗಳಾಗಿವೆ.

ಇಂದು ಆಶಾ ಬೋಂಸ್ಲೆ ಅವರು ಹಾಡದ ಸಂಗೀತ ವಿಭಾಗವಿಲ್ಲ ಮತ್ತು ಧ್ವನಿ ಹೊರಡಿಸದೆ ಇರುವ ಭಾಷೆಗಳೂ ಇಲ್ಲ. ಅವರು ದಾಟದ ಸಂಗೀತದ ಗಡಿಗಳೇ ಇಲ್ಲ. ಕನ್ನಡದ ಬಂಗಾರದ ಮನುಷ್ಯ ಮತ್ತು ಮತ್ತೆ ಮುಂಗಾರು ಅಂತಹ ಚಿತ್ರಗಳಿಗೆ ಅವರು ಅಲ್ಲಲ್ಲಿ ಧ್ವನಿ ನೀಡಿದ್ದಿದೆ.ಭಾರತ ಸರ್ಕಾರದ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ, ಪದವಿಭೂಷಣ, ಏಷ್ಯಾದ ಕೋಗಿಲೆ, ಗ್ರಾಮಿ ಪ್ರಶಸ್ತಿಗಳಿಗೆ ಸಂದ ಹಲವು ನಾಮನಿರ್ದೇಶಗಳು ಹೀಗೆ ವಿಶ್ವದಾದ್ಯಂತದ ಹಲವು ರೀತಿಯ ಪ್ರತಿಷ್ಠಿತ ಗೌರವಗಳು ಅವರನ್ನು ಕೂಗಿ ಕರೆದಿದ್ದವು.

2009ರ ವರ್ಷದಲ್ಲಿ ವರ್ಲ್ಡ್ ರೆಕಾರ್ಡ್‌ ಅಕಾಡೆಮಿ ಮತ್ತು 2011ರ ವರ್ಷದಲ್ಲಿ ಗಿನ್ನಿಸ್‌‍ ವಿಶ್ವ ದಾಖಲೆ ಸಂಸ್ಥೆಗಳು ಇದುವರೆವಿಗೂ ಅತ್ಯಂತ ಹೆಚ್ಚು ಧ್ವನಿಮುದ್ರಿತ ಗೀತೆಗಳಿಗೆ ಧ್ವನಿ ನೀಡಿರುವವರು ಆಶಾ ಬೋಂಸ್ಲೆ ಎಂದು ಘೋಷಿಸಿತ್ತು.

ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಅಭಿ ನಾ ಜಾವೋ ಛೋಡ್‌ ಕರ್‌, ಇನ್‌ ಆಂಖೋನ್‌ ಕಿ ಮಸ್ತಿ, ದಿಲ್‌ ಚೀಜ್‌ ಕ್ಯಾ ಹೈ, ಪಿಯಾ ತು ಅಬ್‌ ತೊ ಆಜಾ, ದುನಿಯಾ ಮೇ ಲೋಗೋನ್‌ ಕೋ ಮತ್ತು ಝರಾ ಸೆ ಜೂಮ್‌ ಲೂನ್‌ ಮೈ ಸೇರಿವೆ.

ಭೋಶ್ಲೆ ವಿವಿಧ ಭಾರತೀಯ ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್‌ ಮಾಡಿದ್ದಾರೆ ಮತ್ತು ಮೀನಾ ಕುಮಾರಿ, ಮಧುಬಾಲಾ, ಜೀನತ್‌ ಅಮನ್‌ ಅವರಿಂದ ಕಾಜೋಲ್‌, ಊರ್ಮಿಳಾ ಮಾತೋಂಡ್ಕರ್‌ ವರೆಗೆ ಅನೇಕ ಪ್ರಮುಖ ಮಹಿಳೆಯರಿಗೆ ಮತ್ತು ಪದಿನಿ ಮತ್ತು ವೈಜಯಂತಿ ಮಾಲಾ ಅವರಂತಹ ದಕ್ಷಿಣ ನಟಿಯರಿಗೆ ಧ್ವನಿಯಾಗಿದ್ದರು. 2023ರಲ್ಲಿ ಅವರು ತಮ 90ನೇ ಹುಟ್ಟುಹಬ್ಬವನ್ನು ಆಚರಿಸಲು ದುಬೈನಲ್ಲಿ ನಡೆದ ವಿಶೇಷ ಸಂಗೀತ ಕಚೇರಿ ಆಶಾ 90: ಲೈವ್‌ ಇನ್‌ ಕಾನ್ಸರ್ಟ್‌ನಲ್ಲಿ ಪ್ರದರ್ಶನ ನೀಡಿದ್ದರು.

RELATED ARTICLES

Latest News